ಬೆಂಗಳೂರಿನಲ್ಲಿ ಅಗ್ನಿ ಅವಘಡ: 5 ಕೋಟಿ ಮೌಲ್ಯದ ಬಟ್ಟೆ, 40 ಬೈಕ್​, BMW ಕಾರು ಭಸ್ಮ

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದ ಮಣಿಪಾಲ್​ ಕಂಟ್ರಿ ರೋಡ್​​ನಲ್ಲಿರುವ ಟಿಂಬರ್​ ಯಾರ್ಡ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಮೊದಲು ಟಿಂಬರ್​ ಯಾರ್ಡ್​ನಲ್ಲಿ ಕಾಣಿಸಿಕೊಂಡಿದೆ, ಬಳಿಕ ಲೋವಬಲ್​ ಸ್ಪೋರ್ಟ್​​ ಹೆಸರಿನ ಗಾರ್ಮೆಂಟ್ಸ್​​​​​​​ ಕಟ್ಟಡ, ವಾಹನ ವಾಶ್​​ ಕೇಂದ್ರಕ್ಕೂ ಹಬ್ಬಿದೆ.

ಬೆಂಗಳೂರಿನಲ್ಲಿ ಅಗ್ನಿ ಅವಘಡ: 5 ಕೋಟಿ ಮೌಲ್ಯದ ಬಟ್ಟೆ, 40 ಬೈಕ್​, BMW ಕಾರು ಭಸ್ಮ
ಟಿಂಬರ್​ ಯಾರ್ಡ್​ನಲ್ಲಿ ಅಗ್ನಿ ಅವಘಡ
Updated By: ವಿವೇಕ ಬಿರಾದಾರ

Updated on: Apr 24, 2024 | 8:30 AM

ಬೆಂಗಳೂರು, ಏಪ್ರಿಲ್​ 24: ನಗರದ ಎಲೆಕ್ಟ್ರಾನಿಕ್ ಸಿಟಿಯ (Electronic City) ಸಿಂಗಸಂದ್ರದ ಮಣಿಪಾಲ್​ ಕಂಟ್ರಿ ರೋಡ್​​ನಲ್ಲಿರುವ ಟಿಂಬರ್​ ಯಾರ್ಡ್​ನಲ್ಲಿ (Timber yard) ಅಗ್ನಿ ಅವಘಡ (Fire Accident) ಸಂಭವಿಸಿದೆ. ಬೆಂಕಿ ಮೊದಲು ಟಿಂಬರ್​ ಯಾರ್ಡ್​ನಲ್ಲಿ ಕಾಣಿಸಿಕೊಂಡಿದೆ, ಬಳಿಕ ಲೋವಬಲ್​ ಸ್ಪೋರ್ಟ್​​ ಹೆಸರಿನ ಗಾರ್ಮೆಂಟ್ಸ್​​​​​​​ ಕಟ್ಟಡ, ವಾಹನ ವಾಶ್​​ ಕೇಂದ್ರಕ್ಕೂ ಹಬ್ಬಿದೆ. ಗಾರ್ಮೆಂಟ್ಸ್​​​​​ ಫ್ಯಾಕ್ಟರಿಗೆ ಬೆಂಕಿ ತಗುಲಿದ ಪರಿಣಾಮ 5 ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆ ನಾಶವಾಗಿದೆ. ವಾಹನ ವಾಶ್ ಕೇಂದ್ರದಲ್ಲಿದ್ದ 40ಕ್ಕೂ ಹೆಚ್ಚು ಬೈಕ್​, BMW ಕಾರು ಭಸ್ಮವಾಗಿದೆ. ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಫ್ಲೈಓವರ್​ನಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು

ಮುಂಜಾನೆ 3 ಗಂಟೆ ಸುಮಾರಿಗೆ ಬೆಂಗಳೂರಿನ ಆನಂದರಾವ್​​​ ಸರ್ಕಲ್ ಫ್ಲೈಓವರ್​ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಉಪ್ಪಾರಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಕರ್ನಾಟಕ ಬ್ಯಾಂಕ್ ATM ನಲ್ಲಿ ಅಗ್ನಿ ಅವಘಡ, 5 ಲಕ್ಷ ಹಣ ಭಸ್ಮ

ಅಪಘಾತ, ಬೈಕ್​ ಸವಾರನಿಗೆ ಗಾಯ

ಕೋಲಾರ: ಶ್ರೀನಿವಾಸಪುರ ತಾಲೂಕಿನ ಜೊನ್ನಪಲ್ಲಿ ಗ್ರಾಮದ ಬಳಿ ಶಾಲಾ ವಾಹನ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಶ್ರೀನಿವಾಸಪುರ ತಾಲೂಕಿನ ವೈ ಹೊಸಕೋಟೆ ಗ್ರಾಮದ ಸುರೇಶ್ ಎಂದು ತಿಳಿದುಬಂದಿದೆ. ರೋಣೂರು ಕ್ರಾಸ್​ನಲ್ಲಿರುವ ವಿಷನ್ ಇಂಡಿಯಾ ಶಾಲೆಯ ವಾಹನ ಬೈಕ್​ಗೆ ಗುದ್ದಿದೆ. ಘಟನಾ ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ