Free ambulance service: ಬೆಂಗಳೂರಲ್ಲಿ ಕೋವಿಡ್ 19 ರೋಗಿಗಳಿಗೆ ದಿನದ 24 ಗಂಟೆ ಉಚಿತ ಆಂಬ್ಯುಲೆನ್ಸ್; ಇಲ್ಲಿದೆ ಉಚಿತ ಟೋಲ್​ಫ್ರೀ ಸಂಖ್ಯೆ

|

Updated on: May 12, 2021 | 4:41 PM

ಬೆಂಗಳೂರು ವ್ಯಾಪ್ತಿಯಲ್ಲಿ ಕೋವಿಡ್ 19 ರೋಗಿಗಳಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ಒದಗಿಸುವಂಥ ಕಾರ್ಯವನ್ನು ಈ ಸಂಸ್ಥೆಗಳು ಮಾಡುತ್ತಿವೆ.

Free ambulance service: ಬೆಂಗಳೂರಲ್ಲಿ ಕೋವಿಡ್ 19 ರೋಗಿಗಳಿಗೆ ದಿನದ 24 ಗಂಟೆ ಉಚಿತ ಆಂಬ್ಯುಲೆನ್ಸ್; ಇಲ್ಲಿದೆ ಉಚಿತ ಟೋಲ್​ಫ್ರೀ ಸಂಖ್ಯೆ
ಉಚಿತ ಆಂಬ್ಯುಲೆನ್ಸ್
Follow us on

ಬೆಂಗಳೂರು: ಝೆರೋದಾ, ವೆಲ್ಸ್ ಫಾರ್ ಗೋ ಮತ್ತು ತಾಮರ ರೆಸಾರ್ಟ್ ಈ ಮೂರು ಸಹ ಒಟ್ಟಾಗಿ ಬೆಂಗಳೂರು ಮತ್ತು ಅದರ ಆಚೆಗೂ ವಿಸ್ತರಿಸಿಕೊಂಡಂತೆ ಕೋವಿಡ್- 19 ರೋಗಿಗಳಿಗೆ ಉಚಿತ ಆಂಂಬ್ಯುಲೆನ್ಸ್ ಸೇವೆ ಒದಗಿಸುತ್ತಿವೆ. ಇದರ ಜವಾಬ್ದಾರಿಯನ್ನು ವಹಿಸಿಕೊಂಡಿರುವುದು ಸೂರ್ಯ ಫೌಂಡೇಷನ್ ಮತ್ತು ಮಂತ್ರ ಫಾರ್ ಚೇಂಜ್ ಎಂಬ ಎನ್​ಜಿಒ. ದೇವನಹಳ್ಳಿಯಿಂದ ಎಲೆಕ್ಟ್ರಾನಿಕ್​ಸಿಟಿ ತನಕ ಯಾರಿಗೇ ಅಗತ್ಯ ಇದ್ದರೂ ಆಂಬ್ಯುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತದೆ. ಈ ಅಂಬ್ಯುಲೆನ್ಸ್​ಗಳಲ್ಲಿ ಆಕ್ಸಿಜನ್ ಸೌಲಭ್ಯ ಕೂಡ ಇದೆ. ತುರ್ತು ಸಂದರ್ಭದಲ್ಲಿ ಒಂದೆರಡು ಗಂಟೆಗಳ ಕಾಲ ರೋಗಿಗಳಿಗೆ ಆಕ್ಸಿಜನ್ ಒದಗಿಸುವಷ್ಟು ವ್ಯವಸ್ಥೆಯನ್ನು ಮಾಡಲಾಗಿದೆ.

ಈ ಬಗ್ಗೆ ಸ್ವಯಂಸೇವಕರಾಗಿ ಸೇವೆಯಲ್ಲಿ ತೊಡಗಿರುವ ಹಾಗೂ ಹೂವಿನಹೊಳೆ ಪ್ರತಿಷ್ಠಾನದ ಸ್ಥಾಪಕ ನಂದಿ ಜೆ. ಹೂವಿನಹೊಳೆ ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ಮಾತನಾಡಿ, ವಿವಿಧ ಸಂಸ್ಥೆಗಳು ಸೇರಿ ಆಂಬ್ಯುಲೆನ್ಸ್ ಒದಗಿಸಿವೆ. ದಿನದ 24 ಗಂಟೆಯೂ ಕಾಲ್​ಸೆಂಟರ್ ಇರುತ್ತದೆ. ಯಾರಿಗೆ ಆಂಬ್ಯುಲೆನ್ಸ್ ಅಗತ್ಯ ಇದೆಯೋ ಅಂಥವರಿಗೆ ಈ ಸೇವೆ ಒದಗಿಸುತ್ತಿದ್ದೇವೆ. ಎರಡು ವಾರದಿಂದ ಹೀಗೆ ನಡೆದುಕೊಂಡುಬಂದಿದೆ. ಎಷ್ಟೋ ಜನರು ಆಂಬ್ಯುಲೆನ್ಸ್ ಬರುವುದು ತಡವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಯಾರಿಗೂ ಆಗಬಾರದು ಅನ್ನೋದು ಉದ್ದೇಶ ಎಂದರು.

ಬಿಬಿಎಂಪಿಯಿಂದಲೂ ಆಂಬ್ಯುಲೆನ್ಸ್ ಒದಗಿಸಲಾಗುತ್ತಿದೆ. ಆದರೆ ಅದು ದೊರೆಯುವುದು ತಡವಾಗುತ್ತಿದೆ ಎಂದು ರೋಗಿಗಳು ಮತ್ತು ಅವರ ಸಂಬಂಧಿಕರು ಹೇಳುತ್ತಾರೆ. ಆದರೆ ಈ ವಿಚಾರದಲ್ಲಿ ನಾವು ತುಂಬ ವೇಗವಾಗಿ ಪ್ರತಿಕ್ರಿಯಿಸುತ್ತಿದ್ದೇವೆ. ನಮ್ಮ ಬಳಿ ಈಗ 23 ಆಂಬ್ಯುಲೆನ್ಸ್​ಗಳಿವೆ. ಒಂದೇ ಒಂದು ರೂಪಾಯಿ ಕೂಡ ನೀಡದಂತೆ ಈ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು. ಆಂಬ್ಯುಲೆನ್ಸ್ ಸೇವೆಯ ಅಗತ್ಯ ಇರುವವರು ಟೋಲ್ ಫ್ರೀ ಸಂಖ್ಯೆಗಳಾದ 080-47181616, 18001205577ಗೆ ಕರೆ ಮಾಡಿದರೆ ವಾಹನ ದೊರೆಯುತ್ತದೆ.

ಇದನ್ನೂ ಓದಿ: ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್​ಗಳಲ್ಲಿ ಉಚಿತ ತಿಂಡಿ, ಊಟ ವಿತರಣೆ

( Free ambulance service with oxygen facility for covid-19 patients within Bangalore limit. Here is the toll free number to get the service)

Published On - 4:34 pm, Wed, 12 May 21