ಬೆಂಗಳೂರು, ಜ.18: 2017ರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ (journalist Gauri Lankesh murder) ಮುನ್ನ ಇಬ್ಬರು ಆರೋಪಿಗಳು ಉತ್ತರ ಬೆಂಗಳೂರಿನ ಮನೆಯೊಂದನ್ನು ಅಡಗುದಾಣವಾಗಿ ಬಳಸಿಕೊಂಡು ವಾಸಿಸುತ್ತಿದ್ದರು ಎಂದು ವಿಚಾರಣೆಯ ಸಮಯದಲ್ಲಿ ಆ ಮನೆಯ ನಿವಾಸಿಗಳು ಪ್ರಕರಣದಲ್ಲಿ ಬಂಧಿತರಾಗಿರುವ ಬಲಪಂಥೀಯ ಸಂಘಟಿತ ಅಪರಾಧ ಸಿಂಡಿಕೇಟ್‌ನ ಒಟ್ಟು ಮೂವರು ಸದಸ್ಯರನ್ನು ಗುರುತಿಸಿದ್ದಾರೆ.
ಆದರೆ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಇತ್ತೀಚಿನ ವಿಚಾರಣೆಯಲ್ಲಿ ಮತ್ತೊಬ್ಬ ಸಾಕ್ಷಿ ಪ್ರತಿಕೂಲವಾಗಿದ್ದಾನೆ (hostile). ಸಾಕ್ಷಿಯು ಬಲಪಂಥೀಯ ಗುಂಪಾದ ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್) ನೊಂದಿಗೆ ಸಂಪರ್ಕ ಹೊಂದಿದ್ದು, ಗೌರಿ ಹತ್ಯೆಗೂ ಮುನ್ನ ಪತ್ರಕರ್ತೆಯ ನಿವಾಸದ ಬಳಿ ರಿಹರ್ಸಲ್ ನಡೆಸಲು ಆರೋಪಿ ಹೆಚ್ ಎಲ್ ಸುರೇಶ್‌ಗೆ ಮೋಟಾರ್‌ಸೈಕಲ್ ಅನ್ನು ಎರವಲು ನೀಡಿದ್ದ ಎಂದು ಗುರುತಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
2017ರಲ್ಲಿ ಹತ್ಯೆಯನ್ನು ಯೋಜಿಸಿ ಕಾರ್ಯಗತಗೊಳಿಸಿದಾಗ ಉತ್ತರ ಬೆಂಗಳೂರಿನ ಸೀಗೇಹಳ್ಳಿಯ ಪೊಲೀಸಪ್ಪ ಬಿಲ್ಡಿಂಗ್‌ನಲ್ಲಿ (Policeappa Building) ವಾಸಿಸುತ್ತಿದ್ದ ಕ್ಯಾಬ್ ಚಾಲಕ ಮತ್ತು ಮೊಬೈಲ್ ಫೋನ್ ಮೆಕ್ಯಾನಿಕ್ ಜನವರಿ ಎರಡನೇ ವಾರದಲ್ಲಿ ನಡೆದ ವಿಚಾರಣೆಯಲ್ಲಿ ಮೂವರು ಪ್ರಮುಖ ಆರೋಪಿಗಳನ್ನು ಗುರುತಿಸಿದ್ದಾರೆ. ಪುಣೆಯ ಮಾಜಿ ಎಚ್‌ಜೆಎಸ್ ಸಂಚಾಲಕ ಮತ್ತು ಮುಖ್ಯ ಯೋಜಕ ಅಮೋಲ್ ಕಾಳೆ, ವಿಜಯಪುರದ ಶ್ರೀರಾಮಸೇನೆಯ ಮಾಜಿ ಕಾರ್ಯಕರ್ತ ಮತ್ತು ಶೂಟರ್ ಪರಶುರಾಮ್ ವಾಘ್ಮೋರೆ ಮತ್ತು ಶೂಟರ್ ಅನ್ನು ಕರೆತಂದ ಮೋಟಾರ್‌ಸೈಕಲ್ ಸವಾರ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಅವರನ್ನು ಸಾಕ್ಷಿಗಳು ಗುರುತಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ ಕೊಲೆಗೆ ವ್ಯವಸ್ಥಾಪನಾ ಬೆಂಬಲವನ್ನು ನೀಡಿದ HJS ಕಾರ್ಯಕರ್ತನೂ ಆಗಿದ್ದ ಮೊಬೈಲ್ ಫೋನ್ ಮೆಕ್ಯಾನಿಕ್ ಅಮೋಲ್ ಕಾಳೆ ಎಂಬಾತ ಸೆಪ್ಟೆಂಬರ್ 2017 ರ ಮೊದಲ ವಾರದಲ್ಲಿ ಎರಡನೇ ಮಹಡಿಯಲ್ಲಿರುವ ನಿವಾಸಕ್ಕೆ ಪ್ರವೇಶಿಸುವುದನ್ನು ನೋಡಿದ್ದಾಗಿ ನೆರೆಹೊರೆಯವರಾದ ಹೆಚ್ ಎಲ್ ಸುರೇಶ್ ಗುರುತಿಸಿದ್ದಾರೆ.
ಇದನ್ನೂ ಓದಿ: ಎಂಎಂ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ: ವಿಶೇಷ ಕೋರ್ಟ್ ಸ್ಥಾಪನೆಗೆ ಸಿಎಂ ಸೂಚನೆ
ಪೊಲೀಸಪ್ಪ ಕಟ್ಟಡದ ಎರಡನೇ ಮಹಡಿಯಲ್ಲಿರುವ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಮೆಕ್ಯಾನಿಕ್ ಅವರು ಸೆಪ್ಟೆಂಬರ್ 2017 ರ ಆರಂಭದಲ್ಲಿ ಸುರೇಶ್ ಮತ್ತು ಅವರ ಕುಟುಂಬ ಇಲ್ಲದಿದ್ದಾಗ ಅಪರಿಚಿತರು ಮನೆಗೆ ಬೀಗ ತೆರೆದು ಪ್ರವೇಶಿಸುವುದನ್ನು ನೋಡಿದ್ದಾರೆ ಎಂದು ವರದಿಯಾಗಿದೆ. ಕೆಲಸದಿಂದ ಮರಳಿದ ನಂತರ ರಾತ್ರಿ ಶಂಕಿತನನ್ನು (2018 ರಲ್ಲಿ ಪೊಲೀಸ್ ಗುರುತಿನ ಪರೇಡ್‌ನಲ್ಲಿ ತಾನು ನೋಡಿದ್ದ ವ್ಯಕ್ತಿ ಅಮೋಲ್ ಕಾಳೆ) ನೋಡಿದ್ದನ್ನು ಕಳೆದ ವಾರ ಪ್ರಕರಣದ ವಿಚಾರಣೆಯ ಸಮಯದಲ್ಲಿಯೂ ಮತ್ತೆ ಆತ ಕಾಳೆ ಎಂದೇ ಗುರುತಿಸಿದ್ದಾರೆ.
ಪೋಲೀಸಪ್ಪ ಬಿಲ್ಡಿಂಗ್‌ನ ನಿವಾಸಿಯೂ ಆಗಿದ್ದ ಕ್ಯಾಬ್ ಡ್ರೈವರ್, 2017 ರ ಸೆಪ್ಟೆಂಬರ್‌ನಲ್ಲಿ ಒಂದು ಬೆಳಿಗ್ಗೆ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ನಲ್ಲಿ ಇಬ್ಬರು ಅಪರಿಚಿತರು ಬಂದು ಎಚ್‌ಎಲ್ ಸುರೇಶ್ ಅವರ ನಿವಾಸಕ್ಕೆ ಪ್ರವೇಶಿಸಿದ್ದನ್ನು ನೋಡಿದ್ದಾಗಿ ಮಾಫಿ ಸಾಕ್ಷ್ಯ ನುಡಿದಿದ್ದಾರೆ. 2018 ರಲ್ಲಿ ಪೊಲೀಸ್ ಗುರುತಿನ ಪರೇಡ್‌ನಲ್ಲಿ ಅಪರಿಚಿತರನ್ನು ಪರಶುರಾಮ್ ವಾಘ್ಮೋರೆ ಮತ್ತು ಗಣೇಶ್ ಮಿಸ್ಕಿನ್ ಎಂದು ಗುರುತಿಸಿದ ಚಾಲಕ, ಕಳೆದ ವಾರ ವಿಚಾರಣೆಯ ಸಮಯದಲ್ಲಿ ಮತ್ತೆ ಅದೇ ವ್ಯಕ್ತಿಗಳನ್ನು 2017 ರಲ್ಲಿ ಪೋಲೀಸಪ್ಪ ಬಿಲ್ಡಿಂಗ್‌ನಲ್ಲಿ ನೋಡಿದ್ದೆ ಎಂದು ಗುರುತಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ವಿಶೇಷ ತನಿಖಾ ತಂಡದ ಸಂಶೋಧನೆಗಳ ಪ್ರಕಾರ ಹತ್ಯೆಯಲ್ಲಿ ಭಾಗಿಯಾಗಿರುವ ಬಲಪಂಥೀಯ ತಂಡದ ಪ್ರಮುಖ ಸದಸ್ಯರಾದ ಅಮೋಲ್ ಕಾಳೆ, ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್, ಪರಶುರಾಮ್ ವಾಘ್ಮೋರೆ ಮತ್ತು ಭರತ್ ಕುರ್ಣೆ ಅವರುಗಳು ಅಪರಾಧ ಕೃತ್ಯವೆಸಗುವ ಮುನ್ನ ಹೆಚ್ ಎಲ್ ಸುರೇಶ್ ಅವರ ಮನೆಯಲ್ಲಿ ಭೇಟಿಯಾಗಿದ್ದರು.
ಈ ಪ್ರಕರಣದಲ್ಲಿ ಬಂಧಿತನಾಗಿರುವ ಸುರೇಶ್, 2017ರ ಸೆಪ್ಟೆಂಬರ್ 2ರಿಂದ 2017ರಂದು ಮನೆಯನ್ನು ತೆರವುಗೊಳಿಸಿ, ಸೆಪ್ಟೆಂಬರ್ 6ರವರೆಗೆ ತನ್ನ ಮನೆಯನ್ನು ಅಮೋಲ್ ಕಾಳೆ ಮತ್ತು ಇತರರಿಗೆ ಅಡಗುತಾಣವಾಗಿ ಬಳಸಲು ಅವಕಾಶ ನೀಡಿದ್ದ. ಹತ್ಯೆಯ ನಂತರ, ಕೊಲೆಗೆ ಗ್ಯಾಂಗ್ ಆರೋಪಿಗಳಲ್ಲಿ ಒಬ್ಬನಾದ ಅಮಿತ್ ಬದ್ದಿಯು ಬಳಸಿದ್ದ ಬಟ್ಟೆಗಳು, ಬಂದೂಕುಗಳು ಇತ್ಯಾದಿಗಳನ್ನು ಸುರೇಶ್ ಅವರ ಮನೆಯಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಬಚ್ಚಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ