ಕುರುಬರಹಳ್ಳಿಯಲ್ಲಿ ಕೊಲೆ ಯತ್ನ: ಒಬ್ಬನ ಕೈ ಕಟ್​, ನಾಯಿ ಕಚ್ಚಿಕೊಂಡು ಹೋದ ಕೈ ಹುಡುಕಾಟದಲ್ಲಿ ಪೊಲೀಸರು!

| Updated By: Digi Tech Desk

Updated on: Nov 02, 2022 | 3:54 PM

ಒಂದೇ ಮಚ್ಚಿನೇಟಿಗೆ ಪ್ರಜ್ವಲ್ ಬಲಗೈ ಕಟ್ ಆಗಿ ಬಿದ್ದಿದೆ. ಹಲ್ಲೆ ನಡೆಸಿದ ಎದುರಾಳಿ ಗ್ಯಾಂಗ್ ಕೈ ಕಟ್ ಆಗ್ತಿದ್ದಂತೆ ಎಸ್ಕೇಪ್ ಆಗಿದೆ. ಈ ಮಧ್ಯೆ, ನಾಯಿಯೊಂದು ರಸ್ತೆಯಲ್ಲಿ ಬಿದ್ದಿರುವ ಹಸಿ ಮಾಂಸದ ಕೈಯನ್ನು ಕಚ್ಚಿ ಪರಾರಿಯಾಗಿದೆ. ಪೊಲೀಸರು ಕೈ ಹುಡುಕಾಟದಲ್ಲಿದ್ದಾರೆ.

ಕುರುಬರಹಳ್ಳಿಯಲ್ಲಿ ಕೊಲೆ ಯತ್ನ: ಒಬ್ಬನ ಕೈ ಕಟ್​, ನಾಯಿ ಕಚ್ಚಿಕೊಂಡು ಹೋದ ಕೈ ಹುಡುಕಾಟದಲ್ಲಿ ಪೊಲೀಸರು!
ಕೊಲೆ ಯತ್ನ: ಒಬ್ಬನ ಕೈ ಕಟ್​, ನಾಯಿ ಕಚ್ಚಿಕೊಂಡು ಹೋದ ಕೈನ ಹುಡುಕಾಟದಲ್ಲಿ ಪೊಲೀಸರು!
Follow us on

ಬೆಂಗಳೂರು: ಕುಡಿದ ಅಮಲಿನಲ್ಲಿ ಎರಡು ಗ್ಯಾಂಗ್ ಗಳ ನಡುವೆ ಗಲಾಟೆಯಾಗಿರುವ ಪ್ರಕರಣವೊಂದು ಅಕ್ಟೋಬರ್ 29ರ ರಾತ್ರಿ 12:30 ರ ಸುಮಾರಿಗೆ ನಡೆದಿದೆ. ಕೊಲೆ ಯತ್ನ ಪ್ರಕರಣದಲ್ಲಿ ಮಚ್ಚೇಟಿಗೆ ಪಜ್ವಲ್ (21) ಎಂಬ ಯುವಕನ ಕೈ ಕಟ್ ಆಗಿದೆ. ಕುರುಬರಹಳ್ಳಿಯಲ್ಲಿ ನಡೆದ ಭಯಾನಕ 307 ಕೇಸ್ ಇದಾಗಿದೆ. ಲಗ್ಗೆರೆಯಲ್ಲಿರುವ ಕದಂಬ ಬಾರ್ ನಲ್ಲಿ ಎಣ್ಣೆ ಹೊಡೆಯುತ್ತಿದ್ದ ಪ್ರಜ್ವಲ್ ಗ್ಯಾಂಗ್, ಎಣ್ಣೆ ಏಟಲ್ಲಿ ಎದುರಲ್ಲಿ ಕುಳಿತ ಮತ್ತೊಂದು ಟೀಂ ನೊಂದಿಗೆ ಗಲಾಟೆ ಮಾಡಿಕೊಂಡಿತ್ತು. ಗಲಾಟೆ ನಂತರ ಬಾರ್ ಸಿಬ್ಬಂದಿ ಎರಡೂ ಗ್ಯಾಂಗನ್ನು ಹೊರ ಕಳಿಸಿದ್ದರು.

ಬಾರ್ ನಿಂದ ಹೊರಬಿದ್ದ ನಂತರ ನಡೆದಿರುವುದೇ ಈ ಗ್ಯಾಂಗ್ ವಾರ್​, ಕೊಲೆ ಯತ್ನ ಪ್ರಕರಣ:

ಬಾರ್ ನಿಂದ ಹೊರಬಿದ್ದ ನಂತರ ಪ್ರಜ್ವಲ್ ಗ್ಯಾಂಗ್ ಕುರುಬರ ಹಳ್ಳಿ ಬಳಿ ಬಂದು ಕುಳಿತಿತ್ತು. ಆ ವೇಳೆಗೆ, ಗಲಾಟೆ ಮಾಡಿಕೊಂಡಿದ್ದ ಮತ್ತೊಂದು ಗ್ಯಾಂಗ್ ಕಾರಲ್ಲಿ ಎಂಟ್ರಿ ಕೊಟ್ಟಿದೆ. ಅವ್ರು ಎಂಟ್ರಿ ಆಗ್ತಿದ್ದಂತೆ ಪ್ರಜ್ವಲ್ ಜೊತೆಗಿದ್ದವರು ಎಸ್ಕೇಪ್ ಆಗಿದ್ದಾರೆ. ಎದುರಾಳಿ ಟೀಂ ಸರಿಯಾಗಿ ಆಗಲೇ ಪ್ರಜ್ವಲ್ ಮೇಲೆ ಮಚ್ಚು ಬೀಸಿದೆ. ಒಂದೇ ಮಚ್ಚಿನೇಟಿಗೆ ಪ್ರಜ್ವಲ್ ಬಲಗೈ ಕಟ್ ಆಗಿ ಬಿದ್ದಿದೆ.

ಹಲ್ಲೆ ನಡೆಸಿದ ಎದುರಾಳಿ ಗ್ಯಾಂಗ್ ಕೈ ಕಟ್ ಆಗ್ತಿದ್ದಂತೆ ಎಸ್ಕೇಪ್ ಆಗಿದೆ. ಈ ಮಧ್ಯೆ, ನಾಯಿಯೊಂದು ರಸ್ತೆಯಲ್ಲಿ ಬಿದ್ದಿರುವ ಹಸಿ ಮಾಂಸದ ಕೈಯನ್ನು ಕಚ್ಚಿ ಪರಾರಿಯಾಗಿದೆ. ಬೀದಿ ನಾಯಿ ಪ್ರಜ್ವಲ್ ಕೈಯನ್ನ ಕಚ್ಚಿಕೊಂಡು ಹೋಗುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಕೊನೆಗೆ, ಪ್ರಜ್ವಲ್ ತನ್ನ ಸ್ನೇಹಿತರ ಸಹಾಯದಿಂದ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದಾನೆ. ಆಸ್ಪತ್ರೆಯಲ್ಲಿ ಜೆಸಿಬಿ ಕೈ ಮೇಲೆ ಹತ್ತಿ ಕಟ್ ಆಯ್ತು ಎಂದು ಕಥೆ ಹೇಳಿದ್ದ ಪ್ರಜ್ವಲ್. ಕುಡಿದ ಅಮಲು ಇಳಿದ ಮೇಲೆ ಮಚ್ಚಿನೇಟಿನ ಮಾಹಿತಿ ಕೊಟ್ಟಿದ್ದ. ಗಾಂಜಾ ಮತ್ತು ಎಣ್ಣೆ ಮತ್ತಲ್ಲಿ ಗ್ಯಾಂಗ್ ಗಳು ಗಲಾಟೆ ಮಾಡಿಕೊಂಡಿದ್ದವು.

ಪ್ರಜ್ವಲ್ ತಾಯಿ ನೀಡಿದ ದೂರಿನ ಮೇರೆಗೆ ಕೇಸ್ ದಾಖಲು:

ವಿಷಯ ತಿಳಿದುಬರುತ್ತಿದ್ದಂತೆ ಆಸ್ಪತ್ರೆಗೆ ಬಂದ ಪ್ರಜ್ವಲ್ ತಾಯಿ, ದೂರು ನೀಡಿ ಕೇಸ್ ದಾಖಲಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ನಾಯಿ ಕಚ್ಚಿಕೊಂಡು ಹೋಗಿರೋ ಪ್ರಜ್ವಲನ ಕೈ ಹುಡುಕಾಟದಲ್ಲಿದ್ದಾರೆ ಪೊಲೀಸರು. ಸಿಸಿಟಿವಿ ಆಧಾರದ ಮೇಲೆ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

Published On - 1:38 pm, Wed, 2 November 22