AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂಟುತ್ತಾ ಸಾಗುತ್ತಿದೆ ವಿಕ್ಟೋರಿಯಾ ಆಸ್ಪತ್ರೆಯ 11 ಅಂತಸ್ಥಿನ ಕಟ್ಟಡ; 4 ವರ್ಷವಾದ್ರೂ ಮುಗಿಯುತ್ತಿಲ್ಲ ಕಾಮಾಗಾರಿ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್​ಗಳ‌ ಸಮಸ್ಯೆಗೆ ಶಾಶ್ವತವಾಗಿ ಪರಿಹಾರವನ್ನ ಕಂಡು ಹಿಡಿಯಬೇಕು ಅಂತ 11 ಅಂತಸ್ತಿನ ಕಟ್ಟಡವನ್ನ ವಿಕ್ಟೋರಿಯಾ ಕ್ಯಾಂಪಾಸ್ ನಲ್ಲಿ ಮಾಡಲಾಗುತ್ತಿದೆ. ಆದ್ರೆ ನಾಲ್ಕು ವರ್ಷವಾದ್ರೂ ಈ 11 ಅಂತಸ್ತಿನ ಕಟ್ಟಡದ ಕಾಮಾಗಾರಿ ಕುಂಟುತ್ತ ಸಾಗುತ್ತಿದ್ದು, ಪ್ರತಿದಿನ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.‌

ಕುಂಟುತ್ತಾ ಸಾಗುತ್ತಿದೆ ವಿಕ್ಟೋರಿಯಾ ಆಸ್ಪತ್ರೆಯ 11 ಅಂತಸ್ಥಿನ ಕಟ್ಟಡ; 4 ವರ್ಷವಾದ್ರೂ ಮುಗಿಯುತ್ತಿಲ್ಲ ಕಾಮಾಗಾರಿ
ಕುಂಟುತ್ತಾ ಸಾಗುತ್ತಿದೆ ವಿಕ್ಟೋರಿಯಾ ಆಸ್ಪತ್ರೆಯ 11 ಅಂತಸ್ಥಿನ ಕಟ್ಟಡ
Poornima Agali Nagaraj
| Edited By: |

Updated on: Aug 04, 2023 | 9:38 AM

Share

ಬೆಂಗಳೂರು, ಆ.04: ವಿಕ್ಟೋರಿಯಾ ಆಸ್ಪತ್ರೆಯಲ್ಲಿ(Victoria Hospital) ಬೆಡ್​ಗಳ ಸಮಸ್ಯೆಯಮ್ನ ಕಡಿಮೆ ಮಾಡಲು, ಬಹುಮಹಡಿಯ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅಸ್ತು ಎಂದು ನಾಲ್ಕು ವರ್ಷಗಳಾದ್ರು ಕಾಮಾಗರಿ ಮಾತ್ರ ಕುಂಟುತ್ತಲೇ ಸಾಗುತ್ತಿದೆ. ರೋಗಿಗಳು ಪ್ರತಿದಿನ ನರಕ ನೋಡ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಜಾಸ್ತಿ.‌ ಹೀಗಾಗಿ ಸರ್ಕಾರಿ ಆಸ್ಪತ್ರೆಗಳ ಮೇಲೆ ಇರುವ ಜನರ ಮನಸ್ಥಿತಿ ಬದಲಾಗ್ಲಿ ಅಂತ ಸರ್ಕಾರ ಸಾವಿರಾರು ಕೋಟಿ ಮೀಸಲಿಟ್ಟರು ಸರ್ಕಾರಿ ಆಸ್ಪತ್ರೆಗಳು ಮಾತ್ರ ಬದಲಾಗುತ್ತಿಲ್ಲ.‌ ಅದಕ್ಕೆ ಉತ್ತಮ ನಿದರ್ಶನ ಎಂದ್ರೆ ವಿಕ್ಟೋರಿಯಾ ಆಸ್ಪತ್ರೆ.‌

ಹೌದು, ವಿಕ್ಟೋರಿಯಾ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಿ ಮಲ್ಟಿ ಸ್ಪೇಷಾಲಿಟಿ ಸರ್ಕಾರಿ ಆಸ್ಪತ್ರೆಯಂತ ಘೋಷಿಸಿದ್ರೂ ಆಸ್ಪತ್ರೆಯಲ್ಲಿ ಸಮಸ್ಯೆಗಳು ಮಾತ್ರ ಕಡಿಮೆಯಾಗುತ್ತಿಲ್ಲ. ಇತ್ತೀಚೆಗಂತೋ ಬೆಡ್​ಗಳ‌ ಸಮಸ್ಯೆ ದಿನನಿತ್ಯದ ಸಮಸ್ಯೆಯಾಗಿದ್ದು, ಈ‌ ಸಮಸ್ಯೆಗೆ ಶಾಶ್ವತವಾಗಿ ಪರಿಹಾರವನ್ನ ಕಂಡು ಹಿಡಿಯಬೇಕು ಅಂತ 11 ಅಂತಸ್ತಿನ ಕಟ್ಟಡವನ್ನ ವಿಕ್ಟೋರಿಯಾ ಕ್ಯಾಂಪಾಸ್ ನಲ್ಲಿ ಮಾಡಲಾಗುತ್ತಿದೆ. ಆದ್ರೆ ನಾಲ್ಕು ವರ್ಷವಾದ್ರೂ ಈ 11 ಅಂತಸ್ತಿನ ಕಟ್ಟಡದ ಕಾಮಾಗಾರಿ ಕುಂಟುತ್ತ ಸಾಗುತ್ತಿದ್ದು, ಪ್ರತಿದಿನ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ.‌ ಇನ್ನು ವಿಕ್ಟೋರಿಯಾ ಆಸ್ಪತ್ರೆಗೆ ಪ್ರತಿದಿನ ನಮ್ಮ ರಾಜ್ಯ ಅಷ್ಟೇ ಅಲ್ಲದೇ ಹೊರರಾಜ್ಯಗಳಿಂದಲೂ ಸಾಕಷ್ಟು ಜನ ರೋಗಿಗಳು ಬರ್ತಾರೆ.

ಇದನ್ನೂ ಓದಿ: ಕೇಬಲ್ ತುಂಡಾಗಿ ಮಹಡಿಗಳ ಮಧ್ಯೆ ಸಿಲುಕಿದ ಲಿಫ್ಟ್​, ಹೃದಯ ಸ್ತಂಭನದಿಂದ ಮಹಿಳೆ ಸಾವು

ಸರ್ಕಾರ ಗಡುವು ನೀಡಿದ್ದರೂ ಕುಂಠಿತವಾದ ಕಾಮಗಾರಿ

500ಕ್ಕೂ ಅಧಿಕ ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ, ಆಸ್ಪತ್ರೆಯ ಆವರಣದಲ್ಲಿ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಸಾವಿರ ಹಾಸಿಗೆಗಳ ಕಟ್ಟಡ ನಿರ್ಮಿಸಲಾಗುತ್ತಿದೆ. ಇದನ್ನು 2021ರೊಳಗೆ ಪೂರ್ಣಗೊಳಿಸಿ, ಸೇವೆ ಪ್ರಾರಂಭಿಸಲು ಈ ಹಿಂದಿನ ಸರ್ಕಾರ ಗಡುವು ನೀಡಿತ್ತು. ಆದರೆ, ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಈವರೆಗೂ ಪೂರ್ಣಗೊಳಿಸಿಲ್ಲ. ಇದರಿಂದ ರೋಗಿಗಳ ಚಿಕಿತ್ಸೆಗೆ ಸಮಸ್ಯೆಯಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಲಿದ್ದು, ಆಸ್ಪತ್ರೆಯಲ್ಲಿ ಹಾಸಿಗೆ‌ ಕೊರತೆ ಮುಂದುವರಿಯುತ್ತಿದೆ.‌ ಸಧ್ಯ ವಿಕ್ಟೋರಿಯಾದಲ್ಲಿ 530 ಸಾಮಾನ್ಯ ಬೆಡ್ ಹಾಗೂ 27 ಐಸಿಯು ಬೆಡ್ ಇವೆ. ಈಗ ಬರುತ್ತಿರುವ ರೋಗಿಗಳಿಗೆ ಸಾಕಾಗುತ್ತಿಲ್ಲ.‌ ಪ್ರತಿದಿನ ಹೊರರೋಗಿಗಳು ಪರದಾಡುವಂತಾಗಿದೆ.

ಇನ್ನು, ಈ ಕುರಿತು ವಿಕ್ಟೋರಿಯಾ ಆಸ್ಪತ್ರೆಯ ನಿರ್ದೇಶಕ ರಮೇಶ್ ಕೃಷ್ಣ ಅವರನ್ನ ಪ್ರಶ್ನಿದ್ದಕ್ಕೆ ಕೋವಿಡ್ ಸಮಸ್ಯೆಯಿಂದ ಕಾಮಾಗಾರಿ ವಿಳಂಭವಾಗಿತ್ತು.‌ ಇದೀಗಾ ಕೆಲಸ ನಡೆಯುತ್ತಿದೆ. ಮುಂದಿನ ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಕಾಮಗಾರಿ ಮುಗಿಯುವ ಸಾಧ್ಯತೆ ಇದ್ದು, ಎಲ್ಲಾ ಸೌಕರ್ಯಗಳು ಇಲ್ಲಿ ಸಿಗಲಿದೆ ಎಂದರು.

ಒಟ್ನಲ್ಲಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್​ಗಳ ಸಮಸ್ಯೆ ದಿನದಿಂದ ದಿನಕ್ಕೆ ತಲೆದೂರುತ್ತಿದ್ದು, ಆದಷ್ಟು ಬೇಗ ಈ ಸಮಸ್ಯೆಗೆ ಮುಕ್ತಿ ಸಿಗಬೇಕು ಎಂದ್ರೆ ಈ 11 ಅಂತಸ್ತಿನ ಕಟ್ಟಡ ಉದ್ಘಾಟನೆಯಾಗಿ ಜನರಿಗೆ ಸಿಗಬೇಕಿದೆ. ಇನ್ನು ಎರಡು ತಿಂಗಳಲ್ಲಿ ಈ ಕಾಮಾಗಾರಿ ಮುಗಿಯುತ್ತಾ ಕಾದುನೋಡ್ಬೇಕಿದೆ. ‌

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ