ಬೆಂಗಳೂರಿನಲ್ಲಿ ತುಪ್ಪದ ವ್ಯಾಪಾರಿ ಬರ್ಬರ ಹತ್ಯೆ: ಚಿಂದಿ ಆಯುವವರ ಕಣ್ಣಿಗೆ ಬಿದ್ದ ಶವ

ಬೆಂಗಳೂರಿನಲ್ಲಿ ತುಪ್ಪ ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಲಾಗಿದ್ದು, ಚಿಂದಿ ಆಯುವವರು ಮೃತದೇಹವನನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ತುಪ್ಪದ ವ್ಯಾಪಾರಿ ಬರ್ಬರ ಹತ್ಯೆ: ಚಿಂದಿ ಆಯುವವರ ಕಣ್ಣಿಗೆ ಬಿದ್ದ ಶವ
ಪ್ರಾತಿನಿಧಿಕ ಚಿತ್ರ
Edited By:

Updated on: Nov 21, 2024 | 4:23 PM

ಬೆಂಗಳೂರು, )ನವೆಂಬರ್ 22): ತುಪ್ಪ ವ್ಯಾಪಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಳ್ಳೂರಿನಲ್ಲಿ ನಡೆದಿದೆ. ಬಳ್ಳೂರು ಬಳಿ ಮಧುರೈ ಮೂಲದ ಅಲಗರಾಜ್(31) ಹತ್ಯೆಗೀಡಾದ ವ್ಯಕ್ತಿ. ಶರಾವತಿ ಬಾರ್ ಬಳಿ ಅರೆನಗ್ನ ಸ್ಥಿತಿಯಲ್ಲಿ ಅಲಗರಾಜ್ ಶವ ಪತ್ತೆಯಾಗಿದೆ. ಇನ್ನು ಘಟನಾ ಸ್ಥಳದಲ್ಲಿ TVS ಎಕ್ಸೆಲ್ ಬೈಕ್, ಹಾಗೂ ತುಪ್ಪದ ಟಿನ್ ಪತ್ತೆಯಾಗಿದ್ದು, ಚಿಂದಿ ಆಯುವವರು ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಶವ ಬಿದ್ದಿರುವುದನ್ನು ಬಾಟಲ್, ಚಿಂದಿ ಆಯುವವರು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು, ಶ್ವಾನದಳ, ಎಫ್ಎಸ್ಎಲ್ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಳೇ ವೈಷಮ್ಯದ ಹಿನ್ನೆಲೆ ತಲೆಗೆ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.