ಬೆಂಗಳೂರು: ಕುಡಿದ ಮತ್ತಿನಲ್ಲಿ ವಿದೇಶಿ ಮಹಿಳೆಯರು ಪುಂಡಾಟ ನಡೆಸಿರುವಂತಹ ಘಟನೆ ನಗರದ ಬ್ರಿಗೇಡ್ ರಸ್ತೆಯಲ್ಲಿ ತಡರಾತ್ರಿ 1;30ರ ವೇಳೆಗೆ ನಡೆದಿದೆ. ಟೈಮ್ ಹೆಚ್ಚಾಗಿದ್ದರಿಂದ ಮನೆಗೆ ತೆರಳಲು ಸೂಚಿಸಿದ್ದು, ಈ ವೇಳೆ ಕಬ್ಬನ್ಪಾರ್ಕ್ ಠಾಣೆ ಪೊಲೀಸರ ಜತೆ ಕಿರಿಕ್ ಮಾಡಲಾಗಿದೆ. ನೈಟ್ ರೌಂಡ್ಸ್ನಲ್ಲಿದ್ದ ಹೊಯ್ಸಳ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ, ಅವರ ಮೇಲೆ ಮೂವರು ಆಫ್ರಿಕನ್ ಮಹಿಳೆಯರಿಂದ ಹಲ್ಲೆಗೆ ಯತ್ನ ಮಾಡಲಾಗಿದೆ ಎನ್ನಲಾಗುತ್ತಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ ಸಿಗರೇಟ್ ಬಾಕ್ಸ್ಗಳನ್ನು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು
ದೇವನಹಳ್ಳಿ (Devanhalli) ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ (Kempegowda International Airport) ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಿಗರೇಟ್ ಬಾಕ್ಸ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು (Customs officers) ಜಪ್ತಿ ಮಾಡಿದ್ದಾರೆ. ದುಬೈನಿಂದ ಅಕ್ರಮವಾಗಿ ತಂದಿದ್ದ 16.38 ಲಕ್ಷ ರೂ. ಮೌಲ್ಯದ ಒಟ್ಟು 84 ವಿದೇಶಿ ಸಿಗರೇಟ್ ಬಾಕ್ಸ್ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: Viral: 16ರ ಬಾಲೆಯನ್ನು ಮದುವೆಯಾದ ಮುದುಕ! ವಿಷಯ ಬಹಿರಂಗವಾಗುತ್ತಿದ್ದಂತೆ ಜಡಲ ಸ್ವಾಮಿ ಎಸ್ಕೇಪ್
ಅಪ್ರಾಪ್ತರು ಮಾದಕ ವಸ್ತು ಸೇವನೆ ಆರೋಪ: ಬೆಂಗಳೂರಿನ ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ
ನಗರದ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ಲೋ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಹುಕ್ಕಾ ಬಾರ್ನ ಪರಿಕರಗಳು, 80 ಸಾವಿರ ಹುಕ್ಕಾ ಪ್ಲೇವರ್ ಮತ್ತು 6,050 ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿಯಿಂದ ರೇಡ್ ಮಾಡಿದ್ದು, ಅಪ್ರಾಪ್ತರು ಹುಕ್ಕಾ ಬಾರ್ನಲ್ಲಿ ಮಾದಕ ವಸ್ತು ಸೇವನೆ ಆರೋಪ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ತಡರಾತ್ರಿ ಸಿಸಿಬಿ ದಾಳಿ ನಡೆಸಿದೆ. ಹುಕ್ಕಾ ಬಾರ್ ಮಾಲೀಕರು, ಮ್ಯಾನೇಜರ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.