ಮನೆಯಲ್ಲೇ 25 ಕೋಟಿ ರೂ, ಮೌಲ್ಯದ ಡ್ರಗ್ಸ್ ತಯಾರಿಕೆ, 350 ಗ್ರಾಹಕರ ಜತೆ ಸಂಪರ್ಕ: ತನಿಖೆ ವೇಳೆ ಡ್ರಗ್ಸ್ ಪೆಡ್ಲರ್ ಬಾಯ್ಬಿಟ್ಟ ಸತ್ಯ
ಹೊಸ ವರ್ಷಕ್ಕೆ ಡ್ರಗ್ಸ್ ಮಾರಾಟದಲ್ಲಿ 25 ಕೋಟಿ ಟಾರ್ಗೆಟ್ ಇಟ್ಟುಕೊಂಡಿದ್ದ ಬೆಂಜಮಿನ್, ಇನ್ನೇನು ಡ್ರಗ್ಸ್ ತಯಾರಿಕೆ ಶುರು ಮಾಡುವಾಗಲೇ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ತನಿಖೆಗೆ ಒಳಪಡಿಸಿದ್ದು ಅನೇಕ ವಿಚಾರಗಳು ಬಯಲಾಗುತ್ತಿವೆ, ಆದರೆ ಆರೋಪಿ ತನ್ನ ಗ್ರಾಹಕರ ಬಗ್ಗೆ ಯಾವುದೇ ಸುಳಿವನ್ನು ನೀಡುತ್ತಿಲ್ಲ.
ಬೆಂಗಳೂರು, ನ.28: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಹೊರವಲಯದ ಮನೆಯಲ್ಲೇ ಡ್ರಗ್ಸ್ (Drugs) ತಯಾರಿಸಿ ಸಿಕ್ಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ (CCB Police) ತನಿಖೆ ವೇಳೆ ಸ್ಪೋಟಕ ವಿಚಾರ ಬಯಲಾಗಿದೆ. ಬಂಧಿತ ವಿದೇಶಿ ಫೆಡ್ಲರ್ ಬೆಂಜಮಿನ್ ಸ್ಪೋಟಕ ಮಾಹಿತಿ ಬಾಯಿಬಿಟ್ಟಿದ್ದಾನೆ. ಹೊಸ ವರ್ಷದ ವೇಳೆಗೆ 25 ಕೋಟಿ ಮೌಲ್ಯದ ಡ್ರಗ್ಸ್ ಮಾರಾಟ ಮಾಡುವ ಬಗ್ಗೆ ಆರೋಪಿ ಬೆಂಜಮಿನ್ ಪ್ಲ್ಯಾನ್ ಮಾಡಿಕೊಂಡಿದ್ದ. ಅಲ್ಲದೆ ಪ್ರತಿ ದಿನ ಡ್ರಾಗ್ಸ್ ಖರೀದಿಸುವ 300-350 ಗ್ರಾಹಕರು ಇವನ ಜೊತೆ ಸಂಪರ್ಕದಲ್ಲಿದ್ದರು ಎಂದು ಆರೋಪಿ ಬೆಂಜಮಿನ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ.
ಹೊಸ ವರ್ಷಕ್ಕೆ ಡ್ರಗ್ಸ್ ಮಾರಾಟದಲ್ಲಿ 25 ಕೋಟಿ ಟಾರ್ಗೆಟ್ ಇಟ್ಟುಕೊಂಡಿದ್ದ ಬೆಂಜಮಿನ್, ಇನ್ನೇನು ಡ್ರಗ್ಸ್ ತಯಾರಿಕೆ ಶುರು ಮಾಡುವಾಗಲೇ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ದಾನೆ. ಲಾಕ್ ಆದ ವೇಳೆಯೇ 10 ಕೋಟಿ ಮೌಲ್ಯದ ಡ್ರಗ್ಸ್ ನ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ನಗರದಲ್ಲಿ ಬೆಂಜಮಿನ್ಗೆ 300-350 ಕನ್ಸ್ಯೂಮರ್ಸ್ ಸಂಪರ್ಕ ಇರೋದು ಬಯಲಾಗಿದೆ. ಪ್ರತಿಯೊಬ್ಬರೂ ನಿತ್ಯ ಇಂತಿಷ್ಟು ಅಂತ ಡ್ರಗ್ಸ್ ಖರೀದಿ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ ಬೆಂಜಮಿನ್ ಅವರು ಯಾರು ಅನ್ನೋದರ ಬಗ್ಗೆ ಬಾಯ್ಬಿಟ್ಟಿಲ್ಲ. ಟೆಕ್ನಿಕಲ್ ಎವಿಡೆನ್ಸ್ ಕಲೆಕ್ಟ್ ಮಾಡೋದೆ ಸಿಸಿಬಿಗೆ ಈಗ ದೊಡ್ಡ ಸವಾಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್ ಸಿಂಡಿಕೇಟ್ ಭೇದಿಸಿದ ಸಿಸಿಬಿ ಪೊಲೀಸರು, ಓರ್ವ ಅರೆಸ್ಟ್
ಗ್ರಾಹಕರ ಜೊತೆ ಬೆಂಜಮಿನ್ ಸಂಪರ್ಕದ ಮಾಡ್ತಾ ಇದ್ದಿದ್ದು ಒಂದು ಆಪ್ ಮೂಲಕ. Botiam ಅನ್ನೋ ಆಪ್ ಮೂಲಕ ಮಾತನಾಡ್ತಿದ್ದ. ಈ ಆಪ್ ಮೂಲಕ ಫೋನ್ ಮಾಡಿ ಮಾತನಾಡಿದ್ರೆ ಯಾವುದೇ ಸಾಕ್ಷ್ಯಗಳು ಸಿಗಲ್ಲ. ಎರಡು ನಿಮಿಷಕ್ಕೆ ಈ ಆಪ್ ನಲ್ಲಿ ಆಟೋಮೆಟಿಕ್ ಆಗಿ ಕಾಲ್ ಕಟ್ ಆಗುತ್ತೆ. ಹೀಗಾಗಿ ಇದರ ಮೂಲಕವೇ ಗ್ರಾಹಕರ ಜೊತೆ ಆರೋಪಿ ಬೆಂಜಮಿನ್ ಡ್ರಗ್ಸ್ ಡೀಲ್ ಮಾಡ್ತಿದ್ದ.
ದೆಹಲಿ ಹಾಗೂ ಮುಂಬೈನಿಂದ ರೈಲಿನ ಮೂಲಕ ಡ್ರಗ್ಸ್ ತಯಾರಿಕಾ ಸಾಮಗ್ರಿಗಳನ್ನು ತರಿಸುತ್ತಿದ್ದ. ಡಿಸೆಂಬರ್ ಮೊದಲ ವಾರಕ್ಕೆ 25 ಕೋಟಿಯಷ್ಟು ಡ್ರಗ್ಸ್ ತಯಾರಿಕೆಗೆ ಫ್ಲಾನ್ ಮಾಡಿದ್ದ. ಆದರೆ ಅರ್ಧಂಬರ್ಧ ಆಗುವಷ್ಟರಲ್ಲಿ ಸಿಸಿಬಿ ಕೈಗೆ ಲಾಕ್ ಆಗಿದ್ದಾನೆ. 10 ದಿನಗಳ ಕಾಲ ವಿಚಾರಣೆ ಮಾಡಿದರೂ ತನ್ನ ಕನ್ಸ್ಯೂಮರ್ಸ್ ಬಗ್ಗೆ ಆರೋಪಿ ಎಲ್ಲಿಯೂ ಸುಳಿವು ನೀಡುತ್ತಿಲ್ಲ. ಹೀಗಾಗಿ ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ಮಾಡುವ ಬಗ್ಗೆ ಸಿಸಿಬಿ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ