ಬೆಂಗಳೂರು: ನಗರದಲ್ಲಿ ಅಮಾನವೀಯ ಘಟನೆಯೊಂದು ಸಂಭವಿಸಿದೆ. ಕಿಡಿಗೇಡಿಗಳು ಬೀದಿ ನಾಯಿಯನ್ನು(Stray Dog) ಕಟ್ಟಿ ಹಾಕಿ ಥಳಿಸಿ ಆ್ಯಸಿಡ್ ಹಾಕಲು ಯತ್ನಿಸಿದ್ದಾರೆ. ಮಾರ್ಚ್ 4 ರ ರಾತ್ರಿ 10 ಗಂಟೆಗೆ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಈ ಸಂಬಂಧ ಆರೋಪಿಗಳಾದ ಅನ್ಸರ್, ವಾಸಿಂ, ಇಸ್ಮಾಯಿಲ್, ಅಯಾಜ್, ಅಶ್ರಫ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 4 ರ ರಾತ್ರಿ 10 ಗಂಟೆಗೆ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಕೆಲ ಕಿಡಿಗೇಡಿಗಳು ಬೀದಿ ನಾಯಿಯನ್ನು ಕಟ್ಟಿ ಹಾಕಿ ಅದಕ್ಕೆ ಹೊಡೆದು ಆ್ಯಸಿಡ್ ಹಾಕಲು ಯತ್ನಿಸಿದ್ದರೆ. ಇದನ್ನು ಗಮನಿಸಿದ ಸಫಿಯಾ ಎಂಬ ಮಹಿಳೆ ಕಿಡಿಗೇಡಿಗಳಿಗೆ ಪ್ರಶ್ನೆ ಮಾಡಿದ್ದಕ್ಕೆ ಕಿರಾತಕರು ಮಹಿಳೆಯ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ. ಸದ್ಯ ಈ ಬಗ್ಗೆ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆಂದು ಮಹಿಳೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನನ್ವಯ ಪೊಲೀಸರು ಐವರ ವಿರುದ್ಧ ಐಪಿಸಿ ಸೆಕ್ಷನ್ 34, 428, 429 ಹಾಗೂ 354ರಡಿ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳಾದ ಅನ್ಸರ್, ವಾಸಿಂ, ಇಸ್ಮಾಯಿಲ್, ಅಯಾಜ್, ಅಶ್ರಫ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗಾಯಗೊಂಡಿರುವ ನಾಯಿಗೆ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ಗಾಯಗೊಂಡಿರುವ ನಾಯಿಗೆ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ದುರ್ಮರಣ
ಬೆಂಗಳೂರಿನ ಯಶವಂತಪುರದ ಬಿಹೆಚ್ಎಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಡೆಂಟಲ್ ವಿದ್ಯಾರ್ಥಿ ಮತ್ತಿನ್(22) ಮೃತಪಟ್ಟಿದ್ದಾರೆ. ಬೈಕ್ನಲ್ಲಿ ತೆರಳುವಾಗ ಖಾಸಗಿ ಟೋಯಿಂಗ್ ವಾಹನಕ್ಕೆ ಮತ್ತಿನ್ ಡಿಕ್ಕಿ ಹೊಡೆದಿದ್ದಾರೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿನ್ನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ತಲೆಗೆ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಯಶವಂತಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟೋಯಿಂಗ್ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಸ್ಗೆ ಟ್ಯಾಕ್ಟರ್ ಡಿಕ್ಕಿ, 7 ಮಂದಿಗೆ ಗಾಯ
ಇನ್ನು ಮತ್ತೊಂದು ಕಡೆ ವಿಜಯನಗರದ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಬಂಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಇಟ್ಟಿಗೆ ಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಬಸ್ಗೆ ಡಿಕ್ಕಿ ಹೊಡೆದಿದೆ. ಹೊಸಪೇಟೆ ಪಟ್ಟಣದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ಗೆ ಟ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸಾರಿಗೆ ಬಸ್ನಲ್ಲಿದ್ದ 7 ಜನ ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳು ಮರಿಯಮ್ಮನಹಳ್ಳಿ ಹಾಗೂ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನಾನು ಭಯೋತ್ಪಾದಕನಲ್ಲ ಎಂದು ಜನ ಸಾಬೀತು ಮಾಡಿದ್ದಾರೆ, ಇದು ಕೇವಲ ಆರಂಭ; ಪಂಜಾಬ್ನಲ್ಲಿ ಆಪ್ ಗೆಲುವಿಗೆ ಕೇಜ್ರಿವಾಲ್ ಸಂತಸ
ಫ್ರೀಡಂ ಪಾರ್ಕ್, ಬೆಂಗಳೂರು: ಹೆಜ್ಜೇನು ದಾಳಿಯಲ್ಲಿ 10 ಪೊಲೀಸರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
Published On - 10:13 pm, Thu, 10 March 22