ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದು ಹೇಳಿದ್ದಾರೆ; ಶಾಸಕ ಶಿವಲಿಂಗೇಗೌಡ
ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದು ಹೇಳಿದ್ದಾರೆ ಎಂದು ವಿಧಾನಸೌಧದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದರು. ರಾಜ್ಯದ ಎಲ್ಲರಿಗೂ ಉಚಿತ ಕೊಡಲು ಆಗಲ್ಲ. ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ಎಂದಿದ್ದಾರೆ.
ಬೆಂಗಳೂರು: ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದು ಹೇಳಿದ್ದಾರೆ ಎಂದು ವಿಧಾನಸೌಧದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ (Shivalingegowda) ಹೇಳಿದರು. ರಾಜ್ಯದ ಎಲ್ಲರಿಗೂ ಉಚಿತ ಕೊಡಲು ಆಗಲ್ಲ. ಬಿಪಿಎಲ್ ಕಾರ್ಡ್(BPL Card)ದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಗ್ಯಾರಂಟಿಗಳನ್ನ ಜಾರಿಗೆ ತಂದಿದ್ದು, 5 ವರ್ಷಗಳ ಒಳಗೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಾರೆ. ಒಂದು 15 ದಿನ ಟೈಮ್ ಕೊಡಿ ಮಾಡಲಿಲ್ಲ ಅಂದ್ರೆ, ನಿಮ್ಮ ಜತೆ ನಾನು ಸೇರಿಕೊಳ್ಳುತ್ತೇನೆ ಎಂದಿದ್ದಾರೆ.
ಈ ಗ್ಯಾರಂಟಿಗಳು ಬಡವರಿಗೋಸ್ಕರ ಇರುವುದು. ಆಶೋಕ್ ಬಿಲ್ ಕಟ್ಟಲ್ಲ ಅಂದ್ರೆ, ಬಿಡೋರು ಯಾರು? ಬಿಪಿಎಲ್ ಕಾರ್ಡ್ದಾರರಿಗೆ ಕೊಡುವ ಯೋಜನೆಗಳು ಇವು. ಐಎಎಸ್, ಐಪಿಎಸ್ ಅವರಿಗೆ ಅಲ್ಲ. ಎಂದರು, ಇನ್ನು ನೀವು ಸಚಿವರಾಗಿಲ್ಲ ಎನ್ನುವ ಮಾತಿಗೆ ‘ನಾನು ಮಿನಿಸ್ಟರ್ ಆಗಬೇಕಿತ್ತು. ಎಲ್ಲ ಹಣೆ ಬರಹ ಎನ್ನುವ ಮೂಲಕ ಶಾಸಕ ಶಿವಲಿಂಗೇಗೌಡ ಅವರು ನೋವುನ್ನ ಹೊರಹಾಕಿದ್ದಾರೆ.
ಇನ್ನು ಐದು ‘ಗ್ಯಾರಂಟಿ’ ಹತ್ತಾರು ಗೊಂದಲ: ಅವು ಏನೇನು? ಇಲ್ಲಿದೆ ವಿವರ
ಬೆಂಗಳೂರು: ಕಾಂಗ್ರೆಸ್ ಘೋಷಿಸಿರುವ 5 ಗ್ಯಾರಂಟಿ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರವಿರೋಧದ ಚರ್ಚೆ ನಡೀತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ. ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿವೆ. ಅಧಿಕಾರಕ್ಕೆ ಬಂದ ದಿನವೇ 5 ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಹೇಳಿದ್ರು, ಆದ್ರೆ ಗದ್ದುಗೆ ಅಲಂಕರಿಸಿ 2 ವಾರ ಕಳೆದರೂ ಇನ್ನೂ ಯೋಜನೆ ಜಾರಿಯಾಗಿಲ್ಲ. ಹಳ್ಳಿಗಳಲ್ಲಿ ಜನ ಕರೆಂಟ್ ಬಿಲ್ ಕಟ್ಟುತ್ತಿಲ್ಲ. ಬಸ್ನಲ್ಲಿ ಟಿಕೆಟ್ ಕಿರಿಕ್ ಶುರುವಾಗಿದೆ. ಇತ್ತ ವಿಪಕ್ಷಗಳು ಗ್ಯಾರಂಟಿ ಜಾರಿ ಮಾಡ್ರಪ್ಪ ಎಂದು ಪಟ್ಟು ಹಿಡಿದು ಕುಳಿತಿವೆ. ಈ ನಡುವೆ ಗೊಂದಲಕ್ಕೆ ಸಿಲುಕಿರುವ ರಾಜ್ಯದ ಜನರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಹತ್ತು ಹಲವು ಪ್ರಶ್ನೆಗಳು, ಅನುಮಾನ ಶುರುವಾಗಿದೆ.
ಇದನ್ನೂ ಓದಿ:ಅಧಿಕಾರಿಗಳ ಜತೆ ಸಿಎಂ ಸಭೆ: 5 ಗ್ಯಾರೆಂಟಿ ಜಾರಿಗೆಗೆ ತಗಲುವ ಖರ್ಚು-ವೆಚ್ಚ ಲೆಕ್ಕ ಪಡೆದ ಸಿದ್ದರಾಮಯ್ಯ
ಗೃಹ ಲಕ್ಷ್ಮಿ ಗ್ಯಾರಂಟಿ
ಗೃಹ ಲಕ್ಷ್ಮಿ ಯೋಜನೆಗೆ ಫಲಾನುಭವಿ ಅತ್ತೆ ಎಂದು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಹಾಗಾದ್ರೆ ಈಗಾಗಲೇ ಅತ್ತೆಗೆ ವಿಧವಾವೇತನ, ವೃದ್ಧಾಪ್ಯ ವೇತನ ಬರುತ್ತಿದ್ದರೂ ಗೃಹ ಲಕ್ಷ್ಮಿ ಯೋಜನೆಯಡಿ 2 ಸಾವಿರ ಕೊಡುತ್ತಾರಾ, ಮನೆಯೊಡತಿ ಕೆಲಸ ಮಾಡುತ್ತಿದ್ದರೂ ಯೋಜನೆಯ ಫಲಾನುಭವಿ ಆಗುತ್ತಾರಾ? ಎನ್ನುವ ಗೊಂದಲ ಸೃಷ್ಟಿಯಾಗಿದೆ.
ಉಚಿತ ಬಸ್ ಪ್ರಯಾಣದ ಬಗ್ಗೆ ಗೊಂದಲ
ಫ್ರೀ ಬಸ್ ಪ್ರಯಾಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಬಹುದಾ? ಕಂಡೀಷನ್ಸ್ ಹಾಕಿದ್ರೆ, ಹೇಗೆ ಗುರುತಿಸುತ್ತಾರೆ? KSRTC, BMTC ಸೇರಿದಂತೆ ಎಲ್ಲಾ ಬಸ್ನಲ್ಲೂ ಪ್ರಯಾಣಿಸಬಹುದಾ? ಇಂತಿಷ್ಟು ಕಿಲೋ ಮೀಟರ್ ವರೆಗೂ ಮಾತ್ರನಾ? ಅಥವಾ ರಾಜ್ಯಾದ್ಯಂತೆ ಪ್ರಯಾಣಿಸಬಹುದಾ? ಇನ್ನು ಕಾಲೇಜು ಹುಡುಗಿಯರಿಗೆ ಫ್ರೀ ಪ್ರಯಾಣ ಇರುತ್ತಾ? ಅಂತೆಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ಗೃಹ ಜ್ಯೋತಿ ಫ್ರೀ ಯಾರಿಗೆ?
ಇನ್ನು ಗೃಹ ಜ್ಯೋತಿ ಬಗ್ಗೆಯೂ ಹಲವು ಪ್ರಶ್ನೆಗಳಿವೆ. ವಿದ್ಯುತ್ ಬಿಲ್ ಫ್ರೀ ಯಾರಿಗೆ ಕೊಡ್ತಾರೆ? ಬಿಪಿಎಲ್ ಕಾರ್ಡುದಾರರಿಗಾ? ಇಲ್ಲ.. ಎಲ್ಲರಿಗೂ ಕೊಡ್ತಾರಾ? 200 ಯೂನಿಟ್ ಫ್ರೀ ಸರಿ.. ಹೆಚ್ಚು ಯುನಿಟ್ ಬಳಸಿದ್ರೆ ಹೇಗೆ? ಹೆಚ್ಚುವರಿ ಯೂನಿಟ್ಗೆ ಮಾತ್ರ ಕಟ್ಟಬೇಕಾ..? ಇಲ್ಲ ಎಲ್ಲ ಬಿಲ್ ತೆರಬೇಕಾ? ಬಾಡಿಗೆ ಮನೆಯಲ್ಲಿರುವವರಿಗೂ ಫ್ರೀ ಕರೆಂಟ್ ಸಿಗುತ್ತಾ? ಎಂಬ ಪ್ರಶ್ನೆ ಕಾಡ್ತಿದೆ.
ಇದನ್ನೂ ಓದಿ:5 ಗ್ಯಾರೆಂಟಿಗಳು ಮತ್ತೊಮ್ಮೆ ಜಾರಿಗೆ ? ಈ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತುಗಳು ಇಲ್ಲಿದೆ
ಅನ್ನಭಾಗ್ಯ ಅಕ್ಕಿ ಯಾವಾಗಿನಿಂದ?
ಇನ್ನು ಅನ್ನಭಾಗ್ಯ ಅಕ್ಕಿ ಯಾವಾಗಿನಿಂದ ಕೊಡ್ತಾರೆ? ಜೂನ್ ತಿಂಗಳಲ್ಲೇ ಜನ್ರಿಗೆ 10 ಕೆಜಿ ಅಕ್ಕಿ ಸಿಗುತ್ತಾ, ಇನ್ನೂ ವಿಳಂಬವಾಗುತ್ತಾ ಎಂಬ ಗೊಂದಲವಿದೆ.. ಹೀಗೆ ಕಾಂಗ್ರೆಸ್ ಘೋಷಿಸಿರೋ 5 ಗ್ಯಾರಂಟಿಗಳ ಬಗ್ಗೆ ಜನರಲ್ಲಿ ತಲೆಯಲ್ಲಿ ನೂರಾರು ಪ್ರಶ್ನೆಗಳು ಓಡಾಡ್ತಿದ್ದು, ಎಲ್ಲದಕ್ಕೂ ಉತ್ತರ ಸಿಗುತ್ತಾ ಎಂದು ಕಾದು ನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ