ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಅಗ್ನಿ, ಒಂದು ಬೋಗಿ ಭಸ್ಮ
ಬೆಂಗಳೂರು: ನಿಂತಿದ್ದ ರೈಲಿನ ಎಸಿ ಬೋಗಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಡೆದಿದೆ. ಬಿಕಾನೇರ್‌ನಿಂದ ಯಶವಂತಪುರಕ್ಕೆ ಬಂದು ಸ್ಥಳಾವಕಾಶ ಇಲ್ಲದೆ ಇರುವುದರಿಂದ ಮೂರು ದಿನದ ಹಿಂದೆ ಬಂದಿದ್ದ 16588 ಹವಾ ನಿಯಂತ್ರಿತ ರೈಲು, ಚಿಕ್ಕಬಾಣಾವಾರ ನಿಲ್ದಾಣದಲ್ಲಿ ತಂಗಿತ್ತು. ರೈಲಿನ ಸೀಟ್ ನಂಬರ್ 25ರ ಬಳಿ ಬೆಂಕಿ ಹೊತ್ತುಕೊಂಡಿದ್ದು, ಸುಮಾರು 10 ಸೀಟುಗಳು ಸುಟ್ಟು ಭಸ್ಮವಾಗಿವೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೀಣ್ಯ ಅಗ್ನಿಶಾಮಕ ತಂಡದವರು ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ಮೂರು ದಿನಗಳಿಂದ ನಿಂತಿರುವುದರಿಂದ […]
ಬೆಂಗಳೂರು: ನಿಂತಿದ್ದ ರೈಲಿನ ಎಸಿ ಬೋಗಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ನಡೆದಿದೆ. ಬಿಕಾನೇರ್‌ನಿಂದ ಯಶವಂತಪುರಕ್ಕೆ ಬಂದು ಸ್ಥಳಾವಕಾಶ ಇಲ್ಲದೆ ಇರುವುದರಿಂದ ಮೂರು ದಿನದ ಹಿಂದೆ ಬಂದಿದ್ದ 16588 ಹವಾ ನಿಯಂತ್ರಿತ ರೈಲು, ಚಿಕ್ಕಬಾಣಾವಾರ ನಿಲ್ದಾಣದಲ್ಲಿ ತಂಗಿತ್ತು. ರೈಲಿನ ಸೀಟ್ ನಂಬರ್ 25ರ ಬಳಿ ಬೆಂಕಿ ಹೊತ್ತುಕೊಂಡಿದ್ದು, ಸುಮಾರು 10 ಸೀಟುಗಳು ಸುಟ್ಟು ಭಸ್ಮವಾಗಿವೆ.
ಈ ವೇಳೆ ಸ್ಥಳಕ್ಕಾಗಮಿಸಿದ ಪೀಣ್ಯ ಅಗ್ನಿಶಾಮಕ ತಂಡದವರು ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೈಲು ಮೂರು ದಿನಗಳಿಂದ ನಿಂತಿರುವುದರಿಂದ ಕಿಡಿಗೇಡಿಗಳ್ಯಾರೋ ಧೂಮಪಾನ ಮಾಡಿರುವುದರಿಂದ ಅಗ್ನಿ ಅವಘಡ ಸಂಭವಿಸಿರಬಹುದು ಅಥವಾ ಎಸಿ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ಹಾಗು ಯಶವಂತಪುರ ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.