ನಕಲಿ ನೋಟು ಮುದ್ರಣ ಜಾಲ ಪತ್ತೆಗೆ ಮದರಸಾಗೆ ನುಗ್ಗಿದ್ದ ಅಧಿಕಾರಿಗಳಿಗೆ ಸಿಕ್ಕಿದ್ದು ಆರ್ಎಸ್ಎಸ್ ಕುರಿತ ವಿವಾದಾತ್ಮಕ ಪುಸ್ತಕ
ಉತ್ತರ ಪ್ರದೇಶದಲ್ಲಿನ ಮದರಸಾಗಳ ಭಯೋತ್ಪಾದಕ ಸಂಪರ್ಕದ ಬಗ್ಗೆ ಜನರು ಆಗಾಗ ಆರೋಪಗಳನ್ನು ಮಾಡುತ್ತಿರುತ್ತಾರೆ. ಮದರಸಾವೊಂದರಲ್ಲಿ ನಕಲಿ ನೋಟುಗಳ ಮುದ್ರಣವಾಗುತ್ತಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ದಾಳಿ ನಡೆಸಿದ್ದಾರೆ, ಆಗ ಆರ್ಎಸ್ಎಸ್ ಕುರಿತು ವಿವಾದಾತ್ಮಕ ಪುಸ್ತಕ ಸಿಕ್ಕಿದೆ.
ನಕಲಿ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಮೇರೆಗೆ ಮದರಸಾಗೆ ಶೋಧಕ್ಕೆಂದು ಹೋಗಿದ್ದ ಅಧಿಕಾರಿಗಳಿಗೆ ಆರ್ಎಸ್ಎಸ್ ಕುರಿತ ವಿವಾದಾತ್ಮಕ ಪುಸ್ತಕ ಸಿಕ್ಕಿದೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಘಟನೆ ನಡೆದಿದೆ, ಆಗಸ್ಟ್ 28ರಂದು ಅತರ್ಸುಯ್ಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜೊತೆಗೆ, ಪೊಲೀಸರು ಪುಸ್ತಕವನ್ನು ಪತ್ತೆ ಮಾಡಿದರು.
ಆರ್ಎಸ್ಎಸ್ ದಿ ಬಿಗ್ಗೆಸ್ಟ್ ಟೆರರಿಸ್ಟ್ ಆರ್ಗನೈಸೇಷನ್ ಇನ್ ದಿ ಕಂಟ್ರಿ(RSS: The Biggest Terrorist Organization in the Country) ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದೆ. ಈ ಪುಸ್ತಕವನ್ನು ಎಸ್ಎಂ ಮುಷರಫ್ ಎಂಬುವವರು ಬರೆದಿದ್ದಾರೆ.
ಮದರಸಾದಲ್ಲಿ ಆರ್ಎಸ್ಎಸ್ ವಿರುದ್ಧ ಮಕ್ಕಳಲ್ಲಿ ವಿಷಬೀಜ ಬಿತ್ತಲು ಮೌಲ್ವಿ ಮೊಹಮ್ಮದ್ ತಫ್ಸೀರುಲ್ ಅರಿಫೀನ್ ಈ ಪುಸ್ತಕವನ್ನು ಬಳಕೆ ಮಾಡುತ್ತಿರಬಹುದು ಎಂದು ಅನುಮಾನಿಸಲಾಗಿದೆ.
ಮತ್ತಷ್ಟು ಓದಿ: ಮಂಗಳೂರು: ಸಾಲ ಮರುಪಾವತಿ ಮಾಡಲು ನಕಲಿ ಕರೆನ್ಸಿ ನೋಟ್ ಪ್ರಿಂಟ್, ನಾಲ್ವರ ಬಂಧನ
ಅವರ ಲೇಖನ ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ. ಮದರಸಾದಲ್ಲಿ ಈ ಪುಸ್ತಕ ಪತ್ತೆಯಾದ ನಂತರ ಭದ್ರತಾ ಏಜೆನ್ಸಿಗಳು ಎಚ್ಚೆತ್ತಿವೆ. ಅವರ ಬಳಿಯಿಂದ 1 ಲಕ್ಷ ರೂಪಾಯಿಯ ನಕಲಿ ನೋಟುಗಳು ಮತ್ತು ಮುದ್ರಣಕ್ಕೆ ಬಳಸಲಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ