ಕೇರಳದಲ್ಲಿ ಆರೋಪಿಯಿಂದ ಹಣ ಪಡೆದ ಆರೋಪ, ಬೆಂಗಳೂರಿನ ಇನ್ಸ್​ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2023 | 10:56 AM

ಕೇರಳ ಪೊಲೀಸರಿಂದ ವೈಟ್​ಫೀಲ್ಡ್ ಸಿಇಎನ್​ ಪೊಲೀಸರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ.

ಕೇರಳದಲ್ಲಿ ಆರೋಪಿಯಿಂದ ಹಣ ಪಡೆದ ಆರೋಪ, ಬೆಂಗಳೂರಿನ ಇನ್ಸ್​ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್
ಕೇರಳದಲ್ಲಿ ಬೆಂಗಳೂರು ಪೊಲೀಸರು ವಶಕ್ಕೆ; ಇನ್ಸ್​ಪೆಕ್ಟರ್ ಸಹಿತ ನಾಲ್ವರು ಸಸ್ಪೆಂಡ್, ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ
Follow us on

ಬೆಂಗಳೂರು, ಆ.4: ಕೇರಳ ಪೊಲೀಸರಿಂದ ವೈಟ್​ಫೀಲ್ಡ್ ಸಿಇಎನ್​ ಪೊಲೀಸ(CEN Police)ರನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಸೇರಿ ನಾಲ್ವರನ್ನು ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ. ಇನ್ಸ್​ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ಸ್​ಟೇಬಲ್​ಗಳಾದ ಶಿವಾನಿ, ವಿಜಯ್ ಕುಮಾರ್ ಹಾಗೂ ಕಾನ್ಸ್​ಟೇಬಲ್ ಸಂದೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಘಟನೆ ಕುರಿತು ಎಸಿಪಿ ವರದಿ ಆಧರಿಸಿ ಪ್ರಕರಣದ ತನಿಖೆ ಕಾರ್ಯವಿಧಾನದಲ್ಲಿ ಲೋಪ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ.

ಘಟನೆ ವಿವರ

ಉದ್ಯೋಗ ಕೊಡಿಸುವುದಾಗಿ ಹೇಳಿ ಸಾಫ್ಟ್​ವೇರ್ ಇಂಜಿನಿಯರ್​ ಬಳಿ ಆನ್​ಲೈನ್ ಮೂಲಕ 26 ಲಕ್ಷ ರೂ. ಹಣವನ್ನ ಪಡೆದು ವಂಚನೆ ಮಾಡಿದ ಆರೋಪದ ಹಿನ್ನಲೆ ಚಂದಕ್ ಶ್ರೀಕಾಂತ್ ಎಂಬುವವರು ವೈಟ್ ಫೀಲ್ಡ್ ಸೈಬರ್​ ಠಾಣೆಗೆ ದೂರು ಕೊಟ್ಟಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಇಎನ್ ಪೊಲೀಸರಿಗೆ ಸಿಕ್ಕ ಸುಳಿವಿನ ಮೇರೆಗೆ ಮಡಿಕೇರಿಯ ಆರೋಪಿ ಐಸಾಕ್ ಬಳಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್​ನಲ್ಲಿ 2 ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದು ವೈಟ್ ಫೀಲ್ಡ್ ಸಿಇಎನ್ ಇನ್ಸ್​ಪೆಕ್ಟರ್ ಶಿವಪ್ರಕಾಶ್ ಹಾಗೂ ಅವರ ತಂಡ ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ಹೋಗಿದ್ದರು. ಆಲ್ಲಿ ಆರೋಪಿಗಳಾದ ನೌಶಾದ್ ಹಾಗೂ ಅಕೀಲ್​ ಎಂಬುವವರಿಂದ ಆನ್ ಲೈನ್ ಫ್ರಾಡ್​ ಆಗಿರುವ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಈ ಹಿನ್ನಲೆ ಅರೆಸ್ಟ್ ಮಾಡಲು ಪೊಲೀಸರು ತೆರಳಿದ್ದರು.

ಇದನ್ನೂ ಓದಿ:ಬೆಂಗಳೂರು ಪೊಲೀಸರ ವಿರುದ್ಧ ಕೇರಳದಲ್ಲಿ ಎಫ್​ಐಆರ್; ಇನ್ಸ್​ಪೆಕ್ಟರ್ ಸೇರಿ ನಾಲ್ವರು ವಶಕ್ಕೆ; ಕಾರಣವೇನು ಗೊತ್ತಾ?

ಆರೋಪಿಯಿಂದಲೇ ಪೊಲೀಸರ ವಿರುದ್ದ ದೂರು

ಇನ್ನು ಈ ವೇಳೆ ಆರೋಪಿ ಅಕೀಲ್​ ಪೊಲೀಸರು ನಮ್ಮ ಬಳಿ ಹಣ ಪಡೆದ ಆರೋಪದ ಮೇಲೆ ಕೇರಳದ ಕಲ್ಲಂಚೇರಿ ಠಾಣೆಯಲ್ಲಿ ದೂರು ನೀಡಿದ್ದ. ಹೌದು, ಎಫ್​ಐಆರ್​ನಲ್ಲಿ ಇನ್ನೋವಾ ಕಾರಿನಲ್ಲಿದ್ದ 3.95 ಲಕ್ಷ ಹಣವನ್ನ ಪಡೆದಿರುವುದಾಗಿ ಉಲ್ಲೇಖ ಮಾಡಲಾಗಿದೆ. ಜೊತೆಗೆ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಬಳಿಕ ಜಪ್ತಿ ಮಾಡಬೇಕಿತ್ತು. ಆದರೆ, ಪೊಲೀಸರು ಹಣ ನೀಡದಿದ್ರೆ, ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ ಆರೋಪಿ ಮಾಡುವುದಾಗಿ ನಿಖಿಲ್, ನೌಷಾದ್ ಹಾಗೂ ಅಖಿಲ್​ಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಆರೋಪ ಮಾಡಲಾಗಿತ್ತು. ಇದೀಗ ಎಸಿಪಿ ವರದಿ ಆಧರಿಸಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ