Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿರುವುದು ನಿಜ: ಮೈತ್ರಿ ಬಗ್ಗೆ ಸತ್ಯ ಒಪ್ಪಿಕೊಂಡ ದೇವೇಗೌಡ

ಜೆಡಿಎಸ್​ ಬಿಜೆಪಿ ಮೈತ್ರಿ ಬಗ್ಗೆ ಇಷ್ಟು ದಿನ ಅಂತ-ಕಂತೆಗಳು ಕೇಳಿಬಂದಿದ್ದವು. ಮೈತ್ರಿ ಪಕ್ಕಾ ಎಂದು ಬಿಜೆಪಿ ಕಡೆಯಿಂದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಙ ಹಾಗೂ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದರು. ಆದ್ರೆ, ಈ ಬಗ್ಗೆ ಜೆಡಿಎಸ್​​ ವರಿಷ್ಠರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಇದೀಗ ಸ್ವತಃ ಹೆಚ್​ಡಿ ದೇವೇಗೌಡ ಅವರೇ ಮೈತ್ರಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ದೊಡ್ಡಗೌಡ್ರ ಏನೆಲ್ಲ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ ನೋಡಿ.

ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿರುವುದು ನಿಜ: ಮೈತ್ರಿ ಬಗ್ಗೆ ಸತ್ಯ ಒಪ್ಪಿಕೊಂಡ ದೇವೇಗೌಡ
ನರೇಂದ್ರ ಮೋದಿ-ದೇವೇಗೌಡ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Sep 10, 2023 | 3:44 PM

ಬೆಂಗಳೂರು, (ಸೆಪ್ಟೆಂಬರ್ 10): ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಬಿಜೆಪಿ ಹಾಗೂ ಜೆಡಿಎಸ್​ ಜೊತೆ ಮೈತ್ರಿ (BJP-JDS alliance) ಪೈನಲ್​ ಆಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿರುವುದು ನಿಜ ಎಂದು ಸ್ವತಃ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Devegowda) ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಇಂದು (ಸೆಪ್ಟೆಂಬರ್ 10) ಬೆಂಗಳೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ದೇವೇಗೌಡ, ಪ್ರಧಾನಿ ಮೋದಿ ಜೊತೆ ಮಾತುಕತೆ ನಡೆದಿರುವುದು ನಿಜ. ಆದರೆ ಸೀಟು ಹಂಚಿಕೆ ಬಗ್ಗೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಷ್ಟು ಸೀಟು ಬೇಕು ಎಂದು ನಾವು ಕೇಳುವುದಿಲ್ಲ. ಸೀಟು ಹಂಚಿಕೆ ಬಗ್ಗೆ ಮೋದಿ ಜೊತೆ ಕುಮಾರಸ್ವಾಮಿ ಮಾತಾಡುತ್ತಾರೆ. ಅವರಾಗಿಯೇ ಬಂದು ಸಂಪರ್ಕ ಮಾಡಿ ಮಾತಾಡಿದ್ದಾರೆ. ಪಕ್ಷ ಉಳಿಸಲು ದೆಹಲಿ ನಾಯಕರನ್ನು ಸಂಪರ್ಕ ಮಾಡಿದ್ದೇನೆ. ಪ್ರತಿಕ್ಷೇತ್ರದ ಪರಿಸ್ಥಿತಿ ವಿವರಿಸಿದ್ದೇನೆ. ವಿಜಯಪುರ, ರಾಯಚೂರು, ಬೀದರ್​ನಲ್ಲಿ ಬಿಜೆಪಿಗೆ ಬೆಂಬಲ. ಅಲ್ಲಿ ನಾವು ಬೆಂಬಲ ನೀಡಿದರೆ ಬಿಜೆಪಿ ಗೆಲ್ಲಲು ಸಾಧ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ: ವಿಶೇಷ ಪೂಜೆ ವೇಳೆಯೇ ಕುಮಾರಸ್ವಾಮಿ ಕರೆ ಮಾಡಿ ಶುಭ ಸುದ್ದಿ ನೀಡಿದ್ದಾರೆ: ಸಂಚಲನ ಮೂಡಿಸಿದ ಈಶ್ವರಪ್ಪ ಹೇಳಿಕೆ

ಜೆಡಿಎಸ್​ ಬಿಜೆಪಿ ಮೈತ್ರಿ ಬಗ್ಗೆ ಇಷ್ಟು ದಿನ ಅಂತ-ಕಂತೆಗಳು ಕೇಳಿಬಂದಿದ್ದವು. ಮೈತ್ರಿ ಪಕ್ಕಾ ಎಂದು ಬಿಜೆಪಿ ಕಡೆಯಿಂದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಙ ಹಾಗೂ ಬಸವರಾಜ ಬೊಮ್ಮಾಯಿ ಖಚಿತಪಡಿಸಿದ್ದರು. ಆದ್ರೆ, ಈ ಬಗ್ಗೆ ಜೆಡಿಎಸ್​​ ವರಿಷ್ಠರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿರಲಿಲ್ಲ. ಇದೀಗ ಸ್ವತಃ ಹೆಚ್​ಡಿ ದೇವೇಗೌಡ ಅವರೇ ಮೈತ್ರಿ ಬಗ್ಗೆ ನರೇಂದ್ರ ಮೋದಿ ಅವರ ಜೊತೆ ಮಾತನಾಡಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದಿಗೆ ಅಂತೆ ಕಂತೆಗಳಿಗೆ ತೆರೆಳೆದರು.  ಅಲ್ಲದೇ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ಲೋಕಸಭಾ ಅಖಾಡಳ್ಳಿಯುವುದು ಪಕ್ಕಾ ಆಗಿದ್ದು, ಕ್ಷೇತ್ರಗಳ ಹಂಚಿಕೆ ಬಗ್ಗೆ ಚರ್ಚೆಗಳು ನಡೆದಿವೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ