BBMP ಅಧಿಕಾರಿಗಳ ವಿರುದ್ದ FIR ಹಾಕಬೇಕು; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಬೀದಿ ಬದಿ ವ್ಯಾಪಾರಿಗಳು

| Updated By: ಆಯೇಷಾ ಬಾನು

Updated on: Nov 28, 2023 | 1:11 PM

ಕಳೆದ ಕೆಲ ದಿನಗಳಿಂದ ಬಿಬಿಎಂಪಿ ತನ್ನ ವ್ಯಾಪ್ತಿಯ ಬೀದಿ ಬದಿಯ ಅಂಗಡಿಗಳನ್ನು ತೆರವು ಮಾಡುವ ಕಾರ್ಯ ಮಾಡುತ್ತಿದೆ. ಹೀಗಾಗಿ ಇದರಿಂದ ನೊಂದ ಬೀದಿ ಬದಿ ವ್ಯಾಪಾರಿಗಳು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರ್ಕಾರವೇ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ‌ ಚೀಟಿ ಕೊಟ್ಟಿದೆ. ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರ ಸಾಲ ಸೌಲಭ್ಯ ಕೊಡುತ್ತೆ. ಬಿಬಿಎಂಪಿ ಕಾನೂನು ಬಾಹಿರ ಎತ್ತಂಗಡಿ ಮಾಡ್ತಿರೋದನ್ನ ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.

BBMP ಅಧಿಕಾರಿಗಳ ವಿರುದ್ದ FIR ಹಾಕಬೇಕು; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಬೀದಿ ಬದಿ ವ್ಯಾಪಾರಿಗಳು
ಬಿಬಿಎಂಪಿ
Follow us on

ಬೆಂಗಳೂರು, ನ.28: ಬಿಬಿಎಂಪಿ (BBMP) ತನ್ನ ವ್ಯಾಪ್ತಿಯ ನಾಲ್ಕು ವಲಯಗಳಾದ ಪಶ್ಚಿಮ, ಯಲಹಂಕ, ಆರ್.ಆರ್ ನಗರ ಮತ್ತು ದಕ್ಷಿಣ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳ (Roadside Shops) ಜೊತೆಗೆ ರಸ್ತೆ ಬಳಿ ನಿಲ್ಲಿಸಿದ್ದ ಬಿಡಿ ವಾಹನಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿಸುತ್ತಿದೆ. ಈ ಸಂಬಂಧ ಈಗ ಬೀದಿಬದಿ ವ್ಯಾಪಾರಿಗಳ ಒಕ್ಕೂಟ ಸಂಘಟನೆ ಮುಖಂಡ ಬಾಬು ಸುದ್ದಿಗೋಷ್ಠಿ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರಿಗಳನ್ನ ಎತ್ತಂಗಡಿ ಮಾಡ್ತಿದ್ದಾರೆ. ಅಧಿಕಾರಿಗಳ ವಿರುದ್ದ ಎಫ್‌ಐ‌ಆರ್ ಹಾಕಬೇಕು ಎಂದು ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬು ಅವರು, ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರಿಗಳನ್ನ ಎತ್ತಂಗಡಿ ಮಾಡ್ತಿದ್ದಾರೆ. ಯಾವುದೇ ನೋಟಿಸ್ ನೀಡದೇ ಎತ್ತಂಗಡಿ ಮಾಡಿದ್ದಾರೆ. ಕಾನೂನಿಗೆ ಬಿಬಿಎಂಪಿ ಅಧಿಕಾರಿಗಳು ಕ್ಯಾರೇ ಅಂತಿಲ್ಲ. ಚುನಾವಣೆ ವೇಳೆ ರಾಹುಲ್ ಗಾಂಧಿಯೊಂದಿಗೆ ಒಂದು ಸಂವಾದ ಏರ್ಪಡಿಸಲಾಗಿತ್ತು. ಅಲ್ಲಿ ರಾಹುಲ್ ಗಾಂಧಿ ಬೀದಿ ವ್ಯಾಪಾರಿಗಳು ಬೆಂಗಳೂರಿನ ಆಸ್ತಿ ಎಂದಿದ್ದರು. ಸರ್ಕಾರವೇ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ‌ ಚೀಟಿ ಕೊಟ್ಟಿದೆ. ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರ ಸಾಲ ಸೌಲಭ್ಯ ಕೊಡುತ್ತೆ. ಬಿಬಿಎಂಪಿ ಕಾನೂನು ಬಾಹಿರ ಎತ್ತಂಗಡಿ ಮಾಡ್ತಿರೋದನ್ನ ನಿಲ್ಲಿಸಬೇಕು. ಅಧಿಕಾರಿಗಳ ವಿರುದ್ದ ಎಫ್‌ಐ‌ಆರ್ ಹಾಕ್ಬೇಕು ಎಂದು ಆಕ್ರೋಶ ಹೊರ ಹಾಕಿದರು.

ಇದನ್ನೂ ಓದಿ: ಬೀದಿ ಬದಿ ವ್ಯಾಪಾರಸ್ತರಿಗೆ ಶಾಕ್​​ ನೀಡಿದ ಬಿಬಿಎಂಪಿ ಅಧಿಕಾರಿಗಳು: ಬೆಂಗಳೂರಿನ ಹಲವೆಡೆ ಅಂಗಡಿ ತೆರವು

ಇನ್ನು ಬೀದಿ ಬದಿ ವ್ಯಾಪಾರಿ ವನಜಾಕ್ಷಿ ಮಾತನಾಡಿದ್ದು, ಏಕಾಏಕಿ ಅಂಗಡಿಗಳನ್ನು ಎತ್ತಂಗಡಿ‌ ಮಾಡಲಾಗ್ತಿದೆ. ಸರ್ಕಾರವೇ ನಮಗೆ ಗುರುತಿನ ಚೀಟಿ ಕೊಟ್ಟಿದೆ. ಲಾಕ್ ಡೌನ್ ನಿಂದ ಸಾಕಷ್ಟು ಸಮಸ್ಯೆ ಅನುಭವಿಸಿದ್ದೆವು. ಜೀವನ ಮಾಡೋಕೆ ಸಾಧ್ಯವಾಗುತ್ತಿಲ್ಲ. ಬ್ರ್ಯಾಂಡ್ ಬೆಂಗಳೂರಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಜಾಗವಿಲ್ವಾ? ಏಕಾಏಕಿಯಾಗಿ ಬಂದು ತೆರವು ಮಾಡಿದ್ರೆ ನಮ್ಮ ಬದುಕು ಏನ್ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ