ನೆಲಮಂಗಲ: ಪತ್ನಿಯನ್ನು ರೂಮ್​ನಲ್ಲಿ ಕೂಡಿಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ, FIR ದಾಖಲು

ತನ್ನನ್ನು ರೂಂನಲ್ಲಿ ಕೂಡಿಹಾಕಿ ಅತ್ತೆ ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಅಲ್ಲದೆ, 40 ಲಕ್ಷ ಖರ್ಚು ಮಾಡಿ ಮದುವೆ ಮಾಡಿಸಿ 550ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ನೀಡಿದ್ದರೂ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ನೆಲಮಂಗಲ: ಪತ್ನಿಯನ್ನು ರೂಮ್​ನಲ್ಲಿ ಕೂಡಿಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ, FIR ದಾಖಲು
ವರದಕ್ಷಿಣೆ ಕಿರುಕುಳ ಹಿನ್ನೆಲೆ ಪತಿ ಮತ್ತು ಕುಟುಂಬಸ್ಥರ ವಿರುದ್ಧ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಿದ ಮಹಿಳೆ (ಸಾಂದರ್ಭಿಕ ಚಿತ್ರ)
Follow us
ಬಿ ಮೂರ್ತಿ, ನೆಲಮಂಗಲ
| Updated By: Rakesh Nayak Manchi

Updated on:Nov 20, 2023 | 10:41 PM

ನೆಲಮಂಗಲ, ನ.20: ತನ್ನನ್ನು ರೂಂನಲ್ಲಿ ಕೂಡಿಹಾಕಿ ಅತ್ತೆ, ಮಕ್ಕಳ ಜೊತೆ ನಿದ್ರಿಸುತ್ತಿದ್ದ ಪತಿ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ ಘಟನೆ ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ಅಲ್ಲದೆ, 40 ಲಕ್ಷ ಖರ್ಚು ಮಾಡಿ ಮದುವೆ ಮಾಡಿಸಿ 550ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ನೀಡಿದ್ದರೂ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು ಎಂದು ಪತಿ ಹಾಗೂ ಮನೆಯವರ ವಿರುದ್ಧ ಆರೋಪಿಸಲಾಗಿದೆ.

ನೆಲಮಂಗಲದ ಕಲ್ಯಾಣ ಮಂಟಪದಲ್ಲಿ 2019ರಲ್ಲಿ ಅಶ್ವಿನಿ ಮತ್ತು ತುಮಕೂರಿನ ಪ್ರತಾಪ್ ಅವರ ಮದುವೆ ನಡೆದಿದೆ. ಪತಿ ಮತ್ತು ಆತನ ಮನೆಯವರ ಬೇಡಿಕೆಯಂತೆ ಅಶ್ಚಿನಿಯ ತಂದೆ 50 ಗ್ರಾಂ ತೂಕದ ಚಿನ್ನದ ಚೈನ್ ಚಿನ್ನದ ಉಂಗುರ, 1 ಕೆಜಿ ತೂಕದ ಬೆಳ್ಳಿ ತಟ್ಟೆ, 1 ಕೆಜಿ ತೂಕದ ಚೊಂಬು ಹಾಗೂ ಅಶ್ಚಿನಿಗಾಗಿ ಒಟ್ಟು 500 ಗ್ರಾಂ ತೂಕದ ಚೈನ್, ಚಿನ್ನದ ಒಡವೆಳಾದ ಎರಡು ಲಾಂಗ್ ನೆಕ್ಲೇಸ್, ಒಂದು ಶಾರ್ಟ್ ನೆಕ್ಲೇಸ್, ನಾಲ್ಕು ಬಳೆಗಳು, ಒಂದು ಬ್ರಾಸ್ಲೈಟ್, ಎರಡು ಸೆಟ್ ಇಯರಿಂಗ್ಸ್, ಎರಡು ಸೆಟ್ ಓಲೆ ಜುಮುಕಿ, ಎರಡು ನಿತ್ಯ ಬಳಕೆಯ ಕೊರಳ ಚೈನ್, ಒಂದು ಬೈತಲೆ ಬೊಟ್ಟು, ನಾಲ್ಕು ಉಂಗುರ, 1 ಕೆಜಿ ಬೆಳ್ಳಿ ಒಡವೆಗಳನ್ನು ನನ್ನ ತಂದೆ ಮಾಡಿಸಿಕೊಟ್ಟಿದ್ದು, ಇದರ ಜೊತೆಗೆ 40 ಲಕ್ಷ ರೂ. ಮದುವೆಗಾಗಿ ಖರ್ಚು ಮಾಡಿದ್ದಾರೆ.

ಅಲ್ಲದೆ, ಮದುವೆಗೂ ಮೊದಲು ನಾನು ಸ್ಕ್ರಾಪ್ ಡೀಲರ್ ಆಗಿದ್ದು, ಲಕ್ಷ ಲಕ್ಷ ಹಣ ಬರುತ್ತದೆ ಅಂತ ಪ್ರತಾಪ್ ನಂಬಿಸಿದ್ದನು. ಮದುವೆಯಾದ ಬಳಿಕವೇ ಪ್ರತಾಪ್ ಸ್ಕ್ರಾಪ್ ಡೀಲರ್ ಬಳಿ ಕೆಲಸ ಮಾಡುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ.

ಮದುವೆಯಾದ ಬಳಿಕ ಗಂಡ ಪ್ರತಾಪ್​ನನ್ನು ಕರೆದುಕೊಂಡು ತನ್ನ ಅತ್ತೆ ಮಾವನೊಂದಿಗೆ ಅಶ್ಚಿನಿ ವಾಸವಿದ್ದಳು. ಇಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಜಗಳ ತೆಗೆದು ಹಣ ತರುವಂತೆ ಮಾನಸಿಕ ದೈಹಿಕ ಹಿಂಸೆ ನೀಡುತ್ತಿದ್ದರು. ನಂತರ ಬೆಂಗಳೂರಿನ ಕಿರ್ಲೋಸ್ಕರ್ ಲೇಔಟ್​ನಲ್ಲಿ ಲೀಸ್ ಮನೆಯಲ್ಲಿ ವಾಸವಾಗಿದ್ದಾರೆ. ಅಲ್ಲಿಯೂ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದರು.

ಇದನ್ನೂ ಓದಿ: ನೀನು ನನಗೆ ಬೇಕು ಅಷ್ಟೇ, ನೆಲಮಂಗಲದ ಮಹಿಳಾ ಟೆಲಿಕಾಲರ್​ಗೆ ಲೈಂಗಿಕ ಕಿರುಕುಳ

ಅಲ್ಲದೆ, ಪತಿ ಪ್ರತಾಪ್ ಅವರ ಅತ್ತೆ ದೇವಿಕಾ ಅವರ ಮಗಳಾದ ಚಿತ್ರ ಅವರೊಂದಿಗೆ ಮೊಬೈಲ್​ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದು, ವಾಟ್ಸ್​ಆ್ಯಪ್​ನಲ್ಲಿ ಮೇಸೆಜ್ ಮಾಡುವುದು, ಸಲುಗೆಯಿಂದ ವರ್ತಿಸುವುದು, ಹೊರಗಡೆ ಸುತ್ತಾಡುವುದು ಮಾಡುತ್ತಿದ್ದರು. ಈ ಬಗ್ಗೆ ಪತಿ ಮತ್ತು ಚಿತ್ರಾರನ್ನ ವಿಚಾರಿಸಿದಾಗ ನನ್ನ ಮಾವ ನನ್ನ ಇಷ್ಟ ಎಂದು ಚೈತ್ರ ಹೇಳಿದ್ದಾಳೆ. ಈ ರೀತಿ ಯಾಕೆ ಕೇಳಿದೆಂದು ಪ್ರಶ್ನಿಸಿ ಪತ್ನಿ ಅಶ್ಚಿನಿಗೆ ಪ್ರತಾಪ್ ಮನಬಂದಂತೆ ಬೈದು ಥಳಿಸಿದ್ದಾನೆ.

ಇದಾದ ಬಳಿಕ ಅಕ್ಕಪಕ್ಕದವರೊಂದಿಗೆ, ಸ್ನೇಹಿತರೊಂದಿಗೆ ಹಾಗೂ ತವರು ಮನೆಯವರೊಂದಿಗೆ ಮಾತನಾಡಲು ಬಿಡದೆ ಪತ್ನಿಯ ಚಾರಿತ್ರ್ಯದ ಬಗ್ಗೆ ಪ್ರತಾಪ್ ಸಂಶಯಪಡಲು ಆರಂಭಿಸಿದ್ದಾನೆ. ಅಲ್ಲದೆ, ಚಿನ್ನ, ಬೆಳ್ಳಿ ಆರಭರಣಗಳ ಜೊತೆ ಸ್ಕೂಟರ್, ಎರಡು ಮೊಬೈಲ್, ಲ್ಯಾಪ್​ಟಾಪ್​ ಅನ್ನು ಕಿತ್ತುಕೊಂಡು ಬಲವಂತವಾಗಿ ಅಶ್ಚಿನಿ ಅತ್ತೆ ಶಾಂತಮ್ಮ, ಮಾವ ರಾಮು, ನನ್ನ ಗಂಡನ ಅಣ್ಣ ನವೀನ್ ಮತ್ತು ಆತನ ಹೆಂಡತಿ ಮಾನಸ ಸೇರಿ ಆಕೆಯನ್ನು ಗಂಡನ ಮನೆಯಿಂದ ತುಮಕೂರಿನಲ್ಲಿರುವ ಅತ್ತೆಯ ತಮ್ಮ ಯತಿರಾಜ್ ಮತ್ತು ಗೀತಾ ಅವರ ಮನೆಗೆ ಕಳುಹಿಸಿದ್ದಾರೆ.

ಇಲ್ಲಿಯೂ ಅಶ್ಚನಿಯನ್ನು ಯತೀರಾಜ್ ಮತ್ತು ಗೀತಾ ಮೂರು ತಿಂಗಳ ಕಾಲ ಯಾರ ಸಂಪರ್ಕಕ್ಕೂ ಬಿಡದೆ, ಮನೆಯಿಂದ ಹೊರಗೆ ಹೋಗಲು ಬಿಡದೆ ಬಂಧನದಲ್ಲಿಟ್ಟಿದ್ದರು. ಅಲ್ಲದೆ, ಪತಿ ಪ್ರತಾಪ್, ಗೀತಾ, ಯತೀರಾಜ್ ಮತ್ತು ಇವರ ಮಕ್ಕಳು ಹಲ್ಲೆ ಮಾಡುತ್ತಿದ್ದರು. ನಂತರ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ ಅವಮಾನಿಸಿ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ.

ಪತಿ ಮತ್ತು ಕುಟುಂಬಸ್ಥರ ಕಿರುಕುಳ ತಾಳಲಾಗದೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ ಅಶ್ಚಿನಿ ದೂರು ನೀಡಿದ್ದಾರೆ. ಇದರ ಅನ್ವಯ ಪೊಲೀಸರು, ಅಶ್ಚಿನಿ ಪತಿ ಪ್ರತಾಪ್, ಅತ್ತೆ ಶಾಂತಮ್ಮ, ಮಾವ ರಾಮು, ಭಾವ ನವೀನ್, ವಾರಗಿತ್ತಿ ಮಾನಸ, ಗಂಡನ ಆತ್ತೆ, ಗೀತಾ ಮತ್ತು ಮಾವ ಯತಿರಾಜ್, ಇವರ ಮಕ್ಕಳಾದ ಹೇಮಾ, ಮೋನಿಷಾ ವಿರುದ್ಧ 323, 342, 313, 504, 506, 498a, ಜೋತೆ 149 ಜೋತೆ 149, 3&4 ಡಿಪಿ ಆಕ್ಟ್ ಅಡಿ ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:55 pm, Mon, 20 November 23

ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​