AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು: ಸಿದ್ದರಾಮಯ್ಯ

ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಅವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೈಯದ್ ಅವರನ್ನು ಹಾಡಿಹೊಗಳಿದರು. ನಂತರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು ಎಂದರು.

ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು: ಸಿದ್ದರಾಮಯ್ಯ
ಡಾ.ಸೈಯದ್ ನಾಸಿರ್ ಹುಸೇನ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್
Follow us
Malatesh Jaggin
| Updated By: Rakesh Nayak Manchi

Updated on: Sep 10, 2023 | 3:16 PM

ಬೆಂಗಳೂರು, ಸೆ.10: ಕೋಮುವಾದಿಗಳ ಕಪಿಮುಷ್ಟಿಯಿಂದ ದೇಶವನ್ನು ಉಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ಕಾರ್ಯಕಾರಣಿ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ (Dr. Syed Nasir Hussain) ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ಯಾತೀತ ತತ್ವದ ನಿಲುವು ಇರುವವರೆಲ್ಲ ಇದಕ್ಕೆ ಪ್ರಯತ್ನ ಮಾಡಬೇಕು ಎಂದರು.

ಸಂವಿಧಾನ ಉಳಿಯಬೇಕು. ಸಂವಿಧಾನ ಒಪ್ಪಿದ್ದೇವೆ, ಜಾತ್ಯಾತೀತ ರಾಷ್ಟ್ರ ಮಾಡುವುದಾಗಿ ಹೇಳಿದ್ದೇವೆ. ಭಾರತ ಅನೇಕ ಜಾತಿ, ಧರ್ಮ ಬಹುತ್ವ ಇರುವ ರಾಷ್ಟ್ರ. ಅದಕ್ಕಾಗಿ ಯೂನಿಟಿ ಇನ್ ಡೈವರ್ಸಿಟಿ ಕಾಣುತ್ತಿದ್ದೇವೆ. ಇದರಲ್ಲಿ ನಂಬಿಕೆ ಇಟ್ಟಿರುವವರಲ್ಲಿ ನಾಸಿರ್ ಹುಸೇನ್ ಅಂತ ಹೇಳಿದರ ಅತಿಶಯೋಕ್ತಿಯಲ್ಲ. ಸೆಕ್ಯೂಲರ್ ಆಗಿದ್ದರೆ ಮಾತ್ರ ಈ ದೇಶ ಉಳಿಯಲು ಸಾಧ್ಯ. ಕುವೆಂಪು ಅವರು ಒಂದು ಮಾತು ಹೇಳುತ್ತಾರೆ ಎಂದರು.

ಈ ದೇಶದಲ್ಲಿ ಯಾವುದೇ ಧರ್ಮದ ಮಗುವಾಗಿ ಹುಟ್ಟಿದರೂ ವಿಶ್ವ ಮಾನವನಾಗಿ ಹುಟ್ಟುತ್ತಾರೆ. ಆಮೇಲೆ ಅಲ್ಪ ಮಾನವನಾಗಿ ಆಗುತ್ತಾರೆ. ಬಿಜೆಪಿಯವರು ಅಲ್ಪಮಾನವರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಎಂದೂ ಕೂಡ ಸಂವಿಧಾನ ದ್ಯೇಯೋದ್ದೇಶ ಉಳಿಸಿಕೊಂಡು ಬರುತ್ತಿದೆ. ಸಂವಿಧಾನ ರಚನೆ ಮಾಡಿದಾಗ ಕಾಂಗ್ರೆಸ್ ದೊಡ್ಡ ಜವಾಬ್ದಾರಿ ನೀಡಿದೆ. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನ ಒಪ್ಪಿ ಹೊರ ತರುತ್ತದೆ ಎಂದರು.

ಇದನ್ನೂ ಓದಿ: ಜಿ20 ಶೃಂಗಸಭೆಯ ಆಹ್ವಾನ ತಿರಸ್ಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಅವಮಾನ ಮಾಡಿದ್ದಾರೆ: ಡಾ ಸಿಎನ್ ಅಶ್ವಥ್ ನಾರಾಯಣ

ಸಂವಿಧಾನ ಜಾರಿಗೆ ಬಂದಾಗ, ಅದನ್ನ ವಿರೋಧ ಮಾಡಿದವರು RSS ಮತ್ತು ಹಿಂದೂ ಮಹಾಸಭಾ ಅನ್ನೋದನ್ನ ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ಐಕ್ಯತೆಯಿಂದ ಇರಲು ಬಿಡುವುದಿಲ್ಲ. ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳುತ್ತಾರೆ. ಈ ದೇಶ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ. 140 ಕೋಟಿ ಜನರು ಇಲ್ಲಿ ಇದ್ದಾರೆ, ಎಲ್ಲರಿಗೂ ಸೇರಿದ್ದು. ಬಿಜೆಪಿಯವರು ಇದನ್ನೇ ಅಜೆಂಡಾ ಆಗಿ ಇಟ್ಟುಕೊಂಡಿದ್ದಾರೆ ಎಂದರು.

ಇಂಡಿಯಾ ಬದಲು ಭಾರತ ಅಂತ ಹೆಸರು ಬದಲಾಯಿಸಲು ಮುಂದಾಗಿದ್ದಾರೆ. ನೀವು ನಾವು ಎಲ್ಲರೂ ಇಂಡಿಯಾದವರು, ಭಾರತೀಯರೂ ಕೂಡ ಹೌದು. ಜನರನ್ನ ದಾರಿ ತಪ್ಪಿಸು ಕೆಲಸ ಮಾಡುತ್ತಿದ್ದಾರೆ. ಇಂಡಿಯಾ ಬ್ರಿಟೀಷರು ಇಟ್ಟ ಹೆಸರು ಅಂತ ಹೇಳುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಅಂದವರ್ಯಾರು? ನರೇಂದ್ರ ಮೋದಿ ಮಾತ್ರ ಭಾರತೀಯನಾ? ನಾವು, ನೀವೆಲ್ಲಾ ಇಂಡಿಯಾದವರಲ್ವಾ? ನಮ್ಮ ನಡುವೆ ಹುಳಿ ಇಂಡುವ ಕೆಲಸ ಮಾಡುತ್ತಿದ್ದಾರೆ. ಇವರ ತಂತ್ರ ಫಲಿಸಲ್ಲ ಎಂದರು.

ನಾವು ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಮಾಡಲು ಬದ್ಧರಾಗಿದ್ದೇವೆ. ಯಾರಿಗೂ ಕಾನೂನು ಕೈಗೆ ತೆಗೆದುಕೊಳ್ಳಲು ಬಿಡಲ್ಲ. ಕೋಮು ಗಲಭೆ ಆಗದಂತೆ ಹತ್ತಿಕ್ಕುತ್ತೇವೆ. ಪ್ರತಿ ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಕೋಮು ಸಂಘರ್ಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ಸೂಚನೆ ನೀಡಿದ್ದೇನೆ‌. ಯಾರಾದರು ಕೋಮು ಸಂಘರ್ಷಕ್ಕೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಆದರೆ ನಿಮ್ಮ ಮೇಲೆ ಯಾವುದೇ ರೀತಿಯ ಪರಿಣಾಮ ಆಗದಂತೆ ಕ್ರಮ ಕೈಗೊಳ್ಳುತ್ತೇವೆ‌ ಎಂದರು.

ನಾವು ನಾಶೀರ್ ಹುಸೇನ್ ಅವರನ್ನು ಅಭಿನಂದನೆ ಸಲ್ಲಿಸಲು ಇಲ್ಲಿ ಸೇರಿದ್ದೇವೆ. ಅವರು ಯುವ ನಾಯಕ. ವಿದ್ಯಾರ್ಥಿಯಾಗಿದ್ದಾಗಲೇ ನಾಯಕತ್ವದ ಗುಣಗಳನ್ನು ನಾಸೀರ್ ಬೆಳಸಿಕೊಂಡಿದ್ದಾರೆ, ಬೆಳೆಯ ಸೀರೆ ಮೊಳಕೆಯಲ್ಲಿ ಎಂಬಂತೆ ಅವರು ವ್ಯಾಸಂಗ ಮಾಡಿದ ಕಡೆಯಲ್ಲೇ ವಿದ್ಯಾರ್ಥಿಗಳ ನಾಯಕರಾಗಿ ಕೆಲಸ ಮಾಡಿದ್ದಾರೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ 135 ಕ್ಷೇತ ಗೆದ್ದಿದೆ. ಇದಕ್ಕೆ ಅಲ್ಪಸಂಖ್ಯಾತರ ಪಾತ್ರ ಬಹುಮುಖ್ಯ. ಹೀಗಾಗಿ ಅಲ್ಪಸಂಖ್ಯಾತರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ