AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಜೀವಿತ ಪ್ರಮಾಣಪತ್ರ ನವೀಕರಿಸಲು ಹೋಗಿ 1.27 ಲಕ್ಷ ರೂ. ಕಳೆದುಕೊಂಡ ನಿವೃತ್ತ ಪೊಲೀಸ್ ಅಧಿಕಾರಿ

ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು ಹೋಗಿ ಸೈಬರ್ ಕ್ರೈಂ ಆರೋಪಿಗಳನ್ನೇ ಬ್ಯಾಂಕ್ ಸಿಬ್ಬಂದಿ ಎಂದು ನಂಬಿ ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಬರೊಬ್ಬರಿ 1.27 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಜೀವಿತ ಪ್ರಮಾಣಪತ್ರ ನವೀಕರಿಸಲು ಹೋಗಿ 1.27 ಲಕ್ಷ ರೂ. ಕಳೆದುಕೊಂಡ ನಿವೃತ್ತ ಪೊಲೀಸ್ ಅಧಿಕಾರಿ
ಸೈಬರ್​ ಕ್ರೈಂ
ಆಯೇಷಾ ಬಾನು
|

Updated on: Nov 21, 2023 | 7:16 AM

Share

ಬೆಂಗಳೂರು, ನ.21: ತಮ್ಮ ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು (Life Certificate) ಸರ್ಕಾರಿ ದಾಖಲೆಗಳನ್ನು ಹಂಚಿಕೊಂಡ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು (Retired Police Officer) ಬರೊಬ್ಬರಿ 1.27 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾರೆ (Fraud). ಜೀವಿತ ಪ್ರಮಾಣಪತ್ರ ಎನ್ನುವುದು ಸರ್ಕಾರಿ ನೌಕರರಿಗೆ ಪಿಂಚಣಿ ಪ್ರಯೋಜನಗಳನ್ನು ಪಡೆಯುವುದನ್ನು ಮುಂದುವರಿಸಲು ಒದಗಿಸಲಾದ ಬಯೋಮೆಟ್ರಿಕ್-ಸಕ್ರಿಯ ಸೇವೆಯಾಗಿದೆ.

ಲೈಫ್ ಸರ್ಟಿಫಿಕೇಟ್ ಅನ್ನು ಡಿಜಿಟಲ್ ಆಗಿ ನವೀಕರಿಸಲು, ಸಂತ್ರಸ್ತರು ತನ್ನ ಬ್ಯಾಂಕ್ ಅನ್ನು ಸಂಪರ್ಕಿಸಿದರು. ಈ ವೇಳೆ ಆರೋಪಿಯು ಬ್ಯಾಂಕ್ ಉದ್ಯೋಗಿಯಂತೆ ನಟಿಸಿ ವಂಚನೆ ಮಾಡಿದ್ದಾನೆ. ಸಹಾಯ ಮಾಡುವ ನೆಪದಲ್ಲಿ ಆರೋಪಿಯು ಸಂತ್ರಸ್ತರ ಸರ್ಕಾರಿ ಗುರುತಿನ ಚೀಟಿ ನೀಡುವಂತೆ ಮನವಿ ಮಾಡಿದ್ದು ಖಾತೆಯಲ್ಲಿದ್ದ 1.27 ಲಕ್ಷ ರೂ. ಹಣವನ್ನು ದೂಚಿದ್ದಾನೆ.

ಘಟನೆ ಸಂಬಂಧ ಯೋಗ ತರಬೇತುದಾರರಾದ 37 ವರ್ಷದ ರೋಹಿತ್ ಕೆಎಸ್ ಎಂಬುವವರು ಮಾತನಾಡಿದ್ದು, ನನ್ನ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಶಿವಸ್ವಾಮಿ ಎಸ್, ಇವರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಜೀವಿತ ಪ್ರಮಾಣಪತ್ರವನ್ನು ನವೀಕರಿಸಲು ನಾನು ನನ್ನ ತಂದೆಯ ಖಾತೆ ಇರುವ ಬ್ಯಾಂಕನ್ನು ಸಂಪರ್ಕಿಸಿದೆ ಮತ್ತು ಬ್ಯಾಟರಾಯನಪುರದ ಬ್ಯಾಂಕ್‌ಗೆ ಭೇಟಿ ನೀಡಿದ್ದೆ. ನಂತರ ಅವರು ನನಗೆ ನಂಬರ್ ಮತ್ತು ಲಿಂಕ್ ಅನ್ನು ನೀಡಿದರು. ನಾನು ಬ್ಯಾಂಕ್ ಒದಗಿಸಿದ ನಂಬರ್​ಗೆ ಕಾಲ್ ಮಾಡಿದೆ ಮತ್ತು ಐಡಿ ವಿವರಗಳನ್ನು ಒದಗಿಸಲು ಟೈಮ್ ಸ್ಲಾಟ್ ಅನ್ನು ಆಯ್ಕೆ ಮಾಡಿದೆ. ನಾನು ನನ್ನ ಸ್ಲಾಟ್‌ಗಳನ್ನು ಸುಮಾರು 8-9 ಬಾರಿ ಕಾಯ್ದಿರಿಸಿದ್ದೇನೆ ಮತ್ತು ಬ್ಯಾಂಕಿನಿಂದ ಮರಳಿ ಕರೆ ಮಾಡುವುದಾಗಿ ಭರವಸೆ ನೀಡುವ ಸಂದೇಶವನ್ನು ಸತತವಾಗಿ ಸ್ವೀಕರಿಸಿದ್ದೇನೆ ಆದರೆ ಇದುವರೆಗೂ ಬ್ಯಾಂಕ್‌ನಿಂದ ಯಾವುದೇ ಕರೆ ಬರಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ಉದ್ಯೋಗ ನೀಡುವುದಾಗಿ ಭೂಮಿ ಪಡೆದು ವಂಚನೆ: ಕಂಪನಿ ವಿರುದ್ಧ ಡೆತ್​​ ನೋಟ್ ಬರೆದಿಟ್ಟು ಯುವ ರೈತ ಆತ್ಮಹತ್ಯೆ

ಕೊನೆಗೆ ಶುಕ್ರವಾರ, ರೋಹಿತ್ ತನ್ನ ತಂದೆಯ ಫೋನ್‌ಗೆ ಬಂದ ಕರೆ ಸ್ವೀಕರಿಸಿದರು. ಕರೆ ಮಾಡಿದ ಮಹಿಳೆ ತಾನು ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡಿದ್ದು ನಿಮ್ಮ ತಂದೆಯ ಜೀವನ ಪ್ರಮಾಣಪತ್ರವನ್ನು ನವೀಕರಿಸಲು ಸಹಾಯ ಮಾಡುವುದಾಗಿ ತಿಳಿಸಿದ್ದಾಳೆ. ನಾನು ಸ್ಲಾಟ್‌ಗಳನ್ನು ಕಾಯ್ದಿರಿಸಲು ಪ್ರಯತ್ನಿಸುತ್ತಿರುವಾಗ, ಕರೆ ಬಂದ ಹಿನ್ನೆಲೆ ಇದು ಬ್ಯಾಂಕಿಂದನೇ ಬಂದಿರುವ ಕಾನೂನುಬದ್ಧ ಕರೆ ಎಂದು ನಾನು ನಂಬಿದೆ ಮತ್ತು ಸರ್ಕಾರಿ ID ವಿವರಗಳನ್ನು ಹಂಚಿಕೊಂಡೆ. ನಂತರ ನನಗೆ ನನ್ನ ಬ್ಯಾಂಕ್‌ನಿಂದ OTP ಬಂತು.

ನನಗೆ ಬಂದ ಮೆಸೇಜ್​ನಲ್ಲಿ ನನ್ನ ಬ್ಯಾಂಕ್ ಹೆಸರನ್ನು ಉಲ್ಲೇಖಿಸಿದ್ದರಿಂದ, ಕಾರ್ಯವಿಧಾನಗಳೊಂದಿಗೆ ಮುಂದುವರಿಯಲು ನಾನು OTP ಅನ್ನು ಹಂಚಿಕೊಂಡೆ. ಇದಾದ ಸ್ವಲ್ಪ ಸಮಯದ ನಂತರ, ಸಂಪೂರ್ಣ ಬ್ಯಾಂಕ್ ಬ್ಯಾಲೆನ್ಸ್ ಡೆಬಿಟ್ ಮಾಡಲಾಗಿದೆ ಎಂದು ರೋಹಿತ್ ತಿಳಿಸಿದರು. “ನನ್ನ ಪೋಷಕರು ಅನಾರೋಗ್ಯಕ್ಕೀಡಾಗಿದ್ದಾರೆ ಮತ್ತು ಆ ಹಣವೇ ನಮ್ಮ ಏಕೈಕ ಉಳಿತಾಯವಾಗಿದೆ” ಎಂದು ರೋಹಿತ್ ಅಳಲು ತೋಡಿಕೊಂಡಿದ್ದಾರೆ. ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!