ಸಿಲಿಕಾನ್ ಸಿಟಿಯ 16 ಕೆರೆಗಳಲ್ಲಿ ಮೀನುಗಳ ಮಾರಣ ಹೋಮ, ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

ನಗರದ ಕೆರೆಗಳಲ್ಲಿ ಮೀನುಗಳ ಮಾರಾಣ ಹೋಮ ಹೆಚ್ಚಾಗಿದ್ದು, ನಗರದ ಪ್ರಮುಖ 16 ಕೆರೆಗಳಲ್ಲಿ ನಿರಂತರವಾಗಿ ಮೀನುಗಳು ಸಾಯುತ್ತಿವೆ‌. ಅದರಲ್ಲಿ ನಗರದ ಉಲ್ಲಾಳ ಕೆರೆ, ಬಟ್ಟರಹಳ್ಳಿ, ಲಿಂಗಧೀರನಹಳ್ಳಿ ಕೆರೆ, ದೊಡ್ಡಕಲ್ಲಸಂದ್ರ ಕೆರೆ, ಮಾರತಳ್ಳಿ ಕೆರೆ, ಸೀತಾರಾಮ್ ಪಾಲ್ಯ ಕೆರೆ, ಲೋಹಲ್ ಅಬ್ಲಿಪುರ, ಕುಂದಲಹಳ್ಳಿ ಕೆರೆಯಲ್ಲಿ ನಿರಂತರವಾಗಿ ಮೀನುಗಳು ಸಾಯುತ್ತಿವೆ.

ಸಿಲಿಕಾನ್ ಸಿಟಿಯ 16 ಕೆರೆಗಳಲ್ಲಿ ಮೀನುಗಳ ಮಾರಣ ಹೋಮ, ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
ಬೆಂಗಳೂರು ಕೆರೆ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Sep 10, 2023 | 3:05 PM

ಬೆಂಗಳೂರು, ಸೆ.10: ರಾಜಧಾನಿ ಬೆಂಗಳೂರಿನಲ್ಲಿ(Bengaluru) ಇತ್ತೀಚೆಗೆ ಮೀನುಗಳ ಮಾರಣ ಹೋಮ ಹೆಚ್ಚಾಗಿದೆ(fishes). ಅಧಿಕಾರಿಗಳ ನಿರ್ಲಕ್ಷ್ಯದಿಂದ, ಕೆರೆಗಳಲ್ಲಿ ನೀರು ಇಲ್ಲದ ಕಾರಣದಿಂದಾಗಿ ಲಕ್ಷಾಂತರ ಮೀನುಗಳು ಸಾಯುತ್ತಿವೆ. ಕೆರೆಗಳ ಅಕ್ಕಪಕ್ಕ ವಾಸಿಸುವ ಜನರು ಇದರಿಂದ ರೋಸಿ ಹೋಗಿದ್ದು ಕರೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಬೆಂಗಳೂರಿನ 16 ಕೆರೆಗಳಲ್ಲಿ ಇದೇ ಸ್ಥಿತಿ ಇದೆ. 16 ಕೆರೆಗಳಲ್ಲಿ ಮೀನುಗಳ ಮಾರಣ ಹೋಮವಾಗುತ್ತಿದೆ. ಆದಷ್ಟು ಬೇಗ ಕೆರೆಯನ್ನು ಸ್ವಚ್ಛಗೊಳಿಸಿ ಉಳಿದ ಮೀನುಗಳನ್ನು ರಕ್ಷಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ನಗರ. ಈ ನಗರ ಅಭಿವೃದ್ಧಿಯಾತ್ತಿದ್ದಂತೆ ಕೆರೆಗಳು ಮಾಯವಾಗುತ್ತಿವೆ. ಇನ್ನು ಉಳಿದ ಕೆರೆಗಳಲ್ಲಿ ಸ್ವಚ್ಛತೆ ಮರೆಯಾಗುತ್ತಿದೆ. ಕೆಲ ಕೆರೆಗಳಲ್ಲಿ ಲಕ್ಷಾಂತರ ಮೀನುಗಳು ಸಾಕಾಣೆಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ಕೆರೆಗಳಲ್ಲಿ ಮೀನುಗಳ ಮಾರಣ ಹೋಮವೇ ಜಾಸ್ತಿಯಾಗಿ ಹೋಗಿದೆ.

ಹೌದು, ನಗರದ ಕೆರೆಗಳಲ್ಲಿ ಮೀನುಗಳ ಮಾರಾಣ ಹೋಮ ಹೆಚ್ಚಾಗಿದ್ದು, ನಗರದ ಪ್ರಮುಖ 16 ಕೆರೆಗಳಲ್ಲಿ ನಿರಂತರವಾಗಿ ಮೀನುಗಳು ಸಾಯುತ್ತಿವೆ‌. ಅದರಲ್ಲಿ ನಗರದ ಉಲ್ಲಾಳ ಕೆರೆ, ಬಟ್ಟರಹಳ್ಳಿ, ಲಿಂಗಧೀರನಹಳ್ಳಿ ಕೆರೆ, ದೊಡ್ಡಕಲ್ಲಸಂದ್ರ ಕೆರೆ, ಮಾರತಳ್ಳಿ ಕೆರೆ, ಸೀತಾರಾಮ್ ಪಾಲ್ಯ ಕೆರೆ, ಲೋಹಲ್ ಅಬ್ಲಿಪುರ, ಕುಂದಲಹಳ್ಳಿ ಕೆರೆಯಲ್ಲಿ ನಿರಂತರವಾಗಿ ಮೀನುಗಳು ಸಾಯುತ್ತಿವೆ. ಇನ್ನು, ಮೀನುಗಳು ಸಾಯುವುದಕ್ಕೆ ಕಲುಷಿತ ನೀರು ಹಾಗೂ ಮಳೆಯಾಗದೇ ಇರುವುದೇ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಕಲುಷಿತ ನೀರು ಬರುವ ಕೆರೆಗಳಲ್ಲಿ ಮೀನು ಸಾಕಾಣೆಗೆ ಮೀನುಗಾರಿಕೆ ಇಲಾಖೆ ಡಿಎಲ್ ನೀಡುವುದು ಕೂಡ ಒಂದು ಪ್ರಮುಖ ಸಮಸ್ಯೆಯಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ಈ ಕುರಿತಾಗಿ ಗಮನ ಹರಿಸುತ್ತಿಲ್ಲ. ಅಲ್ಲದೇ ಈ ಕುರಿತಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ರಮ ತೆಗೆದುಕೊಳ್ಳದೇ ಇರುವುದೇ ದೊಡ್ಡ ಸಮಸ್ಯೆಯಾಗುತ್ತಿದೆ ಅಂತ ಸರೋವರ ತಜ್ಞರು ಹೇಳ್ತಿದ್ದಾರೆ.

ಇದನ್ನೂ ಓದಿ: ಆನೇಕಲ್​ನ ಮಾಯಸಂದ್ರ ಕೆರೆಯಲ್ಲಿ ಬಲೆಗೆ ಬಿದ್ದ ವಿಚಿತ್ರ ಮೀನುಗಳು

ಇನ್ನು, ನಗರದ ಉಲ್ಲಾಳ ಕೆರೆ ಹಾಗೂ ಮಾರತಹಳ್ಳಿ ಕೆರೆಯಲ್ಲಿ ಕಳೆದ ವಾರ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳು ಸತ್ತು ಹೋಗಿದ್ವು.‌ ಇದರಿಂದಾಗಿ ಪ್ರತಿದಿನವು ವಾಸನೆ ಬರುತ್ತಿದ್ದು ಕೆರೆಯ ಅಕ್ಕಪಕ್ಕದಲ್ಲಿ ವಾಸಿಸುವ ಜನರು ಪರದಾಡುತ್ತಿದ್ದಾರೆ.‌ ಕೆರೆಯ ಅಕ್ಕಪಕ್ಕ ವಾಕ್ ಮಾಡುವ ಜನರಿಗೂ ಇನ್ನಿಲ್ಲದ ಸಮಸ್ಯೆ ಉಂಟಾಗುತ್ತಿದೆ. ಅಧಿಕಾರಿಗಳ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ