ಬೆಂಗಳೂರು, ಅ.10: ಈ ದುಡ್ಡು ಎನ್ನುವ ವಿಷಯ ಬಂದರೆ, ಮನುಷ್ಯ ಏನಾದರೂ ಮಾಡಲು ಮುಂದಾಗುತ್ತಾನೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆಯಾಗಿದೆ. ಹೌದು, ಹೀಗೆ ದುಡ್ಡಿನ ಹಿಂದೆ ಬಿದ್ದು ನಕಲಿ ನೋಟು ತಯಾರಿಸಿ, ವಂಚನೆ ಮಾಡುತ್ತಿದ್ದ ಜಾಲವನ್ನ ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು(Halasuru Gate Police)ಅರೆಸ್ಟ್ ಮಾಡಿದ್ದಾರೆ. ನಕಲಿ ನೋಟ್ ಮುದ್ರಿಸುತ್ತಿದ್ದ ಮೂವರು ಹಾಗೂ ಅದನ್ನು ಆರ್ಬಿಐಗೆ ಕೊಟ್ಟು ಎಕ್ಸ್ಚೇಂಜ್ಗೆ ಹೋಗಿದ್ದವನನ್ನ ಸೇರಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಬ್ದುಲ್, ಪ್ರಸೀತ್, ಮೊಹಮ್ಮದ್ ಅಪ್ನಾಸ್ ಹಾಗೂ ನೂರುದ್ದೀನ್ ಅಲಿಯಾಸ್ ಅನ್ವರ್ ಬಂಧಿತ ಆರೋಪಿಗಳು.
ಇನ್ನು ಈ ನಾಲ್ಕು ಜನರಲ್ಲಿ ಎ1 ಆರೋಪಿ ಅಬ್ದುಲ್ ಬಿಟ್ಟು ಮೂರು ಆರೋಪಿಗಳು ಕೇರಳ ಮೂಲದವರಾಗಿದ್ದು, ಎಲ್ಲರೂ ನಕಲಿ ನೋಟು ಪ್ರಿಂಟ್ ಮಾಡಿ ಅದನ್ನ ಬ್ಯುಸಿನೆಸ್ ನೆಪದಲ್ಲಿ ನೀಡಿ ಮೋಸ ಮಾಡುತ್ತಿದ್ದರು. ಹೀಗಿದ್ದಾಗ ಇವರ ಕೈಗೆ ಅಬ್ದುಲ್ ಸಿಕ್ಕಿದ್ದ. ಪ್ರಸೀತ್ಗೆ ಗ್ರಾನೈಟ್ ಸೇಲ್ ಮಾಡಿದ್ದ ಅಬ್ದುಲ್ಗೆ ಪ್ರಸೀತ್ ಸುಮಾರು 40 ರಿಂದ 45 ಲಕ್ಷ ರೂ. ಕೊಡಬೇಕಿತ್ತು. ಪದೇ ಪದೇ ಹಣ ಕೇಳುತ್ತಿದ್ದ ಅಬ್ದುಲ್ಗೆ ‘ನೊಡಪ್ಪಾ ನನ್ ಹತ್ರ 2 ಸಾವಿರ ಮುಖ ಬೆಲೆಯ ನೋಟುಗಳಿದ್ದು, ಒಟ್ಟು 25ಲಕ್ಷ ರೂ. ಇದೆ. ಆದರೆ, ಈಗ ಬ್ಯಾನ್ ಆಗಿದೆ. ಬೇಕಾದರೆ ಆರ್ಬಿಐಗೆ ಕೊಟ್ಟು ಎಕ್ಸ್ಚೇಂಜ್ ಮಾಡಿಕೋ ಎಂದು ಕೊಟ್ಟಿದ್ದ.
ಹೆಂಗೋ ದುಡ್ಡು ಬಂತು ಎಂದು 25 ಲಕ್ಷ ರೂ. ನಕಲಿ ನೋಟು ತೆಗದುಕೊಂಡಿದ್ದ ಅಬ್ದುಲ್, ಅದನ್ನ ಆರ್ಬಿಐಗೆ ಕೊಟ್ಟು ಎಕ್ಸ್ಚೇಂಜ್ ಮಾಡೋಕೆ ಹೋಗಿದ್ದ. ಅದಕ್ಕೂ ಮುಂಚೆ ಮಷೀನ್ವೊಂದರಲ್ಲಿ ಹಣ ಚೆಕ್ ಮಾಡಿದ್ದ. ಚೇಕಿಂಗ್ ವೇಳೆ ಎಲ್ಲವೂ ಕೋಟಾ ನೋಟು ಎಂದು ಗೊತ್ತಾಗಿದೆ. ಆಗಲೇ ಎಚ್ಚೆತ್ತುಕ್ಕೊಳ್ಳಬೇಕಿದ್ದ ಅಬ್ದುಲ್, ಆರ್ಬಿಐಗೆ ಕೊಟ್ಟು ಹಣ ಪಡೆದರಾಯಿತು ಎಂದು ಹೋಗಿದ್ದ. ಆದ್ರೆ, ಆರ್ಬಿಐ ಅಧಿಕಾರಿಗಳು ಕೋಟಾ ನೋಟು ಎಂದು ಗೊತ್ತಾಗಿ 25ಲಕ್ಷ ರೂಪಾಯಿಯನ್ನು ಸೀಜ್ ಮಾಡಿ ಹಲಸೂರ್ ಗೇಟ್ ಪೊಲೀಸರಿಗೆ ಮಾಹಿತಿ ನೀಡಿದರು.
ಇನ್ನು ಕೂಡಲೇ ಆರೋಪಿ ಅಬ್ದುಲ್ನನ್ನ ಅರೆಸ್ಟ್ ಮಾಡಿದ್ದ ಹಲಸೂರ್ ಗೇಟ್ ಪೊಲೀಸರು, ತನಿಖೆ ನಡೆಸಿದಾಗ ಇಡೀ ಜಾಲ ಪತ್ತೆಯಾಗಿದೆ. ಕೇರಳದಲ್ಲಿ ಇವರು ನೋಟ್ ಪ್ರಿಂಟ್ ಮಾಡಿ ವಂಚನೆ ಮಾಡುತ್ತಿರುವುದು ಎಂದು ಗೊತ್ತಾಗಿದೆ. ಈ ಮುಂಚೆ ಮಂಗಳೂರಿನಲ್ಲೂ ಆರೋಪಿಗಳು ಚೀಟಿಂಗ್ ಮಾಡಿ ಅರೆಸ್ಟ್ ಆಗಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿ ಸುಮಾರು 45ಲಕ್ಷ ರೂ. 2 ಸಾವಿರ ಮುಖ ಬೆಲೆಯ ನಕಲಿ ನೋಟು ಸೀಜ್ ಮಾಡಿದ್ದಾರೆ. ಪೊಲೀಸರು ಎಲ್ಲರನ್ನೂ ಜೈಲಿಗೆ ಕಳಿಸಿದ್ದಾರೆ. ಈತರ ನೋಟು ಎಕ್ಸ್ಚೇಂಜ್ ಎಂದು ಯಾರಾದರೂ ನಿಮ್ಮ ಬಳಿಯೂ ಬರಬಹುದು ಹುಷಾರಾಗಿರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ