ಬಿಪಿಎಲ್ ಕಾರ್ಡುಗಳನ್ನು ಮೊದಲಿದ್ದ ಹಾಗೆ ಬಡವರಿಗೆ ಹಿಂತಿರುಗಿಸದಿದ್ದರೆ ಉಗ್ರ ಹೋರಾಟ: ಆರ್. ಅಶೋಕ
ಬಡವರಿಗೆ ಅನ್ನ ಕೊಡಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ₹ 2 ಕೋಟಿ ಖರ್ಚು ಮಾಡಿ ತಮ್ಮ ಕಚೇರಿಯನ್ನು ರಿನೋವೇಟ್ ಮಾಡಿಸಿಕೊಳ್ಳುತ್ತಾರೆ, ಸಚಿವರ ಬಂಗ್ಲೆಗಳ ಸೌಂದರ್ಯೀಕರಣಕ್ಕಾಗಿ ₹ 40-50 ಕೋಟಿ ಖರ್ಚು ಮಾಡಲಾಗಿದೆ, ಬಿಪಿಎಲ್ ಕಾರ್ಡ್ ರದ್ದು ಕೆಲಸ ನಿಲ್ಲದೆ ಹೋದರೆ, ವಿಧಾನಸೌಧವೂ ಸೇರಿದಂತೆ ಎಲ್ಲ ಸರ್ಕಾರೀ ಕಚೇರಿಗಳಿಗೆ ಬೀಗ ಜಡಿಯಲಾಗುವುದು ಎಂದು ಅಶೋಕ ಹೇಳಿದರು.
ಬೆಂಗಳೂರು: ಬಿಪಿಎಲ್ ಕಾರ್ಡ್ ಗಳನ್ನು ಸರ್ಕಾರ ರದ್ದು ಮಾಡಿರುವ ವಿರುದ್ಧ ವಿರೋಧ ಪಕ್ಷದ ನಾಯಕ ಆರ್ ಅಶೋಕ ನೇತೃತ್ವದಲ್ಲಿ ಬಿಜೆಪಿ ಅಭಿಯಾನ ಮುಂದುವರಿದಿದೆ. ಜಯನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಶೋಕ, ಬಂಡಾಯವೆದ್ದಿರುವ ಶಾಸಕರ ಕ್ಷೇತ್ರಗಳಿಗೆ ಅನುದಾನ ಒದಗಿಸಲು ಸರ್ಕಾರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುವ ಕೆಲಸ ಶುರುಮಾಡಿದೆ, ಆದರೆ ನಾವು ಸರ್ಕಾರಕ್ಕೆ ಎಚ್ಚರಿಕೆ ಕೊಡ್ತೇವೆ, ವಿಧಾನಸಭೆಯ ಚಳಿಗಾಲದ ಅಧಿವೇಶನ ಶುರುವಾಗುವ ಮೊದಲು ರದ್ದು ಮಾಡಿರುವ ಬಿಪಿಎಲ್ ಕಾರ್ಡ್ಗಳನ್ನು ಬಡವರಿಗೆ ಮೊದಲಿಬ ಸ್ಥಿತಿಯಲ್ಲಿ ವಾಪಸ್ಸು ಮಾಡಬೇಕು, ಹೊಸದಾಗಿ ಅರ್ಜಿ ಸಲ್ಲಿಸುವಂತೆ ಹೇಳಬಾರದು, ಇದನ್ನು ಸರ್ಕಾರ ಮಾಡದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Published on: Nov 21, 2024 03:59 PM
Latest Videos