AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುವತಿ ಮೋಹಕ್ಕೆ ಬಿದ್ದು ಕ್ರಿಮಿನಲ್ ಆದ SSLC ಟಾಪರ್: ಟೆಕ್ಕಿ ಕೊಲೆ ಕೇಸ್​ನ ಮತ್ತೊಂದು ಸ್ಫೋಟಕ ಅಂಶ ಬಯಲು

ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 3ರಂದು ನಡೆದಿದ್ದ ಟೆಕ್ಕಿ ಯುವತಿ ಕೊಲೆ ಕೇಸ್ ಆರೋಪಿಯ ಕಥೆಗಳು ಮತ್ತಷ್ಟು ಬಯಲಾಗಿವೆ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕುರೈ ಮೋಹದ ಬಲೆಗೆ ಬಿದ್ದು ಘೋರ ಕೃತ್ಯ ಎಸಗಿದ್ದ. ಅದೇ, ಲಾಕ್ ಆಗಿದ್ದ ಸ್ಲೈಡ್ ವಿಂಡೋ ಡೋರ್ ತೆರೆಯುವಷ್ಟು ಸ್ಮಾರ್ಟ್ ಆಗಿದ್ದ. ಆತ SSLCಯಲ್ಲಿ ಟಾಪರ್ ಕೂಡ ಆಗಿದ್ದ!

ಯುವತಿ ಮೋಹಕ್ಕೆ ಬಿದ್ದು ಕ್ರಿಮಿನಲ್ ಆದ SSLC ಟಾಪರ್: ಟೆಕ್ಕಿ ಕೊಲೆ ಕೇಸ್​ನ ಮತ್ತೊಂದು ಸ್ಫೋಟಕ ಅಂಶ ಬಯಲು
ಆರೋಪಿ ಕರ್ನಲ್ ಕುರೈ
Ganapathi Sharma
|

Updated on: Jan 14, 2026 | 7:01 AM

Share

ಬೆಂಗಳೂರು, ಜನವರಿ 14: ಬೆಂಗಳೂರಿನ (Bangalore) ರಾಮಮೂರ್ತಿ ನಗರದಲ್ಲಿ ನಡೆದಿದ್ದ ಟೆಕ್ಕಿ ಯುವತಿ ಕೊಲೆ ಪ್ರಕರಣ ಸಂಬಂಧ ಆರೋಪಿ ಕರ್ನಲ್ ಕುರೈ ಕಂಬಿ ಎಣಿಸುತ್ತಿದ್ದಾನೆ. ಆದರೆ ತನಿಖೆ ವೇಳೆ ಆತ ಹೇಳಿದ ರೋಚಕ ಸಂಗತಿಗಳನ್ನು ಕೇಳಿ ಪೊಲೀಸರಿಗೇ ಶಾಕ್ ಆಗಿದೆ. ಯುವತಿಯ ಚಲನವಲನವನ್ನು ಎರಡು ತಿಂಗಳಿಂದ ಗಮನಿಸಿದ್ದ ಕರ್ನಲ್ ಕುರೈ ಓದುವ ನೆಪದಲ್ಲಿ, ಬಟ್ಟೆ ತೆಗೆದುಕೊಳ್ಳುವ ನೆಪದಲ್ಲಿ ಟೆರಸ್ ಮೇಲೆ ಹೋಗುತ್ತಿದ್ದ. ಜನವರಿ 3ರಂದು ಯುವತಿಯ ಸ್ನೇಹಿತೆ ಇಲ್ಲದಿರುವ ಸಮಯ ನೋಡಿಯೇ ಆಕೆಯ ಮನೆಗೆ ತೆರಳಿ ಘನಘೋರ ಕೃತ್ಯ ಎಸಗಿದ್ದ.

ಆರೋಪಿ ಕರ್ನಲ್ ಯುವತಿ ಶರ್ಮಿಳಾ ಮನೆಗೆ ಎಂಟ್ರಿಯಾಗಿದ್ದು ಇದೇ ಮೊದಲು. ಇದಕ್ಕೂ ಮೊದಲು ಇಬ್ಬರಿಗೂ ಪರಿಚಯ ಕೂಡ ಇರಲಿಲ್ಲ. ಆದರೆ ಆರೋಪಿ ಬಾಲ್ಕಿನಿಯ ಸ್ಲೈಡ್ ವಿಂಡೋ ಓಪನ್ ಮಾಡಿದ್ದೇ ರೋಚಕವಾಗಿದ್ದು ಮನೆಯೊಳಗೂ ವಿಚಿತ್ರ ಘಟನೆಗಳು ನಡೆದಿವೆ.

ಪ್ರತಿಭಾವಂತನ ಮೋಹದ ಕೊಲೆ

ಆರೋಪಿ ಕರ್ನಲ್ ಕುರೈ SSLCಯಲ್ಲಿ ಶೇ 97 ಅಂಕ ಪಡೆದಿದ್ದ ಎಂಬುದು ಕೂಡ ಈಗ ಬಯಲಾಗಿದೆ. ಕಾಲೇಜಿನಲ್ಲಿ ಸ್ಲೈಡ್ ವಿಂಡೋ ಇದ್ದು, ಒಮ್ಮೆ ಅದರ ಬಾಗಿಲಿನಲ್ಲಿ ಆತನ ಪುಸ್ತಕ ಸಿಕ್ಕಿಹಾಕಿಕೊಂಡಿತ್ತು. ಅದನ್ನು ತೆಗೆಯುವುದಕ್ಕಾಗಿ ಸ್ಲೈಡ್ ವಿಂಡೋ ಓಪನ್ ಮಾಡುವುದನ್ನು ತಿಳಿದುಕೊಂಡಿದ್ದ. ಅದೇ ತಂತ್ರ ಬಳಸಿ ಯುವತಿ ಮನೆಯ ಕಿಟಿಕಿ ತೆಗೆದು ಬೆಡ್ ರೂಂಗೆ ಪ್ರವೇಶಿಸಿದ್ದ.

ಯುವತಿ ಮನೆಯಲ್ಲಿ ನಡೆದಿದ್ದೇನು?

ಕುರೈ ಮನೆಯೊಳಕ್ಕೆ ಬಂದಾಗ ಯುವತಿ ಎಂಟ್ರಿಯಾದಾಗ ಅಡುಗೆ ಮನೆಯಲ್ಲಿದ್ದರು. ಸ್ಟವ್ ಆನ್ ಮಾಡಿ ಹಾಲು ಕಾಯಿಸಲು ಇಟ್ಟಿದ್ದರು. ಕುರೈ ನೋಡಿ ಗಾಬರಿಯಾಗಿ ಆತನ ಜತೆ ಜಗಳ ಆಗಿತ್ತು. ನಂತರ ಆಕೆ ಪ್ರಜ್ಞಾಹೀನವಾಗಿ ಬಿದ್ದಿದ್ದರು. ಈ ವೇಳೆ ಹಾಲು ಸಂಪೂರ್ಣವಾಗಿ ಉಕ್ಕಿ ಸ್ಟವ್ ಬೆಂಕಿ ಆರಿ ಹೋಗಿತ್ತು. ಬಳಿಕ ಅಡುಗೆ ಕೋಣೆಯಲ್ಲೇ ಯುವತಿಯನ್ನು ಮಲಗಿಸಿ ರೂಂನಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಅಡುಗೆ ಕೋಣೆಯಲ್ಲಿ ಯುವತಿ ದೇಹ ಪತ್ತೆಯಾಗಿದ್ದು, ಗ್ಯಾಸ್ ಲೀಕ್ ಆಗಿ ಕೋಣೆಯಲ್ಲಿ ಬೆಂಕಿ ಆಗಿರಬಹುದು ಎಂದು ಆರಂಭದಲ್ಲಿ, ಅಂದಾಜಿಸಲಾಗಿತ್ತು. ಹಾಗೆ ಬೆಂಕಿಯ ತೀವ್ರತೆಗೆ ಮೊಬೈಲ್ ಕೂಡ ಕರಗಿ ಹೋಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮನೆಯ ವಾತವಾರಣ, ಕೆಲ ಸನ್ನಿವೇಶಗಳು ಪೊಲೀಸರಿಗೆ ಅನುಮಾನ ಹುಟ್ಟಿಸಿತ್ತು. ಹೀಗಾಗಿ ಸಮೀಪದಲ್ಲಿ ಕೆಲಸ ಮಾಡುತ್ತಿದ್ದ ಕೆಲ ಹುಡುಗರನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಕುರೈನನ್ನೂ ವಿಚಾರಣೆ ಮಾಡಬೇಕು ಎನ್ನುವಷ್ಟರಲ್ಲಿ ಯುವತಿ ಮೊಬೈಲ್ ಆತನ ಬಳಿಯೇ ಪತ್ತೆ ಆಗಿತ್ತು. ಈ ಅಧಾರದ ಮೇಲೆ ಆತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಂಗಳೂರು ಮೂಲದ ಟೆಕ್ಕಿ ಕೊಲೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್: ಹತ್ಯೆಗೂ ಮುನ್ನ ರೇಪ್ ಮಾಡಿರುವ ಶಂಕೆ

ಒಟ್ಟಿನಲ್ಲಿ, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಕರ್ನಲ್ ಕುರೈ ಯುವತಿ ಮೋಹಕ್ಕೆ ಮಾರುಹೋಗಿ ಕೊಲೆಗಾರನಾಗಿ ಜೈಲು ಸೇರಿರುವುದು ದುರಂತ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ
ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ
ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು
ಯಶ್ ಹುಟ್ಟುಹಬ್ಬಕ್ಕೆ ಮನೆ ಮುಂದೆ ಬ್ಯಾನರ್ ಹಾಕಿದ್ದಕ್ಕೆ ಎಫ್​ಐಆರ್ ದಾಖಲು
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!