ಆನೇಕಲ್: ಗಣೇಶ ಮೂರ್ತಿ ವಿಸರ್ಜನೆ ಮಾಡಿ ಬರುವಾಗ ಗಲಾಟೆ; ಚಿನ್ನಯ್ಯನಪಾಳ್ಯ, ಸಿದ್ದನಪಾಳ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ

| Updated By: Rakesh Nayak Manchi

Updated on: Sep 23, 2023 | 10:12 PM

ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿ ವಾಪಸ್ ಆಗುತ್ತಿದ್ದ ವೇಳೆ ಆನೇಕಲ್ ತಾಲೂಕಿನ ಚಿನ್ನಯ್ಯನ ಪಾಳ್ಯ ಹಾಗೂ ಸಿದ್ದನಪಾಳ್ಯ ಗ್ರಾಮಗಳ ಜನರ ನಡುವೆ ಗಲಾಟೆ ನಡೆದಿದೆ. ದೊಣ್ಣೆಗಳನ್ನ ಹಿಡಿದು ಪರಸ್ಪರ ಬಡಿದಾಡಿಕೊಳ್ಳಲಾಗಿದ್ದು, ಹಲವರಿಗೆ ಗಾಯಗಳಾಗಿವೆ. ಸದ್ಯ ಎರಡೂ ಗ್ರಾಮಗಳಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಆನೇಕಲ್: ಗಣೇಶ ಮೂರ್ತಿ ವಿಸರ್ಜನೆ ಮಾಡಿ ಬರುವಾಗ ಗಲಾಟೆ; ಚಿನ್ನಯ್ಯನಪಾಳ್ಯ, ಸಿದ್ದನಪಾಳ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ
ಗಲಾಟೆಯಿಂದಾಗಿ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯ, ಸಿದ್ದನಪಾಳ್ಯ ಗ್ರಾಮಗಳಲ್ಲಿ ಉದ್ವಿಗ್ನ ಪರಿಸ್ಥಿತಿ
Follow us on

ಆನೇಕಲ್, ಸೆ.23: ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿ ವಾಪಸ್ ಆಗುತ್ತಿದ್ದ ವೇಳೆ ಆನೇಕಲ್ (Anekal) ತಾಲೂಕಿನ ಚಿನ್ನಯ್ಯನ ಪಾಳ್ಯ ಹಾಗೂ ಸಿದ್ದನಪಾಳ್ಯ ಗ್ರಾಮಗಳ ಜನರ ನಡುವೆ ಗಲಾಟೆ ನಡೆದಿದೆ. ದೊಣ್ಣೆಗಳನ್ನ ಹಿಡಿದು ಪರಸ್ಪರ ಬಡಿದಾಡಿಕೊಳ್ಳಲಾಗಿದ್ದು, ಹಲವರಿಗೆ ಗಾಯಗಳಾಗಿವೆ. ಸದ್ಯ ಎರಡೂ ಗ್ರಾಮಗಳಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಆನೇಕಲ್ ತಾಲೂಕಿನ ಚಿನ್ನಯ್ಯನ ಪಾಳ್ಯದ ವಿನಾಯಕ ಗೆಳೆಯರ ಬಳಗದ ಯುವಕರು ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಿ ವಾಪಸ್ ಆಗುತ್ತಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ದಾರಿ ಮಧ್ಯೆ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಇದು ತಾರಕಕ್ಕೇರಿದಲ್ಲದೆ ಎರಡೂ ಗ್ರಾಮಗಳ ಯುವಕರು ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಾವು ಯಾರಿಗೂ ಕಮ್ಮಿ ಇಲ್ಲ: ಗಣೇಶ ವಿಸರ್ಜನೆ ವೇಳೆ ಭರ್ಜರಿ ಡ್ಯಾನ್ಸ್​ ಮಾಡಿದ ಪೊಲೀಸರು

ಗಲಾಟೆಯಲ್ಲಿ ಎರಡು ಗ್ರಾಮದ ಹಲವರಿಗೆ ಗಾಯಗಳಾಗಿದ್ದು, ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆನೇಕಲ್ ಪೋಲೀಸರು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಆಸ್ಪತ್ರೆ ಹಾಗೂ ಠಾಣೆ ಮುಂದೆ ಜನರು ಜಮಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:11 pm, Sat, 23 September 23