ಡಬ್ಲಿನ್ನಲ್ಲಿ ಶಾಲೆಯ ಎದುರು ಮಕ್ಕಳಿಗೆ ಚಾಕು ಇರಿತ, ಪರಿಸ್ಥಿತಿ ಉದ್ವಿಗ್ನ
ಐರ್ಲೆಂಡ್ನ ರಾಜಧಾನಿ ಡಬ್ಲಿನ್ನಲ್ಲಿ ಶಾಲೆಯ ಹೊರಭಾಗ ಮೂವರು ಮಕ್ಕಳಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಈ ಕಾರಣದಿಂದ ಪ್ರತಿಭಟನಾಕಾರರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದರು, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಕಾನ್ನೆಲ್ ಸೇತುವೆ ಬಳಿ ಲಿಫೆ ನದಿಯ ಮೇಲೆ ಕಾರುಗಳು ಹಾಗೂ ಬಸ್ಗಳಿಗೆ ಬೆಂಕಿ ಹಚ್ಚಲಾಗಿತ್ತು. ಕೆಲವು ಜನರು ಇದೇ ಸಂದರ್ಭದಲ್ಲಿ ಅಂಗಡಿಗಳನ್ನು ಕೂಡ ಲೂಟಿ ಮಾಡಿದರು. ಡಬ್ಲಿನ್ನ ಪಾರ್ನೆಲ್ ಸ್ಕ್ವೇರ್ ಈಸ್ಟ್ನಲ್ಲಿ ನಡೆದ ಚೂರಿ ಇರಿತದಲ್ಲಿ ಐದು ವರ್ಷದ ಬಾಲಕಿಗೆ ಗಂಭೀರ ಗಾಯಗಳಾಗಿವೆ.

ಆದರೆ ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆಯುತ್ತಿವೆ, ಹಲವಾರು ವಾಹನಗಳು ಮತ್ತು ಟ್ರಾಮ್‌ಗೆ ಬೆಂಕಿ ಹಚ್ಚಲಾಗಿದೆ, ಪಟಾಕಿಗಳನ್ನು ಹಚ್ಚಲಾಗುತ್ತಿದೆ.
ಮತ್ತಷ್ಟು ಓದಿ: ಶಿವಮೊಗ್ಗ: ವೈಯಕ್ತಿಕ ಕಾರಣಕ್ಕೆ ಯುವಕರ ನಡುವೆ ಗಲಾಟೆ; 3 ಮಂದಿಗೆ ಚಾಕು ಇರಿತ
ಗಾಯಗೊಂಡವರಲ್ಲಿ ಮೂವರು ಚಿಕ್ಕ ಮಕ್ಕಳು, ಉಳಿದವರು ಅವರ ಪೋಷಕರಾಗಿದ್ದಾರೆ. ಇಬ್ಬರು ಬಾಲಕಿಯರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಐದು ವರ್ಷದ ಬಾಲಕ ಡಿಸ್ಚಾರ್ಜ್ ಆಗಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಪೋಷಕರು ಆಸ್ಪತ್ರೆಯಲ್ಲಿಯೇ ಇದ್ದಾರೆ. ದಾಳಿಯು ಭಯೋತ್ಪಾದನೆಗೆ ಸಂಬಂಧಿಸಿದ್ದಲ್ಲ ಎನ್ನಲಾಗಿದೆ. 50ರ ಆಸುಪಾಸಿನ ವ್ಯಕ್ತಿಯನ್ನು ಬಂಧಿಸಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ