ಆನೇಕಲ್: ಎಲೆಕ್ಟ್ರಾನಿಕ್ ಸಿಟಿಯ ಅಪಾರ್ಟ್ಮೆಂಟ್ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ವಸುಂಧರಾ ಲೇಔಟ್ನ ವಿ ಮ್ಯಾಕ್ಸ್ ಚಾಲೇಟ್ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕೆನ್ನಾಲಿಗೆ ಎರಡು ಫ್ಲ್ಯಾಟ್ಗಳಿಗೆ ಆವರಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಹೊರಗೆ ಓಡಿ ಬಂದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುತ್ತಿದ್ದಾರೆ.
ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಇಲ್ಲ ಎಂದು ಮಾಹಿತಿ ಲಭ್ಯವಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕಾಗಿಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದಾರೆ. ಈ ಅಗ್ನಿ ಅವಘಡ ಘಟನೆ ನಾಯಿ ಒಂದರ ಸಮಯಪ್ರಜ್ಞೆಯಿಂದ ಸಣ್ಣದರಲ್ಲೇ ಮುಗಿದು ಹೋಗಿದೆ. ನಾಯಿಯ ಸಮಯ ಪ್ರಜ್ಞೆ ಕಂಡು ಜನ ಬೆರಗಾಗಿದ್ದಾರೆ.
ಮಳೆಯಿಂದ ರಾಜ್ಯದ ವಿವಿಧೆಡೆ ಅವಾಂತರ
ಬೆಳಗಾವಿ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಕಟಾವು ಮಾಡಿಟ್ಟಿದ್ದ ಭತ್ತದ ಬಣವೆಗಳು ಜಲಾವೃತಗೊಂಡಿವೆ. ವಡಗಾವಿ, ಯಳ್ಳೂರು ಸೇರಿದಂತೆ ಹಲವೆಡೆ ಬಣವೆ ಮುಳುಗಡೆ ಆಗಿವೆ. ಬೆಳಗಾವಿ ತಾಲೂಕಿನ ಬಹುತೇಕ ಗ್ರಾಮಗಳ ರೈತರು ಕಂಗಾಲಾಗಿದ್ದಾರೆ. ಭತ್ತದ ಬೆಳೆ ನೀರುಪಾಲಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ ರೈತರು, ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಅವಾಂತರ ಉಂಟಾಗಿದೆ. ಧಾರಾಕಾರ ಮಳೆಗೆ ಕಾಲುವೆಗಳು ತುಂಬಿ ಹರಿಯುತ್ತಿವೆ. ಕೊಳ್ಳೇಗಾಲದ ಹಳೇ ಕುರುಬರ ಬೀದಿ, ದೇವಾಂಗ ಬೀದಿ, ಅಹಮದ್‌ಪುರ್ ಸ್ಟ್ರೀಟ್‌ಗಳಿಗೆ ಕಾಲುವೆ ನೀರು ನುಗ್ಗಿದೆ.
ಇದನ್ನೂ ಓದಿ: ಮುಂಬೈನ ಸ್ಯಾಮ್‌ಸಂಗ್ ಸರ್ವೀಸ್ ಸೆಂಟರ್ನಲ್ಲಿ ಬೆಂಕಿ; 8 ಅಗ್ನಿಶಾಮಕ ವಾಹನಗಳು ದೌಡು
ಇದನ್ನೂ ಓದಿ: ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅಗ್ನಿ ಅವಘಡ
Published On - 4:18 pm, Wed, 17 November 21