KGF Babu: ಉದ್ಯಮಿ ಕೆಜಿಎಫ್​​ ಬಾಬು ಚಿಕ್ಕಪೇಟೆಯ ಮನೆ ಮುಂದೆ ಬೆಂಕಿ ಹಾಕಿದ ದೃಷ್ಕರ್ಮಿಗಳು

ಬೆಂಗಳೂರಿನ ಸುಧಾಮನಗರದ ಸಿಕೆಎಸ್​ಇ ಗಾರ್ಡನ್​ನಲ್ಲಿರುವ ಉದ್ಯಮಿ ಕೆಜಿಎಫ್ ಬಾಬು ಹಳೆಯ ಮನೆ ಮುಂದೆ ಬೆಂಕಿ ದುಷ್ಕರ್ಮಿಗಳು ತಡರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

Follow us
TV9 Web
| Updated By: ವಿವೇಕ ಬಿರಾದಾರ

Updated on:Feb 04, 2023 | 12:27 PM

ಬೆಂಗಳೂರು: ಬೆಂಗಳೂರಿನ ಸುಧಾಮನಗರದ ಸಿಕೆಎಸ್​ಇ ಗಾರ್ಡನ್​ನಲ್ಲಿರುವ ಉದ್ಯಮಿ ಕೆಜಿಎಫ್ ಬಾಬು (KGF Babu) ಹಳೆಯ ಮನೆ ಮುಂದೆ ಬೆಂಕಿ ದುಷ್ಕರ್ಮಿಗಳು ತಡರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. CKSE ಗಾರ್ಡನ್ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಸ್ಥಳಕ್ಕೆ ಸಂಪಂಗಿರಾಮನಗರ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಕೆಜಿಎಫ್​ ಬಾಬು ಸಹೋದರ ನೂರ್ ಮೊಹಮ್ಮದ್, ಕೆಜಿಎಫ್​ ಬಾಬು ಸಹೋದರಿ ಶಬ್ನಾಜ್ ಸುಲ್ತಾನ್​​ ವಾಸವಿದ್ದರು. ಘಟನೆ ಸಂಬಂಧ ಕಜಿಎಫ್​ ಬಾಬು ತಂಗಿ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆರ್ ವಿ ದೇವರಾಜ್ ಮಗ ಯುವರಾಜ್ ಹಾಗೂ ಆತನ‌ ಸಹಚರರು ಕೃತ್ಯ ಎಸಗಿದ್ದಾರೆ

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 500 ಮನೆಗಳನ್ನ ಕಟ್ಟೋಕೆ ಮುಂದಾಗಿದ್ದೆ. ಈ ಹಿನ್ನೆಲೆ ಆರ್ ವಿ ಯುವರಾಜ್ ಈ ಬಗ್ಗೆ ನನ್ನ ತಂಗಿಗೆ ಬಂದು ಧಮ್ಕಿ ಹಾಕಿದರು. ಸಿಂಹದ ಬಾಯಿಗೆ ಬಂದು ನಿಮ್ಮಣ್ಣ ನಿಂತಿದ್ದಾರೆ ಅಂತ ದಮ್ಕಿ ಹಾಕಿದ್ದಾರೆ. ನಿನ್ನೆ ಒಂದಷ್ಟು ಜನ ಬಂದು ಬೆಂಕಿ ಹಾಕಿದ್ದಾರೆ. ಆರ್ ವಿ ದೇವರಾಜ್ ಮಗ ಯುವರಾಜ್ ಹಾಗೂ ಆತನ‌ ಸಹಚರರು ಈ ಕೃತ್ಯ ಎಸಗಿದ್ದಾರೆ. ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದೇವೆ. ಇದೇ ರೀತಿ ಆರ್ ವಿ ದೇವರಾಜ್ ನನಗೆ ತೊಂದರೆ ಕೊಡುತ್ತಿದ್ದಾರೆ. ನಾನು ಬಡವರಿಗೆ ಸಹಾಯ ಮಾಡ್ತಾ ಇರೋದನ್ನ ನೋಡಿ ಈ ರೀತಿ ಮಾಡ್ತಾ ಇದ್ದಾರೆ. ನನ್ನ ಕೊಲೆ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೆ ನ್ಯಾಯಬೇಕಾಗಿದೆ ಎಂದು ಉದ್ಯಮಿ ಕೆಜಿಎಫ್ ಬಾಬು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:55 am, Sat, 4 February 23