ಬಿಜೆಪಿ-ಜೆಡಿಎಸ್​ ದೋಸ್ತಿ: ಸುಮಲತಾ ಅಂಬರೀಶ್​ ಅತಂತ್ರದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು

ಇನ್ನು 30 ದಿನದಲ್ಲಿ ಮೈತ್ರಿ ವಿಚಾರ ಅಂತಿಮವಾಗುತ್ತದೆ. ಸೀಟು ಹಂಚಿಕೆ ಅಂದರೆ ಅಣ್ಣ, ತಮ್ಮ ಪಾಲು ಹಂಚಿಕೊಂಡಂತಲ್ಲ. ನಾವು ಗೆದ್ದಿರುವ ಸೀಟುಗಳ ಮೇಲೆ ಹಂಚಿಕೆ ಮಾಡಲು ಆಗಲ್ಲ. ಬಿಜೆಪಿಯಲ್ಲಿ ಎಷ್ಟು ಜನ ಸಮರ್ಥ ಅಭ್ಯರ್ಥಿಗಳು ಇದ್ದಾರೆ, ನಮ್ಮಲ್ಲಿ ಎಷ್ಟು ಜನ ಇದ್ದಾರೆ ಎಂದು ನೋಡಿಯೇ ತೀರ್ಮಾನ ಮಾಡಲಾಗುತ್ತದೆ.

ಬಿಜೆಪಿ-ಜೆಡಿಎಸ್​ ದೋಸ್ತಿ: ಸುಮಲತಾ ಅಂಬರೀಶ್​ ಅತಂತ್ರದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು
ಹೆಚ್​.ಡಿ ಕುಮಾರಸ್ವಾಮಿ (ಎಡಚಿತ್ರ) ಸುಮಲತಾ ಅಂಬರೀಶ್​ (ಬಲಚಿತ್ರ)
Follow us
Anil Kalkere
| Updated By: ವಿವೇಕ ಬಿರಾದಾರ

Updated on:Sep 10, 2023 | 1:08 PM

ಬೆಂಗಳೂರು ಸೆ. 08: ಬಿಜೆಪಿ (BJP) ಜೊತೆ ಜೆಡಿಎಸ್ (JDS)​ ಮೈತ್ರಿ ಮಾತುಕತೆ ನಡೆಯುತ್ತಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ದಳ ನಾಯಕರು ಕಣ್ಣಿದ್ದಾರೆ. ಜೆಡಿಎಸ್​ ವರಿಷ್ಠರು ಮಂಡ್ಯವನ್ನು ಬಿಟ್ಟುಕೊಡುವಂತೆ ಬಿಜೆಪಿ ಹೈಕಮಾಂಡ್​​ ಎದುರು ಪ್ರಸ್ತಾವನೆ ಇಟ್ಟಿದ್ದಾರೆ. ಒಂದು ವೇಳೆ ಬಿಜೆಪಿ ಏನಾದ್ರೂ ಮಂಡ್ಯ ಬಿಟ್ಟುಕೊಟ್ಟರೇ ಸದ್ಯದ ಕ್ಷೇತ್ರ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​ ಅತಂತ್ರ ಆಗುತ್ತಾರೆ ಎಂಬ ಮಾತುಗಳು ಕೇಳಿಬುರತ್ತಿದೆ. ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿ ಯಾರು ಹೇಳಿದ್ದಾರೆ, ಸೀಟು ಹಂಚಿಕೆ ಬಗ್ಗೆ ಚರ್ಚೆಯೇ ಆಗಿಲ್ಲ. ಇವೆಲ್ಲವೂ ಪ್ರಾಥಮಿಕ ಅಂತ ನಿನ್ನೆಯೇ (ಶನಿವಾರ) ನಾನು ಹೇಳಿದ್ದೇನೆ. ಅವರು ಅತಂತ್ರ ಆಗ್ತಾರೆ ಅಂತಾ ಏಕೆ ಪ್ರಚಾರ ಮಾಡುತ್ತಿದ್ದೀರಿ ? ಚರ್ಚೆನೇ ಆಗದೇ ಏಕೆ ಹೀಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಮೊದಲು ರಾಜ್ಯದ ರೈತರ ಸಮಸ್ಯೆ ಬಗೆಹರಿಸಬೇಕು. ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ನಡೆಯುತ್ತಿದೆ. ಇದರಿಂದ ರೈತರಿಗೆ ಸಮಸ್ಯೆ ಆಗುತ್ತಿದೆ. ರೈತರು ಈಗ ಸಂಕಷ್ಟದಲ್ಲಿ ಇದ್ದಾರೆ. ರೈತರ ಪರಿಸ್ಥಿತಿ ಏನಾಗಿದೆ? ನಂಗೆ ಅದರ ಬಗ್ಗೆ ಚಿಂತೆಯಾಗಿದೆ. ಇಲ್ಲಿ ಯಾರು ಅತಂತ್ರ ಅನ್ನೋದು ಪ್ರಶ್ನೆಯಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸಿಡಿಮಿಡಿಗೊಂಡರು.

ಇನ್ನು ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್​ನ ಕೆಲ ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಮೈತ್ರಿ ವಿಚಾರವನ್ನು ಯಾಕೆ ಇಷ್ಟೊಂದು ದೊಡ್ಡದು ಮಾಡುತ್ತಿದ್ದೀರಿ? ವೈಯಕ್ತಿಕವಾಗಿ ತಮ್ಮ ಭಾವನೆ ಹೇಳಿದ್ದಾರೆ, ಅದನ್ನು ಸರಿಪಡಿಸೋಣ. ಹಿಂದಿನ ಕೆಲವು ಘಟನೆಗಳಿಂದ ಹೀಗೆ ಹೇಳಿಕೊಂಡಿದ್ದಾರೆ. ಅನ್ಯಾಯ ಆಗಿದೆ ಅಂತ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ. ಈ ವಿಚಾರವನ್ನೇ ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ನಮ್ಮನೆ ಮಕ್ಕಳು, ಅದನ್ನೆಲ್ಲ ಸರಿಪಡಿಸುತ್ತೇವೆ ಎಂದರು.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಜೆಡಿಎಸ್​-ಬಿಜೆಪಿ ಮೈತ್ರಿ ಪಕ್ಕಾ, ದೇವೇಗೌಡ್ರು ಬೇಡಿಕೆ ಇಟ್ಟ ಕ್ಷೇತ್ರಗಳು ಎಷ್ಟು? ಅವು ಯಾವುವು? ಇಲ್ಲಿದೆ ವಿವರ

ಬಿಜೆಪಿ, ಜೆಡಿಎಸ್​​ ಮೈತ್ರಿ ಸಿದ್ಧಾಂತ ವಿರೋಧವಾದದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಶನಿವಾರ ಸಿದ್ಧಾಂತಕ್ಕೂ, ಜನರ ಭಾವನೆಗಳ ಬದುಕಿಗೂ ತುಂಬಾ ವ್ಯತ್ಯಾಸವಿದೆ. ಸಿದ್ಧಾಂತ ಒಂದು ಭಾಗ, ಜನರ ಬದುಕು ಬೇರೆ. ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಯಾರ ಬಗ್ಗೆ ಮಾತನಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

30 ದಿನದಲ್ಲಿ ಮೈತ್ರಿ ವಿಚಾರ ಅಂತಿಮವಾಗುತ್ತದೆ: ಜಿಟಿ ದೇವೇಗೌಡ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕೋರ್​ ಕಮಿಟಿಯಲ್ಲಿ ಬಿಜೆಪಿ ಮೈತ್ರಿ ಬಗ್ಗೆ ಪ್ರಸ್ತಾಪ ಆಗಿದೆ. ಅನಂತರ ನಾವು ನಾಲ್ಕೈದು ಜನ ದೊಡ್ಡವರ ಜೊತೆ ಚರ್ಚಿಸಿದ್ದೇವೆ. ಸಭೆ ನಡೆಸಿ ಮುಂದಿನ ತೀರ್ಮಾನ ಮಾಡೋಣ ಎಂದು ಹೆಚ್​ಡಿ ದೇವೇಗೌಡರು ಹೇಳಿದ್ದರು.  ರಾಜ್ಯಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಬನ್ನಿ. ಅಲ್ಲಿಯವರೆಗೂ ಸೀಟು ಹಂಚಿಕೆ ಬಗ್ಗೆ ಮಾತಾಡೋದು ಬೇಡವೆಂದಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಇನ್ನು 30 ದಿನದಲ್ಲಿ ಮೈತ್ರಿ ವಿಚಾರ ಅಂತಿಮವಾಗುತ್ತದೆ. ಸೀಟು ಹಂಚಿಕೆ ಅಂದರೆ ಅಣ್ಣ, ತಮ್ಮ ಪಾಲು ಹಂಚಿಕೊಂಡಂತಲ್ಲ. ನಾವು ಗೆದ್ದಿರುವ ಸೀಟುಗಳ ಮೇಲೆ ಹಂಚಿಕೆ ಮಾಡಲು ಆಗಲ್ಲ. ಬಿಜೆಪಿಯಲ್ಲಿ ಎಷ್ಟು ಜನ ಸಮರ್ಥ ಅಭ್ಯರ್ಥಿಗಳು ಇದ್ದಾರೆ, ನಮ್ಮಲ್ಲಿ ಎಷ್ಟು ಜನ ಇದ್ದಾರೆ ಎಂದು ನೋಡಿಯೇ ತೀರ್ಮಾನ ಮಾಡಲಾಗುತ್ತದೆ. ಎರಡೂ ಪಕ್ಷಗಳು ಕೂಲಂಕಷವಾಗಿ ಚರ್ಚಿಸಿದಾಗ ಸೀಟು ಹಂಚಿಕೆ ಸಾಧ್ಯವಾಗುತ್ತದೆ. 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಅಂದರೆ ಅವರೇ ತೆಗೆದುಕೊಳ್ಳಲಿ. 8-10 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಅಂತಾದರೆ ನಮಗೆ ಕೊಡಲಿ. ಸೀಟು ಹಂಚಿಕೆ ರಾಜ್ಯಮಟ್ಟದ ಅಭಿಪ್ರಾಯ ಪಡೆದೇ ತೀರ್ಮಾನ ಮಾಡಲಾಗುತ್ತದೆ. ಹೆಚ್​ಡಿ ದೇವೇಗೌಡರು, ಹೆಚ್​ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​​ ಶಾ ಸೀಟು ಹಂಚಿಕೆ ಮಾಡುತ್ತಾರೆ. ಈ ನಾಲ್ಕು ಜನರು ಮಾತ್ರ ಸೀಟು ಹಂಚಿಕೆ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಮ್ಮನ್ನು ಗುರಿಯಾಗಿಸಿಕೊಂಡಿತ್ತು. ಯಾವ ಪ್ರಧಾನಿಗೂ ಸೇರದ ಜನ ಕುಮಾರಸ್ವಾಮಿ ಪಂಚರತ್ನಕ್ಕೆ ಸೇರಿದ್ದರು. ಇದರಿಂದ ಬೆದರಿ ಬಿಜೆಪಿ, ಜೆಡಿಎಸ್ ಬೆಲ್ಟ್​​ನಲ್ಲಿ ಪ್ರಚಾರ ಮಾಡಿತು. ಪ್ರಧಾನಿಗಳನ್ನೇ ಕರೆತಂದು ಪ್ರಚಾರ ಮಾಡಿ ಜೆಡಿಎಸ್​ ಸೋಲಿಸಿದರು. ಇಲ್ಲದಿದ್ದರೆ ಜೆಡಿಎಸ್ ಇನ್ನೂ 30 ಸೀಟ್ ಗೆಲ್ಲುತ್ತಿತ್ತು. ಅದರ ಅರಿವು ಬಿಜೆಪಿಯವರಿಗೂ ಆಗಿದೆ, ನಮಗೂ ಆಗಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಕಾರ್ಯಕರ್ತರಿಗೆ ತೊಂದರೆ ಆಗುತ್ತಿದೆ. ಈಗ ನಾವು ಕೈ ಕಟ್ಟಿ ಕೂರಲು ಆಗಲ್ಲ, ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಬೇಕು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕಿದೆ. ಹೀಗಾಗಿ ಬಿಜೆಪಿ, ಜೆಡಿಎಸ್​​ ಒಂದಾಗಬೇಕಿದೆ ಎಂದು ಕರೆ ಕೊಟ್ಟರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:07 pm, Sun, 10 September 23

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ