ಕೆಅರ್ ಪುರಂ, ಟಿಸಿ ಪಾಳ್ಯ ಜಂಕ್ಷನ್ ಟ್ರಾಫಿಕ್ ಮುಕ್ತಗೊಳಿಸಿದ ಫ್ರೀ ಲೆಫ್ಟ್ ಟರ್ನ್
ಕೆಅರ್ ಪುರಂ - ಟಿಸಿ ಪಾಳ್ಯ ಜಂಕ್ಷನ್ ಸಿಗ್ನಲ್ನಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. 750 ಮೀಟರ್ ನಿಂದ 1 km ವರೆಗೂ ಟ್ರಾಫಿಕ್ ಜಾಮ್ ಆಗುತಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಫ್ರೀ ಲೆಫ್ಟ್ ಟರ್ನ್ ಅನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದರು. ಇದೀಗ ಈ ಯೋಜನೆ ಯಶಸ್ವಿಯಾಗಿದ್ದು, ಯಾವುದೇ ಟ್ರಾಫಿಕ್ ಜಾಮ್ ಇಲ್ಲದೆ ವಾಹನಗಳು ಸಂಚಾರ ಮಾಡುತ್ತಿವೆ.
ಬೆಂಗಳೂರು, ಜ.4: ಕೆಅರ್ ಪುರಂ – ಟಿಸಿ ಪಾಳ್ಯ ಜಂಕ್ಷನ್ (TC Palya Junction) ಸಿಗ್ನಲ್ನಲ್ಲಿ ಟ್ರಾಫಿಕ್ (Traffic) ನಿಯಂತ್ರಣಕ್ಕೆ ಪೊಲೀಸರು ಪ್ರಾಯೋಗಿಕವಾಗಿ ಆರಂಭಿಸಿದ್ದ ಫ್ರೀ ಲೆಫ್ಟ್ ಟರ್ನ್ ಯಶಸ್ವಿಯಾಗಿದೆ. ಈ ಯೋಜನೆ ಜಾರಿ ನಂತರ ಜಂಕ್ಷನ್ನಲ್ಲಿ ಯಾವುದೇ ಟ್ರಾಫಿಕ್ ಇಲ್ಲದೆ ವಾಹನಗಳು ಸುಗಮವಾಗಿ ಸಂಚರಿಸುತ್ತಿವೆ. ಜಂಕ್ಷನ್ನಲ್ಲಿ ಸಿಗ್ನಲ್ ಅಳವಡಿಸಿರುವುದರಿಂದ ಪಾದಾಚಾರಿಗಳು ಯಾವುದೇ ತೊಂದರೆ ಇಲ್ಲದೆ ಓಡಾಡುವಂತಾಗಿದೆ.
ಪೂರ್ವ ವಿಭಾಗದ ಕೆ.ಆರ್.ಪುರಂ ಟ್ರಾಫಿಕ್ ವ್ಯಾಪ್ತಿಯ ಟಿಸಿ ಪಾಳ್ಯ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. 750 ಮೀಟರ್ನಿಂದ 1 ಕಿ.ಮೀ. ವರೆಗೂ ಟ್ರಾಫಿಕ್ ಜಾಮ್ ಆಗುತಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಜಂಕ್ಷನ್‌ನ ಮಧ್ಯ ಭಾಗದಲ್ಲಿ ಇದ್ದ ಸೆಂಟರ್ ಮಿಡಿಯನ್ ಮುಚ್ಚಿ ಫ್ರೀ ಲೆಫ್ಟ್ ಟರ್ನ್ ಮಾಡಿದರು.
ಇದನ್ನೂ ಓದಿ: ಬೆಂಗಳೂರು: 700ಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಿದ ಟ್ರಾಫಿಕ್ ಪೊಲೀಸ್
ಫ್ರೀ ಲೆಫ್ಟ್ ಟರ್ನ್ ಆರಂಭಿಸಿದ ನಂತರ ಟ್ರಾಫಿಕ್ ಜಾಮ್ ಇಲ್ಲದೆ ನೇರವಾಗಿ ಕೋಲಾರ ಹೊಸಕೋಟೆ, ಮೇಡಹಳ್ಳಿ ಕಡೆ ವಾಹನಗಳು ಸಂಚಾರ ಮಾಡುತ್ತಿವೆ. ಡಿಸೆಂಬರ್ 20 ರಿಂದ ಪ್ರಾಯೋಗಿಕ ಸಂಚಾರ ಶುರು ಮಾಡಿದ್ದರು. ಸದ್ಯ ಪೊಲೀಸರ ಈ ಯೋಜನೆ ಯಶಸ್ವಿಯಾಗಿದ್ದು, ಸ್ಥಳೀಯರು ಸಂಚಾರ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Thu, 4 January 24