ಬೆಂಗಳೂರು: ಕುಡಿದು ವಾಹನ ಚಲಾಯಿಸಿ ಪಾದಚಾರಿಗೆ ಗುದ್ದಿದ ಚಾಲಕನಿಗೆ ಧರ್ಮದೇಟು
ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಪಾದಚಾರಿಗೆ ಕಾರಿನಿಂದ ಗುದ್ದಿದ ಚಾಲಕನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿಯ ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಜಂಕ್ಷನ್ ಬಳಿ ನಡೆದಿದೆ.
ಬೆಂಗಳೂರು: ಕುಡಿದು ವಾಹನ ಚಲಾಯಿಸಿದ್ದಲ್ಲದೇ, ಪಾದಚಾರಿಗೆ ಗುದ್ದಿದ ಚಾಲಕನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಪುಟ್ಟೇನಹಳ್ಳಿಯ ಜಯನಗರ ಸಂಚಾರ ಪೊಲೀಸ್ ಠಾಣಾ (Traffic Police) ವ್ಯಾಪ್ತಿಯ ನಂದಿನಿ ಜಂಕ್ಷನ್ ಬಳಿ ನಡೆದಿದೆ. ಆಗಸ್ಟ್ 2 ರಂದು ವಿಷ್ಣು ಎಂಬುವರು ಮೈಸೂರಿನಿಂದ (Mysuru) ಸ್ನೇಹಿತರನ್ನು ಭೇಟಿ ಮಾಡಲು ಬೆಂಗಳೂರಿಗೆ (Bengaluru) ಬಂದಿದ್ದಾರೆ.
ಇಲ್ಲಿ ಸ್ನೇಹಿತತೊಂದಿಗೆ ಸೇರಿ ಪಾರ್ಟಿ ಮಾಡಿ ಕುಡಿದ ಮತ್ತಿನಲ್ಲಿ ಕಾರಿನಲ್ಲಿ ರಾತ್ರಿ 8:30 ರ ವೇಳೆಗೆ ಮತ್ತೊಂದು ಕಡೆ ಹೋಗುತ್ತಿದ್ದರು. ಈ ವೇಳೆ ನಂದಿನಿ ಜಂಕ್ಷನ್ ಬಳಿ ಪದಾಚಾರಿಗೆ ಗುದ್ದಿದ್ದಾರೆ. ನಂತರ ಕಾರಿನಿಂದ ಇಳಿದು ಪಾದಾಚಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಕಸದಿಂದ ರಸ; ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸ್ಥಾವರ ಅಕ್ಟೋಬರ್ಗೆ ಕಾರ್ಯಾರಂಭ
ಇದನ್ನು ಕಂಡ ಸ್ಥಳೀಯರು ಜಮಾಯಿಸಿದ್ದಾರೆ. ಈ ವೇಳೆ ವಿಷ್ಣು ಸಾರ್ವಜನಿಕರಿಗೆ ಕೈ ಬೆರಳು ತೋರಿಸಿ ದುರ್ವರ್ತನೆ ತೋರಿದ್ದಾನೆ. ಇದರಿಂದ ಸಿಟ್ಟಿಗೆದ್ದ ಜನರು ವಿಷ್ಣುವಿಗೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಜಯನಗರ ಸಂಚಾರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಿಷ್ಣುವನ್ನು ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಡ್ರಿಂಕ್ ಡ್ರೈವ್, ರ್ಯಾಶ್ ಡ್ರೈವಿಂಗ್, ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 am, Fri, 4 August 23