ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ನೇಹಿತರು

ಹೆಬ್ಬಾಳ ಮೂಲದ ಯುವತಿಯನ್ನು ಹಿಂಬಾಲಿಸಿದ್ದ ಮುನಿರಾಜು. ಮಾನಸಿಕ, ದೈಹಿಕವಾಗಿ ಯುವತಿಗೆ ಕಿರುಕುಳ ನೀಡಿದ್ದ. ಇದೇ ವೇಳೆ ಈ ಬಗ್ಗೆ ಯುವತಿ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಯುವತಿ ಸ್ನೇಹಿತರು ಮುನಿರಾಜುನನ್ನು ಹಿಂಬಾಲಿಸಿದ್ದಾರೆ. ಬಳಿಕ ಸಂಜಯನಗರಕ್ಕೆ ಬರುತ್ತಿದ್ದಂತೆ ಯುವತಿ ಸ್ನೇಹಿತರು ಮುನಿರಾಜುಗೆ ಮುಖ ಮೂತಿ ನೋಡದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ನೇಹಿತರು
ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಸ್ನೇಹಿತರು
Edited By: ಆಯೇಷಾ ಬಾನು

Updated on: Aug 02, 2021 | 1:28 PM

ಬೆಂಗಳೂರು: ಯುವತಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಯುವತಿಯ ಸ್ನೇಹಿತರು ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಸಂಜಯನಗರದಲ್ಲಿ ನಡೆದಿದೆ. ಮುನಿರಾಜು ಒದೆ ತಿಂದ ವ್ಯಕ್ತಿ.

ಹೆಬ್ಬಾಳ ಮೂಲದ ಯುವತಿಯನ್ನು ಹಿಂಬಾಲಿಸಿದ್ದ ಮುನಿರಾಜು. ಮಾನಸಿಕ, ದೈಹಿಕವಾಗಿ ಯುವತಿಗೆ ಕಿರುಕುಳ ನೀಡಿದ್ದ. ಇದೇ ವೇಳೆ ಈ ಬಗ್ಗೆ ಯುವತಿ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಯುವತಿ ಸ್ನೇಹಿತರು ಮುನಿರಾಜುನನ್ನು ಹಿಂಬಾಲಿಸಿದ್ದಾರೆ. ಬಳಿಕ ಸಂಜಯನಗರಕ್ಕೆ ಬರುತ್ತಿದ್ದಂತೆ ಯುವತಿ ಸ್ನೇಹಿತರು ಮುನಿರಾಜುಗೆ ಮುಖ ಮೂತಿ ನೋಡದೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾದ ಮುನಿರಾಜು ಮತ್ತು ಯುವತಿ ತಾಯಿ ಒಂದೇ ಕಚೇರಿಯಲ್ಲಿ ಕೆಲಸ ಮಾಡ್ತಿದ್ರು. ಯುವತಿ ಮತ್ತು ಯುವತಿ ತಾಯಿಗೆ ವ್ಯಾಕ್ಸಿನೇಷನ್‌ ಹಾಕಿಸಲು ಮುನಿರಾಜು ಕರೆದೊಯ್ಯುತಿದ್ದ. ಈ ವೇಳೆ ದಾರಿ ಮಧ್ಯೆ ಯುವತಿ ಗೆಳೆಯರು ಅಟ್ಯಾಕ್ ಮಾಡಿ ಥಳಿಸಿದ್ದಾರೆ. ಅಟ್ಯಾಕ್ ಮಾಡುವಾಗ ಯುವತಿ ಹಾಗೂ ಯುವತಿ ತಾಯಿ ಇಬ್ಬರು ಸ್ಥಳದಲ್ಲೇ ಇದ್ದರು.

ಇದನ್ನೂ ಓದಿ: ಅಸಭ್ಯ ವರ್ತನೆ ತೋರಿದ್ದಕ್ಕೆ ಸ್ಕೂಟರ್ ಎತ್ತಿ ಚರಂಡಿಗೆ ಎಸೆದ ಮಹಿಳೆ; ನೆಟ್ಟಿಗರಿಂದ ಶ್ಲಾಘನೆ 

TV9 Web

TV9 Kannada

Read More
Loading...
Unable to load recommendations.
Follow Us