ದೇಶದಲ್ಲೇ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ, ಸಿಕ್ಕಾಗ ಕೂತುಬಿಡಿ: ಕುರ್ಚಿ ಬಗ್ಗೆ ಮಾರ್ಮಿಕವಾಗಿ ನುಡಿದ ಡಿಕೆ ಶಿವಕುಮಾರ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 10, 2023 | 3:23 PM

ನಿಮಗೆ ಕುರ್ಚಿ ಬೆಲೆ ಗೊತ್ತಿಲ್ಲ, ನಮಗೆ ಕುರ್ಚಿ ಸಿಕ್ಕಿದರೆ ಸಾಕು ಅಂತಿದ್ದೀವಿ. ನನಗೆ ಕುರ್ಚಿ ಸಿಗಲಿಲ್ಲ ಎಂದು ಹೊಡೆದಾಡುತ್ತಿದ್ದೇವೆ. ಇಡೀ ದೇಶದಲ್ಲೇ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ಕುರ್ಚಿ ಸಿಕ್ಕಾಗ ಕೂತುಬಿಡಿ, ಇಲ್ಲದಿದ್ದರೆ ಕುರ್ಚಿ ಸಿಗುವುದಿಲ್ಲ ಎಂದು ಕುರ್ಚಿ ಮಹತ್ವವನ್ನು ಡಿಸಿಎಂ ಡಿಕೆ ಶಿವಕುಮಾರ್​  ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​ 10: ಇಡೀ ದೇಶದಲ್ಲೇ ಕುರ್ಚಿಗಾಗಿ ಹೋರಾಟ ನಡೆಯುತ್ತಿದೆ. ಕುರ್ಚಿ ಸಿಕ್ಕಾಗ ಕೂತುಬಿಡಿ, ಇಲ್ಲದಿದ್ದರೆ ಕುರ್ಚಿ ಸಿಗುವುದಿಲ್ಲ ಎಂದು ಕುರ್ಚಿ ಮಹತ್ವವನ್ನು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​  ಮಾರ್ಮಿಕವಾಗಿ ಹೇಳಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಡಾ.ಸೈಯದ್ ನಾಸೀರ್ ಹುಸೇನ್‌ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮಗೆ ಕುರ್ಚಿ ಬೆಲೆ ಗೊತ್ತಿಲ್ಲ, ನಮಗೆ ಕುರ್ಚಿ ಸಿಕ್ಕಿದರೆ ಸಾಕು ಅಂತಿದ್ದೀವಿ. ನನಗೆ ಕುರ್ಚಿ ಸಿಗಲಿಲ್ಲ ಎಂದು ಹೊಡೆದಾಡುತ್ತಿದ್ದೇವೆ. ಕುರ್ಚಿ ಸಿಗದಿದ್ರೆ ಅಲ್ಲೇ ಕುಳಿತುಕೊಳ್ಳಿ ಎಂದು ನೆರೆದಿದ್ದವರಿಗೆ ಹಾಸ್ಯದ ಮೂಲಕ ಕುರ್ಚಿ ಬೆಲೆ ತಿಳಿಸಿದ್ದಾರೆ.

NEP ಬದಲಾವಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರಸ್ತಾಪ

ಬಿಜೆಪಿ ನಾಗಪುರ ಯೂನಿವರ್ಸಿಟಿ ಪಾಲಿಸಿ ತರಲು ಹೊರಟಿತ್ತು. ನಾವು ಅದನ್ನ ಬದಲಿಸುವುದಾಗಿ ಹೇಳಿದ್ದೆವು. ಆ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಆ ಮೂಲಕ NEP ಬದಲಾವಣೆ ಬಗ್ಗೆ ಪ್ರಸ್ತಾಪಿಸಿದರು.  ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಸಿದ್ಧಾಂತ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್​ ದೋಸ್ತಿ: ಸುಮಲತಾ ಅಂಬರೀಶ್​ ಅತಂತ್ರದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು

ರಾಜೀವ್ ಗಾಂಧಿ ಅವರಿದ್ದಾಗ ತಂದ ಎಜುಕೇಶನ್ ಪಾಲಿಸಿ, ಈಗಿನ ಪಾಲಿಸಿ ನೋಡಿ. ಯಾರೂ ವಿದ್ಯಾವಂತರು ಆಗಲಿಲ್ವಾ? ಯಾರೂ ಐಎಎಸ್ ಅಧಿಕಾರಿ ಆಗಲಿಲ್ವಾ? ಮುಸ್ಲಿಂ ಸಮುದಾಯದವರು ಶಿಕ್ಷಣ ಪಡೆಯಲಿಲ್ವಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಗದ ವಿಪಕ್ಷ ನಾಯಕನ ಆಯ್ಕೆ: ಸೇನಾನಿ ಇಲ್ಲದೆ ಯುದ್ಧ ಗೆಲ್ಲಬಹುದು ಎಂದ ಸಿಟಿ ರವಿ

ಯಾರು ನಮ್ಮ ಕಷ್ಟ ಕಾಲದಲ್ಲಿ ನಮ್ಮ ಸಹಾಯಕ್ಕೆ ನಿಂತರು. ಅವರ ಜೊತೆ ನಮ್ಮ ಸರ್ಕಾರ ನಿಲ್ಲಲಿದೆ, ಕೆಲಸ ಮಾಡಲಿದೆ. ನಮ್ಮ ರಾಜ್ಯದ ಇತಿಹಾಸ, ನಿಮ್ಮ ಇತಿಹಾಸ ತಿರುಚಲು ಹೊರಟಿದ್ದಾರೆ. ನೀವು ಹೋರಾಟ ಮಾಡಿ ನಮಗೆ ಅಧಿಕಾರಿ ಕೊಟ್ಟಿದ್ದೀರಿ. ಚುನಾವಣೆ ಮುನ್ನ ಇಷ್ಟು ಸೀಟ್ ಬರುತ್ತೆ, ಮೈತ್ರಿ ಆಗಬೇಕು ಅಂತೆಲ್ಲಾ ಹೇಳಿದ್ದರು. ಆದರೆ ಹೈಕಮಾಂಡ್‌ಗೆ ನಾನು ಹೇಳಿದ್ದೆ 136 ಅಂತ. ನಿವೆಲ್ಲಾ ಅಷ್ಟು ಸೀಟ್ ತಂದು ಕೊಟ್ಟಿದ್ದೀರಿ. ಮುಂದೆ ಬಹಳಷ್ಟು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು: ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು. ಸಂವಿಧಾನ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಭಾರತ ದೇಶ ಅನೇಕ ಧರ್ಮ ಹಾಗೂ ಸಂಸ್ಕೃತಿಯಿಂದ ಕೂಡಿದ ದೇಶ. ಬಿಜೆಪಿ ಪ್ರತಿನಿತ್ಯ ಕೋಮು ಸಂಘರ್ಷ ಮೂಡಿಸುವ ಕೆಲಸ ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಕೋಮು ಸಂಘರ್ಷ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಕುರಿತು ಪೊಲೀಸರಿಗೆ ಸೂಚನೆ ನೀಡಿದ್ದೇನೆ‌. ಕೋಮು ಸಂಘರ್ಷ ಮೂಡಿಸಲು ಮುಂದಾದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.