ಬೆಂಗಳೂರಿನಲ್ಲಿ ಡ್ರಗ್ಸ್ ಸಿಂಡಿಕೇಟ್ ಭೇದಿಸಿದ ಸಿಸಿಬಿ ಪೊಲೀಸರು, ಓರ್ವ ಅರೆಸ್ಟ್
ಬಿಹಾರದಲ್ಲಿ ಕುಳಿತುಕೊಂಡು ಬೆಂಗಳೂರಿನಲ್ಲಿ 2018 ರಿಂದ ವ್ಯವಸ್ಥತವಾಗಿ ಡ್ರಗ್ಸ್ ಸಪ್ಲೇ ಸಿಂಡಿಕೇಟ್ ನಡೆಸುತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪಿಟ್ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಅರೆಸ್ಟ್ ಮಾಡಲಾಗಿದ್ದು. ಮುಂದಿನ ಒಂದು ವರ್ಷಗಳ ಕಾಲ ಪರಪ್ಪನ ಅಗ್ರಹಾರಕ್ಕೆ ಆರೋಪಿಯನ್ನು ಶಿಫ್ಟ್ ಮಾಡಲಾಗುತ್ತೆ.
ಬೆಂಗಳೂರು, ನ.24: drugs ಮಾಡಲಾಗಿದೆ. ಬಿಹಾರದಲ್ಲಿ ಕುಳಿತು ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೇ ಸಿಂಡಿಕೇಟ್ (Drugs Supply Syndicate) ನಡೆಸುತಿದ್ದ ಅರೋಪಿ ಅಖಿಲೇಶ್ ಕುಮಾರ್ ಸಿಂಗ್ ಎಂಬುವನನ್ನು ವಿಷೇಶ ಕಾಯ್ಡೆ ಅಡಿಯಲ್ಲಿ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. 2018 ರಿಂದ ವ್ಯವಸ್ಥತವಾಗಿ ದಂಧೆಯಲ್ಲಿ ಸಕ್ರಿಯವಾಗಿದ್ದ ಆರೋಪಿಯನ್ನು ಪಿಟ್ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಅರೆಸ್ಟ್ (Arrest) ಮಾಡಲಾಗಿದ್ದು ಮುಂದಿನ ಒಂದು ವರ್ಷಗಳ ಕಾಲ ಪರಪ್ಪನ ಅಗ್ರಹಾರಕ್ಕೆ ಆರೋಪಿಯನ್ನು ಶಿಫ್ಟ್ ಮಾಡಲಾಗುತ್ತೆ.
ಬೆಂಗಳೂರಿನ ಬಾಗಲೂರಿನಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದ ಆರೋಪಿ ಅಖಿಲೇಶ್, ಎಂಟು ಜನ ಬಿಹಾರದ ಹುಡುಗರನ್ನು ನೇಮಿಸಿದ್ದ. ಅವರಿಗೆ ತಿಂಗಳಿಗೆ ಮೂವತ್ತು ಸಾವಿರ ಸಂಬಳ ನೀಡ್ತಿದ್ದ. ಬಿಹಾರದಿಂದ ಬೆಂಗಳೂರಿಗೆ ಗಾಂಜಾ ಮತ್ತು ಎಂಡಿಎಂಎ ಕಳಿಸುತಿದ್ದ. ನಂತರ ಬಾಗಲೂರಿನಲ್ಲಿ ಇದ್ದ ಯುವಕರು ಜೋಮ್ಯಾಟೋ, ಸ್ವಿಗ್ಗಿ, ಡನ್ಜೊ ಸಮವಸ್ತ್ರ ಹಾಕಿ ಸಪ್ಲೆ ಮಾಡ್ತಿದ್ರು. ಯಾರಿಗೆ ಎಲ್ಲಿಗೆ ಎಷ್ಟು ಗಾಂಜಾ ಸಪ್ಲೆ ಮಾಡ್ಬೇಕು ಎನ್ನುವ ಮಾಹಿತಿ ಸಹ ಬಿಹಾರದಿಂದ ನೀಡ್ತಿದ್ದ. ವ್ಯವಸ್ಥಿತವಾಗಿ ಬೆಂಗಳೂರಿನ ಲೋಕಲ್ ಡ್ರಗ್ಸ್ ಪೆಡ್ಲರ್ಸ್ ಗಳಿಗೆ ಸಪ್ಲೆ ನೀಡ್ತಿದ್ದ. ಈತನ ಸಿಂಡಿಕೇಟ್ ವಿರುದ್ಧ ಆರು ಕೇಸ್ ದಾಖಲಾಗಿತ್ತು. ತನಿಖೆ ವೇಳೆ ಈ ಸಿಂಡಿಕೇಟ್ ನಡೆಸುತ್ತಿರೋದು ಅಖಿಲೇಶ್ ಸಿಂಗ್ ಎಂಬುದು ಬಯಲಾಗಿದೆ. ಹೀಗಾಗಿ ಆರೋಪಿ ಅಖಿಲೇಶ್ನನ್ನು ಪಿಟ್ ಎನ್ಡಿಪಿಎಸ್ ಕಾಯ್ದೆ ಅಡಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಡಬ್ಲಿನ್ನಲ್ಲಿ ಶಾಲೆಯ ಎದುರು ಮಕ್ಕಳಿಗೆ ಚಾಕು ಇರಿತ, ಪರಿಸ್ಥಿತಿ ಉದ್ವಿಗ್ನ
ಕೆ.ಆರ್.ಪುರಂ ರಸ್ತೆಯಲ್ಲಿ ಮಹಿಳೆಯ ಸರಗಳ್ಳತ
ಬೆಂಗಳೂರಿನ ಕೆ.ಆರ್.ಪುರಂ ರಸ್ತೆಯಲ್ಲಿ ಮಹಿಳೆಯ ಸರಗಳ್ಳತನ ಮಾಡಲಾಗಿದ್ದು ಸರಗಳ್ಳತನದ ದೃಶ್ಯ ರಸ್ತೆ ಬದಿ ಅಂಗಡಿಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಹೋಂಡಾ ಆಕ್ಟಿವಾದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮಹಿಳೆಯನ್ನು ಹಿಂಬಾಲಿಸಿಕೊಂಡು ಬಂದು ಕೃತ್ಯ ಎಸಗಿದ್ದಾರೆ. ಏಕಾಏಕಿ ಕುತ್ತಿಗೆಗೆ ಕೈಹಾಕಿ ಸರ ಎಳೆದಿದ್ದರಿಂದ ಮಹಿಳೆ ನೆಲಕ್ಕೆ ಬಿದ್ದಿದ್ದಾರೆ. ಸ್ಥಳೀಯರು ಬೆನ್ನಟ್ಟಿ ಹಿಡಿಯಲು ಯತ್ನಿಸಿದರೂ ಸರಗಳ್ಳರು ಪರಾರಿಯಾಗಿದ್ದಾರೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ