ಮಾತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ; BBMP ಸಿಬ್ಬಂದಿಯನ್ನು ಕೊಂದ ಸ್ನೇಹಿತ ಅರೆಸ್ಟ್

|

Updated on: Nov 21, 2023 | 7:46 AM

ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಬಿಎಂಪಿ ಸಿಬ್ಬಂದಿಯಾಗಿದ್ದ 26 ವರ್ಷದ ಯುವಕನನ್ನು  ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ತಡರಾತ್ರಿ ಮಾತನಾಡುತ್ತ ಜಗಳ ಮಾಡಿಕೊಂಡು ಕೋಪಗೊಂಡ ಸ್ನೇಹಿತ ಚಾಕುವಿನಿಂದ ಇರಿದಿದ್ದಾನೆ.

ಮಾತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ; BBMP ಸಿಬ್ಬಂದಿಯನ್ನು ಕೊಂದ ಸ್ನೇಹಿತ ಅರೆಸ್ಟ್
ಅಪರಾಧ
Image Credit source: Namaste Talangana
Follow us on

ಬೆಂಗಳೂರು, ನ.21: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 26 ವರ್ಷದ ಬಿಬಿಎಂಪಿ ಸಿಬ್ಬಂದಿಯಾಗಿದ್ದ ಯುವಕನನ್ನು  ಆತನ ಸ್ನೇಹಿತನೇ (Friend) ಚಾಕುವಿನಿಂದ ಇರಿದು ಕೊಲೆ ಮಾಡಿರುವ ಧಾರುಣ ಘಟನೆ ನಡೆದಿದೆ. ಭರತ್(26) ಕೊಲೆಯಾದ ಯುವಕ. ಕುತ್ತಿಗೆಗೆ ಹರಿತವಾದ ವಸ್ತುವಿನಿಂದ ಇರಿದ ಆರೋಪದ ಮೇಲೆ 29 ವರ್ಷದ ಪ್ರಭು ಎಂಬ ಆಟೋರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಮಧ್ಯರಾತ್ರಿ 12.30ರ ಸುಮಾರಿಗೆ ಭರತ್ ಮತ್ತು ಪ್ರಭು ಸೇರಿದಂತೆ ಕೆಲವು ಸ್ನೇಹಿತರು ಪಂತರಪಾಳ್ಯ ಬಳಿ ಮೃತ ಸ್ನೇಹಿತನನ್ನು ನೋಡಲು ಹೋಗಿದ್ದರು. ಈ ವೇಳೆ ಪ್ರಭು ಮತ್ತು ಭರತ್ ಮಾತುಕತೆ ನಡೆಸುತ್ತಿದ್ದಾಗ ಮಾತು ವಾಗ್ವಾದಕ್ಕೆ ತಿರುಗಿದೆ. ಬಳಿಕ ಮಾತು ತಾರಕಕ್ಕೇರಿ ಜಗಳವಾಗಿದ್ದು ಇದರಿಂದ ಕೋಪಗೊಂಡ ಪ್ರಭು ಭರತ್‌ನ ಕುತ್ತಿಗೆ ಹಾಗೂ ದೇಹದ ಇತರ ಭಾಗಗಳಿಗೆ ಹರಿತವಾದ ವಸ್ತುವಿನಿಂದ ಇರಿದಿದ್ದಾನೆ.

ಬಳಿಕ ಭರತ್‌ನನ್ನು ಅವನ ಸ್ನೇಹಿತರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಭರತ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಪ್ರಭುವನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅನುಮಾನವೆಂಬ ಪಿಶಾಚಿ, ಪತ್ನಿಯ ಮುಖಕ್ಕೆ ಪೆಟ್ರೋಲ್​ ಎರಚಿ ಬೆಂಕಿ ಹಚ್ಚಿದ ಪತಿ

ಪತ್ನಿಯನ್ನು ರೂಮ್​ನಲ್ಲಿ ಕೂಡಿಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ, FIR ದಾಖಲು

ತನ್ನನ್ನು ರೂಂನಲ್ಲಿ ಕೂಡಿಹಾಕಿ ಅತ್ತೆ ಹಾಗೂ ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಇಂತಹದೊಂದು ಘಟನೆ ನಡೆದಿದೆ. ಇದರ ಜೊತೆಗೆ 40 ಲಕ್ಷ ಖರ್ಚು ಮಾಡಿ ಮದುವೆ ಮಾಡಿಸಿ 550ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ನೀಡಿದ್ದರೂ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಪತಿ ಹಾಗೂ ಮನೆಯವರ ವಿರುದ್ಧ ಮಹಿಳೆ ಆರೋಪ ಮಾಡಿದ್ದಾಳೆ.

ನೆಲಮಂಗಲದ ಕಲ್ಯಾಣ ಮಂಟಪದಲ್ಲಿ 2019ರಲ್ಲಿ ಅಶ್ವಿನಿ ಮತ್ತು ತುಮಕೂರಿನ ಪ್ರತಾಪ್ ಅವರ ಮದುವೆ ನಡೆದಿದೆ. ಪತಿ ಮತ್ತು ಆತನ ಮನೆಯವರ ಬೇಡಿಕೆಯಂತೆ ಅಶ್ಚಿನಿಯ ತಂದೆ 50 ಗ್ರಾಂ ತೂಕದ ಚಿನ್ನದ ಚೈನ್ ಚಿನ್ನದ ಉಂಗುರ, 1 ಕೆಜಿ ತೂಕದ ಬೆಳ್ಳಿ ತಟ್ಟೆ, 1 ಕೆಜಿ ತೂಕದ ಚೊಂಬು ಹಾಗೂ ಅಶ್ಚಿನಿಗಾಗಿ ಒಟ್ಟು 500 ಗ್ರಾಂ ತೂಕದ ಚೈನ್, ಚಿನ್ನದ ಒಡವೆಳಾದ ಎರಡು ಲಾಂಗ್ ನೆಕ್ಲೇಸ್, ಒಂದು ಶಾರ್ಟ್ ನೆಕ್ಲೇಸ್, ನಾಲ್ಕು ಬಳೆಗಳು, ಒಂದು ಬ್ರಾಸ್ಲೈಟ್, ಎರಡು ಸೆಟ್ ಇಯರಿಂಗ್ಸ್, ಎರಡು ಸೆಟ್ ಓಲೆ ಜುಮುಕಿ, ಎರಡು ನಿತ್ಯ ಬಳಕೆಯ ಕೊರಳ ಚೈನ್, ಒಂದು ಬೈತಲೆ ಬೊಟ್ಟು, ನಾಲ್ಕು ಉಂಗುರ, 1 ಕೆಜಿ ಬೆಳ್ಳಿ ಒಡವೆಗಳನ್ನು ನನ್ನ ತಂದೆ ಮಾಡಿಸಿಕೊಟ್ಟಿದ್ದು, ಇದರ ಜೊತೆಗೆ 40 ಲಕ್ಷ ರೂ. ಮದುವೆಗಾಗಿ ಖರ್ಚು ಮಾಡಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:45 am, Tue, 21 November 23