ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಪಾಲರಿಲ್ಲದೆಯೇ ನಡೆದ ಬೆಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮ

| Updated By: ಆಯೇಷಾ ಬಾನು

Updated on: Sep 11, 2024 | 7:58 AM

ಒನ್ಸ್ ಅಗೈನ್. ಈ ಸಲನೂ ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು ಅಂತ ಪ್ರೂವ್ ಮಾಡಿದ್ದಾರೆ. ಗೋಲ್ಡ್ ಮೆಡಲ್ ಬಾಚಿಕೊಳ್ಳೊದ್ರಲ್ಲೂ ಹೆಣ್ಣು ಮಕ್ಕಳು ಮುಂದಿದ್ದಾರೆ. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಪಾಲರ ಗೈರು ಹಾಜರಿಯಲ್ಲಿ ಬೆಂಗಳೂರು ವಿವಿ ಘಟಿಕೋತ್ಸವ ಕಾರ್ಯಕ್ರಮ ನಡೆದಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಪಾಲರಿಲ್ಲದೆಯೇ ನಡೆದ ಬೆಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವ ಕಾರ್ಯಕ್ರಮ
ಮೊದಲ ಬಾರಿಗೆ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮ
Follow us on

ಬೆಂಗಳೂರು, ಸೆ.11: ನಿನ್ನೆ ನಡೆದ 59ನೇ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ 26 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯ್ತು. ಆದರೆ ಇದೇ ಮೊದಲ ಬಾರಿಗೆ ರಾಜ್ಯಪಾಲರ (Thawar Chand Gehlot) ಗೈರುಹಾಜರಿಯಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯಿತು. ಘಟಿಕೋತ್ಸವಕ್ಕೆ ರಾಜ್ಯಪಾಲರು ಗೈರಾದ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಸಿದ್ದರಾಮಯ್ಯ ಮೂಡಾ ಪ್ರಕರಣದ ಚರ್ಚೆ ಮಧ್ಯೆ ಘಟಿಕೋತ್ಸವದಿಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ದೂರ ಉಳಿದಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಸಚಿವ ಡಾ‌.ಎಂ.ಸಿ.ಸುಧಾಕರ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.

ಸಂಗೀತ ನಿರ್ದೇಶಕ ಗುರು ಕಿರಣ್ ಗೆ ಗೌರವ ಡಾಕ್ಟರೇಟ್

59ನೇ ಬೆಂಗಳೂರು ವಿವಿ ಘಟಿಕೋತ್ಸವದಲ್ಲಿ 31,382 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯ್ತು. ಮ್ಯೂಸಿಕ್ ಡೈರೆಕ್ಟರ್ ಗುರು ಕಿರಣ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನಿಸಲಾಯ್ತು. ಜೊತೆಗೆ ರಾಜ್ಯ ಅಂಗವಿಕಲ ವ್ಯಕ್ತಿಗಳ‌‌ ಅಧಿನಿಯಮದ ಮಾಜಿ ಆಯುಕ್ತ ಕೆ.ಎಸ್.ರಾಜಣ್ಣ ರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯ್ರು. ಈ ವೇಳೆ ಮಾತನಾಡಿದ ಸಂಗೀತ ನಿರ್ದೇಶಕ ಗುರು ಕಿರಣ್, ನನ್ನ ತಂದೆತಾಯಿ ನಾನು ಡಾಕ್ಟರ್ ಆಗಬೇಕೆಂಬ ಕನಸ್ಸು ಕಂಡಿದ್ರು. ಆದ್ರೆ ಇವತ್ತು ಮ್ಯೂಸಿಕ್ ನಲ್ಲಿ ನಾನು ಡಾಕ್ಟರ್ ಆದೆ ಎಂದು ಸಂತಸ ವ್ಯಕ್ತಪಡಿಸಿದ್ರು. ಘಟಿಕೋತ್ಸವ ಕಾರ್ಯಕ್ರಮಕ್ಕೆ ಅಶ್ವಿನಿ ಪುನಿತ್ ರಾಜ್ ಕುಮಾರ್, ನಟಿ ಪ್ರಿಯಾಂಕ ಉಪೇಂದ್ರ ಭಾಗವಹಿಸಿದ್ದರು.

ಇದನ್ನೂ ಓದಿ: 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಇನ್ನೂ ಸಿಕ್ಕಿಲ್ಲ ಇಂಗ್ಲಿಷ್ ಮೀಡಿಯಂ ಪಠ್ಯ ಪುಸ್ತಕಗಳು, ಪೋಷಕರ ಆಕ್ರೋಶ

9 ಚಿನ್ನದ ಪದಕ ಬಾಚಿದ ಅನ್ನಪೂರ್ಣ

ಈ ಬಾರಿ ಒಟ್ಟು 168 ವಿದ್ಯಾರ್ಥಿಗಳು ಚಿನ್ನದ ಪದಕ ಗೆದಿದ್ದಾರೆ. ಪ್ರತಿ ಸಲದಂತೆ ಈ ವರ್ಷವೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ಕೆಮಿಸ್ಟ್ರಿ ವಿಭಾಗದ ವಿದ್ಯಾರ್ಥಿನಿ ಅನ್ನಪೂರ್ಣ ಎಂಬುವವರು 9 ಗೋಲ್ಡ್ ಮೆಡಲ್ ಪಡೆದು ಚಿನ್ನದ ‌ನಗೆ ಬೀರಿದ್ರು. 140 ಜನರಿಗೆ ಪಿಹೆಚ್ ಡಿ ಪದವಿ ಪ್ರಧಾನಿಸಲಾಯ್ತು.

ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮದಲ್ಲಿ ವಿವಿ ವಿಚಾರ ಬಿಟ್ಟು ಎಸ್​​​ಇಪಿ ನೀತಿ ಜಾರಿ ಮಾಡುವ ವಿಚಾರ ಪ್ರಸ್ತಾಪಿಸಿದ್ರು. ಎನ್​ಇಪಿ ಕರ್ನಾಟಕ ವಿರೋಧಿಸಿದೆ, ನಾವು ಈ ವರ್ಷ ಎಸ್ ಇಪಿ ಜಾರಿ ಮಾಡ್ತಾ ಇದ್ದೀವಿ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ