ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರು ನಗರದಲ್ಲಿ ನೀರಿನ ಅಭಾವ; ಪಾಲಿಕೆಯಿಂದ ಕೊರೆಸಿದ ಬೋರ್ ವೆಲ್ ರಿ ಬೋರಿಂಗ್ಗೆ ಆಗ್ರಹ
ವಾಡಿಕೆಗಿಂತ ಮಳೆಯ ಪ್ರಮಾಣದಲ್ಲಿ ಕಡಿಮೆಯಾದ್ದರಿಂದ ಬೇಸಿಗೆ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲಿ ನೀರಿನ ಅಭಾವ ಎದುರಾಗಿದೆ. ಈಗಾಗಲೇ ಬಿಬಿಎಂಪಿಯಿಂದ ಕೊರೆಸಿದಂತಹ ಅದೆಷ್ಟೋ ಬೊರ್‌ವೆಲ್ ಗಳಲ್ಲಿ ನೀರು ಕಡಿಮೆಯಾದರೆ ಕೆಲ ಬೊರ್‌ವೆಲ್‌ಗಳಲ್ಲಿ ನೀರು ಕೂಡ ಬರದೇ ಬತ್ತಿ ಹೋಗಿವೆ. ಹೀಗಾಗಿ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು, ನ.28: ಈ ಬಾರಿ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ರಾಜ್ಯ ರಾಜಧಾನಿಯಲ್ಲಿ ನೀರಿನ ಅಭಾವ ಎದುರಾಗಿದೆ (Bengaluru Water Crisis). ತಮಿಳುನಾಡಿಗೆ ಕಾವೇರಿ ಹರಿ ಬಿಟ್ಟ ಪರಿಣಾಮ ಕೆಲ ಏರಿಯಾಗಳಲ್ಲಿ ಬೇಡಿಕೆಯಂತೆ ಕಾವೇರಿ ನೀರು ಕೂಡ ಸ್ಪಲ್ಲೈ ಆಗುತ್ತಿಲ್ಲ. ಕೆಲವೆಡೆ ಈಗಾಗಲೇ ಬೋರ್ ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಇನ್ನೂ ಬಿಬಿಎಂಪಿಯಿಂದ (BBMP) ಕೊರೆಸಿದ ಬೋರ್ ವೆಲ್ ಗಳಲ್ಲಿನೀರು ಇದ್ದರು ಕೆಟ್ಟು ನಿಂತು ಹೋಗಿವೆ ಅವುಗಳನ್ನಾದರು ಪುನರ್ ಆರಂಭವಿಸುವಂತೆ ಆಗ್ರಹ ಕೇಳಿ ಬಂದಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆ ಹಿನ್ನಲೆ ಜಲ ಅಂತರಮಟ್ಟ ಕುಸಿತ ಕಂಡಿದೆ. ಇದರಿಂದಾಗಿ ಬೋರ್‌ವೆಲ್ ಗಳಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿದೆ. ಈಗಾಗಲೇ ಬಿಬಿಎಂಪಿಯಿಂದ ಕೊರೆಸಿದಂತಹ ಅದೆಷ್ಟೋ ಬೊರ್‌ವೆಲ್ ಗಳಲ್ಲಿ ನೀರು ಕಡಿಮೆಯಾದರೆ ಕೆಲ ಬೊರ್‌ವೆಲ್‌ಗಳಲ್ಲಿ ನೀರು ಕೂಡ ಬರದೇ ಬತ್ತಿ ಹೋಗಿವೆ. ಇತ್ತ ಸ್ವಂತ ಮನೆಗಳಲ್ಲೂ ಕೊರೆಸಿದ್ದ ಬೊರ್‌ವೆಲ್ ಗಳಲ್ಲೂ ನೀರಿನ ಪ್ರಮಾಣದಲ್ಲೂ ಇಳಿಮುಖವಾಗಿದೆ. ಈ ಹಿಂದೆ ಬೊರ್ ವೆಲ್ ಗಳಲ್ಲಿ ಸಾಕಷ್ಟು ನೀರು ಬರುತ್ತಿತ್ತು. ಇದೀಗ ಮೊದಲಿನ ಹಾಗೆ ನೀರು ಬರುತ್ತಿಲ್ಲ. ಈಗ ಮಳೆಗಾಲ ಕೂಡ ಮುಗಿಯುತ್ತ ಬಂದಿದ್ದು ಬೇಸಿಗೆ ಆರಂಭ ಕಾಲಕ್ಕೂ ಮುನ್ನವೇ ನೀರಿನ ಕೊರತೆ ಉಂಟಾಗುತ್ತಿದೆ. ಹೀಗಾಗಿ ಕಾವೇರಿ ನೀರು ಬೇಕು ಅಂತ ಬೆಂಗಳೂರು ನಿವಾಸಿಗಳು ಆಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ ಬೆಂಗಳೂರು ದಕ್ಷಿಣ ವಲಯದ ಬೇಗೂರು ವಾರ್ಡ್‌ನಲ್ಲಿ ಬಿಬಿಎಂಪಿಯಿಂದ ಕೊರೆಸಲಾದ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಜನರು ಒಂದು ಟ್ಯಾಂಕರ್ ನೀರಿಗೆ 400 ರಿಂದ 500 ಹಾಗೂ 600 ರೂಪಾಯಿ ವರೆಗೆ ಅನಿವಾರ್ಯವಾಗಿ ಹಣ ಕೊಟ್ಟು ನೀರು ಪಡೆಯಬೇಕಾದ ಪರಸ್ಥಿತಿ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿಲ್ಲ ಎಂದು ಜನರು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: BBMP ಅಧಿಕಾರಿಗಳ ವಿರುದ್ದ FIR ಹಾಕಬೇಕು; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಬೀದಿ ಬದಿ ವ್ಯಾಪಾರಿಗಳು
ಇನ್ನೂ ಮಹಾಲಕ್ಷ್ಮೀ ಲೆಔಟ್, ಕುರಬರಹಳ್ಳಿ, ಮಂಜುನಾಥನಗರ, ಮಲ್ಲೇಶ್ವರಂನ ಕೆಲವೆಡೆ ಕಾವೇರಿ ನೀರು ವಾರಕ್ಕೆ ಮೂರು ಬಾರಿ ಮಾತ್ರ ಬಿಡ್ಲೂಎಸ್‌ಎಸ್‌ಬಿಯಿಂದ ನೀರು ನೀರು ಸರಬರಾಜು ಆಗುತ್ತಿದೆ. ದಿನ ಬಳಕೆಗೆ ನೀರು ಸಾಕಾಗುತ್ತಿಲ್ಲ ಹೀಗಾಗಿ ಪಾಲಿಕೆಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಗರದಲ್ಲಿ ಬೋರ್‌ವೆಲ್‌ಗಳನ್ನ ಕೊರೆಸಲಾಗಿದೆ. ಈಗ ಕೊರೆಸಿದ ಬೋರ್ ವೆಲ್ ಳನ್ನ ರಿ ಬೋರಿಂಗ್ ಮಾಡುವ ಕೆಲಸ ಆಗಬೇಕು. ಪಾಲಿಕೆ ಬೋರ್ ವೆಲ್ ಕೊರೆಸಿ BWSSB ಯವರಿಗೆ ನಿರ್ವಹಣೆಗೆ ಕೊಡುತ್ತೆ ಅವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೆಲ ಬೋರ್ ವೆಲ್ ಗಳು ಬತ್ತಿವೆ. ಇನ್ನೂ ಕೆಲವುಗಳಲ್ಲಿ ನೀರು ಇದೆ. ಆದರೆ ಕೆಟ್ಟುನಿಂತು ಹೋಗಿವೆ. ಅವುಗಳನ್ನು ಸರಿಯಾದ ನಿರ್ವಹಣೆ ಮಾಡಿ ನೀರು ಪೊರೈಕೆ ಮಾಡಬೇಕು. ಬತ್ತಿದ ಬೋರ್ ವೆಲ್ ಗಳ ರೀ ಬೋರಿಂಗ್ ಮೂಲಕ ನೀರು ಪೂರೈಸುವ ಕೆಲಸ ಆಗಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ