Jayanagar Shopping Complex: ಶಾಸಕ ರಾಮಮೂರ್ತಿಗೆ ಮಾಜಿ ಕಾರ್ಪೊರೇಟರ್ ತಿರುಗೇಟು, ಮಾನನಷ್ಟ ಮೊಕದ್ದಮೆ ಕೇಸ್ ಎಚ್ಚರಿಕೆ

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಭೈರಸಂದ್ರ ಮಾಜಿ ಕಾರ್ಪೋರೇಟರ್ ನಾಗರಾಜು ಅವರು ಹಾಲಿ ಶಾಸಕ ರಾಮಮೂರ್ತಿಗೆ ತಿರುಗೇಟು ನೀಡಿದ್ದಾರೆ. ಕಾನೂನು ಬದ್ದವಾಗಿ ಮಳಿಗೆಗಳ ಹಂಚಿಕೆಯಾಗಿದೆ. ಶಾಸಕ ರಾಮಮೂರ್ತಿ ಸೇಡಿನ ರಾಜಕಾರಣ ಮಾಡ್ತಿದ್ದಾರೆ ಎಂದಿದ್ದಾರೆ.

Jayanagar Shopping Complex: ಶಾಸಕ ರಾಮಮೂರ್ತಿಗೆ ಮಾಜಿ ಕಾರ್ಪೊರೇಟರ್ ತಿರುಗೇಟು, ಮಾನನಷ್ಟ ಮೊಕದ್ದಮೆ ಕೇಸ್ ಎಚ್ಚರಿಕೆ
ಜಯನಗರ ಶಾಸಕ ರಾಮಮೂರ್ತಿ, ಭೈರಸಂದ್ರ ಮಾಜಿ ಪಾಲಿಕೆ ಸದಸ್ಯ ಎನ್ ನಾಗರಾಜ್

Updated on: May 31, 2023 | 12:42 PM

ಬೆಂಗಳೂರು: ಬಿಬಿಎಂಪಿ(BBMP) ಹಾಗೂ ಬಿಡಿಎ(BDA) ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿರುವ ಜಯನಗರ ವಾಣಿಜ್ಯ ಕಾಂಪ್ಲೆಕ್ಸ್ ನಲ್ಲಿ(Jayanagar Shopping Complex) ಹೆಚ್ಚುವರಿಯಾಗಿ ಮಳಿಗೆ ನಿರ್ಮಿಸಿ, ಪ್ರಭಾವಿಗಳ ಸಂಬಂಧಿಕರಿಗೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಶಾಂಪಿಗ್ ಕಾಂಪ್ಲೇಕ್ಸ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನ ಪಾಲಿಕೆ ಅಧಿಕಾರಿಗಳು ಸೇರಿದಂತೆ ಅನೇಕರ ಪ್ರಭಾವಿಗಳು ಲೂಟಿ ಮಾಡಿದ್ದಾರೆ ಎಂದು ಜಯನಗರ ಕ್ಷೇತ್ರದ ನೂತನ ಶಾಸಕ ಸಿಕೆ ರಾಮಮೂರ್ತಿ ಆರೋಪ ಮಾಡಿದ್ದು ಭೈರಸಂದ್ರ ಮಾಜಿ ಪಾಲಿಕೆ ಸದಸ್ಯ ಎನ್ ನಾಗರಾಜ್ ತಿರುಗೇಟು ಕೊಟ್ಟಿದ್ದಾರೆ.

ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿ ಭೈರಸಂದ್ರ ಮಾಜಿ ಕಾರ್ಪೋರೇಟರ್ ನಾಗರಾಜು ಅವರು ಹಾಲಿ ಶಾಸಕ ರಾಮಮೂರ್ತಿಗೆ ತಿರುಗೇಟು ನೀಡಿದ್ದಾರೆ. ಕಾನೂನು ಬದ್ದವಾಗಿ ಮಳಿಗೆಗಳ ಹಂಚಿಕೆಯಾಗಿದೆ. ಶಾಸಕ ರಾಮಮೂರ್ತಿ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಕಾಂಪ್ಲೆಕ್ಸ್ ಹೊರಭಾಗದ ಫುಟ್‌ಪಾತ್‌ನಲ್ಲಿರೋ ವ್ಯಾಪಾರಿಗಳ ಬಳಿ ರೋಲ್‌ಕಾಲ್ ಮಾಡಲು ಮುಂದಾಗಿದ್ದಾರೆ. ಕೂಡಲೇ ತೆರವು ಮಾಡುವಂತೆ ಸೂಚಿಸಿ ಖುದ್ದಾಗಿ ಬಂದು ಕಾಣಲು ಹೇಳಿದ್ದಾರೆ. ತಿಂಗಳ ಮಾಮುಲಿ ಫಿಕ್ಸ್ ಮಾಡಲು ಹೊರಟಿದ್ದಾರೆ. ತನ್ನ ವಿರುದ್ಧ ಆರೋಪಕ್ಕೆ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಭೈರಸಂದ್ರ ನಾಗರಾಜ್ ತಿರಗೇಟು ನೀಡಿದ್ದಾರೆ.

ಇದನ್ನೂ ಓದಿ: ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹೆಸರಿನಲ್ಲಿ ಕೋಟಿ-ಕೋಟಿ ಹಣ ಲೂಟಿ ಆರೋಪ: ಮಾಜಿ ಶಾಸಕಿ ವಿರುದ್ಧ ದೂರು ದಾಖಲಿಸಲು ಮುಂದಾದ ಹಾಲಿ ಶಾಸಕ

ಬೆಂಗಳೂರು ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ನೂರಾರು ಅಕ್ರಮ ಮಳಿಗೆಗಳನ್ನು ನಿರ್ಮಿಸಿ, ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆಸಲಾಗಿದೆ. ಜಯನಗರ ನೂತನ ಶಾಂಪಿಗ್ ಕಾಂಪ್ಲೇಕ್ಸ್ ನಲ್ಲಿ 362 ಮಳಿಗೆ ನಿರ್ಮಾಣ ಮಾಡಲಾಗಿದ 362 ಮಳಿಗೆಗಳಲ್ಲಿ 30 ರಿಂದ 35 ಮಳಿಗೆಗಳನ್ನ ಕಾನೂನು ಬಾಹಿರವಾಗಿ ಮಾರಟ ಮಾಡಿದ್ದಾರೆ. ಒಂದು ಮಳಿಗೆಗೆ ಕನಿಷ್ಠ 40 ರಿಂದ 50 ಲಕ್ಷ ಹಣ ಸೂಲಿಗೆ ಮಾಡಲಾಗಿದೆ. ಕಾನೂನು ಉಲ್ಲಂಘಿಸಿ ಮಳಿಗೆಗಳನ್ನ ನಿರ್ಮಿಸಿ ಹಂಚಿಕೆ ಮಾಡಿದ್ದಾರೆ ಅಂತಾ ಶಾಸಕ ರಾಮಮೂರ್ತಿ ಆರೋಪಿಸಿದ್ದು ಆಯುಕ್ತರಿಗೆ ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಕೆಗೆ ಮುಂದಾಗಿದ್ದರು. ಸದ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಭೈರಸಂದ್ರ ಮಾಜಿ ಕಾರ್ಪೋರೇಟರ್ ನಾಗರಾಜ್ ತಿರುಗೇಟು ಕೊಟ್ಟಿದ್ದಾರೆ. ಈ ಆರೋಪವು ಸುಳ್ಳಾಗಿದ್ದು ನೂತನ ಶಾಸಕ ರಾಮಮೂರ್ತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ