ಬಿಎಂಟಿಸಿಯಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸ್ತಿದ್ದ 3027 ಪ್ರಯಾಣಿಕರಿಗೆ ದಂಡ; ವಸೂಲಿಯಾದ ಹಣವೇಷ್ಟು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 10, 2023 | 8:02 PM

ಬಿಎಂಟಿಸಿ ಬಸ್​ಗಳಲ್ಲಿ ಸಿಬ್ಬಂದಿಗಳು 14930 ಟ್ರಿಪ್​ಗಳಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ ಮಹಿಳೆಯರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತವರೂ ಸೇರಿದಂತೆ ಇನ್ನಿತರ ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆ ದಂಡ ವಸೂಲಿ ಮಾಡಲಾಗಿದೆ. ಬಿಎಂಟಿಸಿ ಬಸ್ ನಿರ್ವಾಹಕರ ವಿರುದ್ಧವೂ 906 ಪ್ರಕರಣ ದಾಖಲು ಮಾಡಲಾಗಿದೆ.

ಬಿಎಂಟಿಸಿಯಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸ್ತಿದ್ದ 3027 ಪ್ರಯಾಣಿಕರಿಗೆ ದಂಡ; ವಸೂಲಿಯಾದ ಹಣವೇಷ್ಟು ಗೊತ್ತಾ?
ಬಿಎಂಟಿಸಿ
Follow us on

ಬೆಂಗಳೂರು, ಅ.10: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಟಿಕೆಟ್ ಪಡೆಯದೇ ಯಾಣಿಸುತ್ತಿದ್ದ 3027 ಪ್ರಯಾಣಿಕರಿಗೆ ದಂಡ ಹಾಕಲಾಗಿದ್ದು, ಬರೊಬ್ಬರಿ 6,10,880 ರೂಪಾಯಿ ದಂಡ ವಸೂಲಿ ಮಾಡಿದೆ. ಬಿಎಂಟಿಸಿ ಬಸ್​ಗಳಲ್ಲಿ ಸಿಬ್ಬಂದಿಗಳು 14930 ಟ್ರಿಪ್​ಗಳಲ್ಲಿ ತಪಾಸಣೆ ನಡೆಸಿದ್ದರು. ಈ ವೇಳೆ ಮಹಿಳೆಯರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತವರೂ ಸೇರಿದಂತೆ ಇನ್ನಿತರ ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆ ದಂಡ ವಸೂಲಿ ಮಾಡಲಾಗಿದೆ. ಬಿಎಂಟಿಸಿ ಬಸ್ ನಿರ್ವಾಹಕರ ವಿರುದ್ಧವೂ 906 ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಕೇವಲ 387 ಪುರುಷ ಪ್ರಯಾಣಿಕರಿಂದಲೇ 38,700 ರೂಪಾಯಿ ದಂಡ ವಸೂಲಿಯಾಗಿದೆ. ಇನ್ನು ಮೋಟಾರು ವಾಹನ ಕಾಯ್ದೆ ಅನ್ವಯ ಅಧಿಕಾರಿಗಳಿಂದ ದಂಡ ವಸೂಲಿ ಮಾಡಲಾಗಿದೆ.

ಇನ್ನು ಆಗಸ್ಟ್​ 10 ರಂದು  ಬಿಎಂಟಿಸಿ ಬಸ್​​ಗಳಲ್ಲಿ ಟಿಕೆಟ್​ ರಹಿತ ಪ್ರಯಾಣ, ಮಹಿಳಾ ಪ್ರಯಾಣಿಕರ ಸೀಟ್​ನಲ್ಲಿ ಕುಳಿತುಕೊಂಡಿರುವುದಕ್ಕೆ ಸೇರಿ ವಿವಿಧ ಪ್ರಕರಣಗಳಲ್ಲಿ ಜುಲೈ ತಿಂಗಳಲ್ಲಿ 3285 ಪ್ರಯಾಣಿಕರಿಂದ ಒಟ್ಟು 6,20,510 ರೂಪಾಯಿ ವಸೂಲಿ ಮಾಡಲಾಗಿತ್ತು ಎಂದು ಬಿಎಂಟಿಸಿ ತಿಳಿಸಿತ್ತು. ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಕೂಡ ಹೊರಡಿಸಿದ್ದು, 15198 ಟ್ರಿಪ್​ಗಳನ್ನು ಬಿಎಂಟಿಸಿಯ ಅಧಿಕಾರಿಗಳು ತಪಾಸಣೆ ಮಾಡುವ ಮೂಲಕ ದಾಖಲೆಯ ಮೊತ್ತವನ್ನು ಸಂಗ್ರಹಿಸಿದ್ದರು.

ಇದನ್ನೂ ಓದಿ: ಬಿಎಂಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ; ನಿಮ್ಮ ರೂಟ್ ಬಸ್ ಎಲ್ಲಿದೆ? ಹತ್ತಿರದ ನಿಲ್ದಾಣದ ಬಗ್ಗೆ ಮೊಬೈಲ್​ನಲ್ಲೇ ಸಿಗುತ್ತೆ ಮಾಹಿತಿ

ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಜುಲೈ ತಿಂಗಳಲ್ಲಿ ಒಟ್ಟು 15198 ಟ್ರಿಪ್‌ಗಳನ್ನು ತಪಾಸಿಸಿ 2953 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ. 5,87,310 ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 925 ಪ್ರಕರಣಗಳನ್ನು ದಾಖಲಿಸಿದ್ದರು. ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 332 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 33,200, ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿತ್ತು.

ಇನ್ನು ಈ ಕುರಿತು ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್​, ದಿನದ ಪಾಸು ಅಥವಾ ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸಬೇಕು ಎಂದು ಮನವಿ ಮಾಡಿತ್ತು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯುವುದರೊಂದಿಗೆ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ ಎಂದು ಪ್ರಕಟಣೆ ಹೊರಡಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.