AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಮಾನವೆಂಬ ಪಿಶಾಚಿ, ಪತ್ನಿಯ ಮುಖಕ್ಕೆ ಪೆಟ್ರೋಲ್​ ಎರಚಿ ಬೆಂಕಿ ಹಚ್ಚಿದ ಪತಿ

ಲಾಸ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಆರೋಪಿ ಶ್ರೀನಿವಾಸ್ ಪ್ಲಂಬರ್ ಆಗಿದ್ದಾರೆ.  ದಂಪತಿಗೆ ಹದಿಹರೆಯದ ಮಕ್ಕಳಿದ್ದಾರೆ. ಲಾಸ್ಯ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಹಗಲು ಹೊತ್ತಿನಲ್ಲಿ ಮನೆಯಲ್ಲೇ ಇರುತ್ತಿದ್ದರು. ಹಗಲು ಹೊತ್ತಿನಲ್ಲಿ ಲಾಸ್ಯ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಶ್ರೀನಿವಾಸ್​ ಜಗಳವಾಡುತ್ತಿದ್ದನು. ಮುಂದೇನಾಯ್ತು ಈ ಸ್ಟೋರಿ ಓದಿ...

ಅನುಮಾನವೆಂಬ ಪಿಶಾಚಿ, ಪತ್ನಿಯ ಮುಖಕ್ಕೆ ಪೆಟ್ರೋಲ್​ ಎರಚಿ ಬೆಂಕಿ ಹಚ್ಚಿದ ಪತಿ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Nov 21, 2023 | 7:16 AM

Share

ಬೆಂಗಳೂರು ನ.21: ಪತ್ನಿಯ ನಡತೆ ಮೇಲೆ ಅನುಮಾನಗೊಂಡು ಪತಿ ಅತ್ಯಂತ ಭೀಕರ ಕೃತ್ಯ ಎಸಗಿದ್ದಾನೆ. ಪತ್ನಿಯ ಮುಖದ ಮೇಲೆ ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಬನಶಂಕರಿಯ (Banshankari) ಭವಾನಿನಗರದಲ್ಲಿ ಕಳೆದ ಗುರುವಾರ (ನ.16) ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹಿಳೆ ಲಾಸ್ಯ (ಹೆಸರು ಬದಲಾಯಿಸಲಾಗಿದೆ) ಅವರ ಮುಖ ಮತ್ತು ಎದೆಭಾಗ ಶೇ 30 ರಷ್ಟು ಸುಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಾಸ್ಯ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಆಕೆಯ ಜೀವಕ್ಕೆ ಯಾವುದೇ ಅಪಾಯವಿಲ್ಲ. ಆದರೆ, ಆಕೆಯ ಮುಖ ವಿಕಾರವಾಗುತ್ತದೆ ಎಂದು ಹೇಳಿದ್ದಾರೆ.

ಲಾಸ್ಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಆರೋಪಿ ಶ್ರೀನಿವಾಸ್ ಪ್ಲಂಬರ್ ಆಗಿದ್ದಾರೆ.  ದಂಪತಿಗೆ ಹದಿಹರೆಯದ ಮಕ್ಕಳಿದ್ದಾರೆ. ಲಾಸ್ಯ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದು, ಹಗಲು ಹೊತ್ತಿನಲ್ಲಿ ಮನೆಯಲ್ಲೇ ಇರುತ್ತಿದ್ದರು. ಹಗಲು ಹೊತ್ತಿನಲ್ಲಿ ಲಾಸ್ಯ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡು ಶ್ರೀನಿವಾಸ್​ ಜಗಳವಾಡುತ್ತಿದ್ದನು.

ಇದನ್ನೂ ಓದಿ: ಹಾಸನ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪತ್ನಿಯನ್ನ ಕೊಲೆ ಮಾಡಲು ಯತ್ನಿಸಿದ ಪತಿ

ನವೆಂಬರ್ 15 ರಂದು ಲಾಸ್ಯ ಕೆಲಸಕ್ಕೆ ಹಾಜರಾಗಿ ಮರುದಿನ ಬೆಳಿಗ್ಗೆ ಮನೆಗೆ ಬಂದಿದ್ದಳು. ಶ್ರೀನಿವಾಸ್ ಕೆಲಸಕ್ಕೆ ಹೋಗದೆ ಅವಳಿಗಾಗಿ ಕಾಯುತ್ತಿದ್ದನು. ಲಾಸ್ಯ ಮನೆಗೆ ಬಂದೊಡನೆ, ಶ್ರೀನಿವಾಸ್​ “ಹಿಂದಿನ ರಾತ್ರಿ ಎಲ್ಲಿದೆ” ಎಂದು ಪ್ರಶ್ನಿಸಲು ಪ್ರಾರಂಭಿಸಿದನು. ಲಾಸ್ಯ “ತಾನು ಆಸ್ಪತ್ರೆಯಲ್ಲೇ ಇದ್ದೆ” ಎಂದು ಹೇಳಿದದ್ದಾರೆ. ಆದರೆ ಶ್ರೀನಿವಾಸ್ ಅವರು ಹಿಂದಿನ ರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ್ದರು ಮತ್ತು ಲಾಸ್ಯ ಕೆಲಸಕ್ಕೆ ವರದಿ ಮಾಡಿಕೊಂಡಿಲ್ಲ ಎಂದು ಖಚಿತಪಡಿಸಿಕೊಂಡರು ಎಂದು ಆಕೆಗೆ ಪ್ರತಿವಾದ ಮಾಡಿದರು. ಆಕೆಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ತಾರಕಕ್ಕೆ ಏರಿ ಶ್ರೀನಿವಾಸ್ ಲಾಸ್ಯ ಮುಖದ ಮೇಲೆ ಪೆಟ್ರೋಲ್ ಎರಚಿ ಬೆಂಕಿಕಡ್ಡಿಯಿಂದ ಗೀರಿ ಬೆಂಕಿ ಹಚ್ಚಿದ್ದಾನೆ.

ಪೊಲೀಸರು ಇದೊಂದು ಪೂರ್ವಯೋಜಿತ ಕೃತ್ಯ ಎಂದು ಹೇಳಿದ್ದಾರೆ. ಅದೇ ರಾತ್ರಿ ಶ್ರೀನಿವಾಸ್ ಅವರು ತಾವು ಬಳಸಿದ ನೀರಿನ ಬಾಟಲಿಯಲ್ಲಿ ಪೆಟ್ರೋಲ್ ಖರೀದಿಸಿ ತಮ್ಮ ಮಗಳ ಮುಂದೆಯೇ ಕೃತ್ಯ ಎಸಗಿದ್ದಾರೆ. ಲಾಸ್ಯ ಸಹಾಯಕ್ಕಾಗಿ ಕೂಗಿಕೊಂಡಾಗ, ಶ್ರೀನಿವಾಸ್ ನೀರು ತುಂಬಿದ ಬಕೆಟ್ ತೆಗೆದುಕೊಂಡು ಬಂದು ಆಕೆಯ ದೇಹಕ್ಕೆ ಎರಚಿ ಬೆಂಕಿ ನಂದಿಸಿದ್ದಾರೆ. ಬಳಿಕ ಮಗಳ ಸಹಾಯದಿಂದ ಲಾಸ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ