ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಆಲಿಸಿದ ಉತ್ತರ ವಿಭಾಗದ ಹೊಸ ಡಿಸಿಪಿ ಸೈದಲು ಅಡಾವತ್
ಪಾರ್ಕ್ ಗಳಲ್ಲಿ ಪುಡ್ಡೆಗಳ ಪುಂಡಾಟ, ಗಾಂಜಾ ಮತ್ತು ಇದರ ಡ್ರಗ್ಸ್ ಅವ್ಯಾಹತ ಮಾರಾಟ, ರಸ್ತೆಗಳ ಬದಿಯಲ್ಲೇ ಮದ್ಯ ಸೇವನೆ, ಅಂಗಡಿಗಳ ಮುಂದೆ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್, ಕಳ್ಳತನ, ಸೈಬರ್ ಕ್ರೈಮ್, ಅನಧಿಕೃತ ಚೀಟಿ ವ್ಯವಹಾರ ಮೊದಲಾದ ಹತ್ತು ಹಲವು ಸಮಸ್ಯೆಗಳನ್ನು ಜನ ಹೇಳಿಕೊಂಡರು. ಡಿಸಿಪಿ ಅಡಾವಟ್ ಎಲ್ಲರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರಗಳನ್ನು ಒದಗಿಸುವ ಭರವಸೆ ನೀಡಿದರು.
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಅವರ ನೇತೃತ್ವದಲ್ಲಿ ನಗರದ ಪೊಲೀಸ್ ವ್ಯವಸ್ಥೆ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಆಯಾ ವಲಯಗಳಲ್ಲಿ ಪ್ರತಿ ತಿಂಗಳಿನ ಕೊನೆಯ ಶನಿವಾರದಂದು ಒಂದು ಮಾಸಿಕ ಜನ ಸಂಪರ್ಕ ಸಭೆ (Monthly Public Interaction Day) ನಡೆಸಲಾರಂಭಿಸುರುವುದು ಶ್ಲಾಘನೀಯ ಬೆಳವಣಿಗೆ. ಬೆಂಗಳೂರು ಉತ್ತರ ವಿಭಾಗದ ಣೆಸ ಡಿಸಿಪಿ ಸೈದುಲು ಅಡಾವತ್ (DCP Saidulu Adavath) ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಬರುವ ಕಲ್ಯಾಣ ಮಂಟಪವೊಂದರಲ್ಲಿ ಸಬೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದರು. ಉತ್ತಮ ಸಂಖ್ಯೆಯಲ್ಲಿ ಸಭೆಗೆ ಹಾಜರಾದ ಜನ ತಮ್ಮ ತಮ್ಮ ಏರಿಯಾದಲ್ಲಿ ಸಮಸ್ಯೆಗಳನ್ನು ಹೇಳಿಕೊಂಡರು. ಪಾರ್ಕ್ ಗಳಲ್ಲಿ ಪುಡ್ಡೆಗಳ ಪುಂಡಾಟ, ಗಾಂಜಾ ಮತ್ತು ಇದರ ಡ್ರಗ್ಸ್ ಅವ್ಯಾಹತ ಮಾರಾಟ, ರಸ್ತೆಗಳ ಬದಿಯಲ್ಲೇ ಮದ್ಯ ಸೇವನೆ, ಅಂಗಡಿಗಳ ಮುಂದೆ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್, ಕಳ್ಳತನ, ಸೈಬರ್ ಕ್ರೈಮ್, ಅನಧಿಕೃತ ಚೀಟಿ ವ್ಯವಹಾರ ಮೊದಲಾದ ಹತ್ತು ಹಲವು ಸಮಸ್ಯೆಗಳನ್ನು ಜನ ಹೇಳಿಕೊಂಡರು. ಡಿಸಿಪಿ ಅಡಾವಟ್ ಎಲ್ಲರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರಗಳನ್ನು ಒದಗಿಸುವ ಭರವಸೆ ನೀಡಿದರು. ಸಭೆಯ ಬಳಿಕ ಟಿವಿ9 ಕನ್ನಡ ವಾಹಿನಿ ವರದಿಗಾರನೊದಿಗೆ ಮಾತಾಡಿದ ಅಡಾವಟ್ ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ