ಮಹಾರಾಣಿ ಕಾಲೇಜಿನಲ್ಲಿ ಅವ್ಯವಸ್ಥೆ ಆಗರ: 20 ಕೋಟಿ ರೂ ಅನುದಾನದ ಬಗ್ಗೆ ಪ್ರಶ್ನಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

ಮಹಾರಾಣಿ ಕಾಲೇಜಿನಲ್ಲಿನ ಅವ್ಯವಸ್ಥೆಗಳನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಹಿರಂಗಪಡಿಸಿದ್ದಾರೆ. 20 ಕೋಟಿ ರೂಪಾಯಿಗಳ ಅನುದಾನದ ದುರ್ಬಳಕೆ ಮತ್ತು ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

ಮಹಾರಾಣಿ ಕಾಲೇಜಿನಲ್ಲಿ ಅವ್ಯವಸ್ಥೆ ಆಗರ: 20 ಕೋಟಿ ರೂ ಅನುದಾನದ ಬಗ್ಗೆ ಪ್ರಶ್ನಿಸಿದ ಮಹಿಳಾ ಆಯೋಗದ ಅಧ್ಯಕ್ಷೆ
ಮಹಾರಾಣಿ ಕಾಲೇಜಿನಲ್ಲಿ ಅವ್ಯವಸ್ಥೆ ಆಗರ, 20 ಕೋಟಿ ರೂ ಅನುದಾನದ ಬಗ್ಗೆ ಪ್ರಶ್ನಿಸಿದ ಮಹಿಳಾ ಆಯೋಗದ ಅಧ್ಯಕ್ಷೆ
Follow us
Vinay Kashappanavar
| Updated By: ಗಂಗಾಧರ​ ಬ. ಸಾಬೋಜಿ

Updated on:Nov 21, 2024 | 4:15 PM

ಬೆಂಗಳೂರು, ನವೆಂಬರ್​ 21: ಮಹಾರಾಣಿ ಕಾಲೇಜು (Maharani College) ಅವ್ಯವಸ್ಥೆಗಳ ಆಗರವಾಗಿದೆ. ಹೀಗಾಗಿ ವಿದ್ಯಾರ್ಥಿಗಳು, ಕಾಲೇಜು ಮತ್ತು ಹಾಸ್ಟೆಲ್​ನಲ್ಲಿ ಹಲವು ಸಮಸ್ಯೆಗಳಿವೆ ಎಂದು ಲೋಕಾಯುಕ್ತಕ್ಕೆ ಪತ್ರ ಬರೆದಿದ್ದರು. ಹಾಗಾಗಿ ನಿನ್ನೆ ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎಸ್​ ಫಣೀಂದ್ರ ಮತ್ತು ಬಿ. ವೀರಪ್ಪ ಅವರು ದಿಢೀರ್ ಭೇಟಿ ನೀಡಿದ್ದರು. ಇದೀಗ ಅದರ ಬೆನ್ನಲ್ಲೇ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

20 ಕೋಟಿ ರೂ ಹಣ ಎಲ್ಲೋಯ್ತು? ಆಡಳಿತ ಮಂಡಳಿ, ಉಪನ್ಯಾಸಕರಿಗೆ ನಾಗಲಕ್ಷ್ಮೀ ತರಾಟೆ

ಕಳೆದ ವಾರವಷ್ಟೇ ಉಪಲೋಕಾಯುಕ್ತರು ಭೇಟಿ ನೀಡಿದ್ದಾಗ ಸ್ವಚ್ಚತೆ ಕಾಪಾಡುವಂತೆ ಹೇಳಿದ್ದರು. ಆದರೆ ಇದೀಗ ಕಾಲೇಜಿನಲ್ಲಿ ಮತ್ತೆ ಸಮಸ್ಯೆಗಳ ಮಹಾಪೂರ ಕಂಡುಬಂದಿದೆ. ಹೀಗಾಗಿ ಮಹಾರಾಣಿ ಕಾಲೇಜಿಗೆ ರಾಜ್ಯ ಮಹಿಳಾ ಆಯೋಗ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 2021ರಲ್ಲಿ ನವೀಕರಣ ಕೆಲಸಕ್ಕಾಗಿ 20 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಇದುವರೆಗೂ ಅಭಿವೃದ್ಧಿ ಕೆಲಸ ಆಗಿಲ್ಲ, ದುಡ್ಡು ಎಲ್ಲೋಯ್ತು? ಎಂದು ಆಡಳಿತ ಮಂಡಳಿ, ಉಪನ್ಯಾಸಕರಿಗೆ ನಾಗಲಕ್ಷ್ಮೀ ತರಾಟೆ ತೆಗೆದುಕೊಂಡಿದ್ದಾರೆ. ಈ ಎಲ್ಲಾ ವಿಚಾರಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಗಣಿತದಲ್ಲಿ ಕಡಿಮೆ ಅಂಕ ಪಡೆದ ಎಂದು ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ಶಿಕ್ಷಕ

ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದ ಅಧ್ಯಕ್ಷೆ ನಾಗಲಕ್ಷ್ಮೀ, ಕಾಲೇಜಿನಲ್ಲಿ ಸ್ವಚ್ಛತೆ ಇಲ್ಲ, ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಹೆಣ್ಣುಮಕ್ಕಳು ಶೌಚಾಲಯಕ್ಕೆ ಹೋಗಲು ವ್ಯವಸ್ಥೆ ಇಲ್ಲ. ಕುಡಿಯುವ ನೀರಿಗಾಗಿ ಹೆಣ್ಣುಮಕ್ಕಳು ಫ್ರೀಡಂಪಾರ್ಕ್​ಗೆ ಹೋಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್​: ಮೈಸೂರಿನ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸಿಕ್ತಿದೆ ಹೊಟ್ಟೆ ತುಂಬಾ ಊಟ

ನೀರಿನ ಸಮಸ್ಯೆಯಿಂದ ಹಲವರಿಗೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದೆ. ಕಾಲೇಜಿನ ಮುಂದೆ ಬೋರ್ಡ್ ಇಲ್ಲ, ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ. ತಮ್ಮ ಸಮಸ್ಯೆಗಳ ಈ ಬಗ್ಗೆ ದೂರು ನೀಡಿದ್ರೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. ಕಾಲೇಜಿನ ಅವ್ಯವಸ್ಥೆ ಕಂಡು ಅಧ್ಯಕ್ಷೆ ನಾಗಲಕ್ಷ್ಮೀ ಆಕ್ರೋಶಗೊಂಡಿದ್ದು, ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ವಿದ್ಯಾರ್ಥಿನಿಯರಿಗೆ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:08 pm, Thu, 21 November 24

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ