ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತಿಗೆ ಲಂಚ: ಕಾಂಗ್ರೆಸ್ ಸದಸ್ಯರಿಂದಲೇ ಗಂಭೀರ ಆರೋಪ
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದು, ಇ-ಸ್ವತ್ತು ನೀಡಲು ಲಂಚ ಪಡೆಯುವ ಬಗ್ಗೆ ಕಾಂಗ್ರೆಸ್ ಸದಸ್ಯರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಂತಹ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತ ಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ದಾವಣಗೆರೆ, ನವೆಂಬರ್ 21: ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ (Davangere corruption) ಮಧ್ಯವರ್ತಿಗಳ ಹಾವಳಿ ಹಿನ್ನೆಲೆ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಪಾಲಿಕೆಯ ಕಾಂಗ್ರೆಸ್ ಸದಸ್ಯರಿಂದಲೇ ಗಂಭೀರ ಆರೋಪ ಮಾಡಲಾಗಿದೆ. ಇ-ಸ್ವತ್ತು ಕೊಡಲು ಸಾವಿರಾರು ರೂಪಾಯಿ ಲಂಚ ಕೇಳಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಸುರಬಿ ಶಿವಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.
ಜನಕ್ಕೆ ತಿಂಗಳಾದರೂ ಇ-ಸ್ವತ್ತು ಸಿಗುತ್ತಿಲ್ಲ. ಕೆಲ ಮಧ್ಯವರ್ತಿಗಳು ಒಂದೇ ದಿನದಲ್ಲಿ ಇ-ಸ್ವತ್ತು ಕೊಡಿಸುತ್ತಾರೆ ಎಂದು ಸಭೆಯಲ್ಲಿ ಇನ್ನೊಬ್ಬ ಕಾಂಗ್ರೆಸ್ ಸದಸ್ಯ ಉದಯ ಕುಮಾರ ಆರೋಪಿಸಿದ್ದು, ದಾಖಲೆ ಪ್ರದರ್ಶನ ಮಾಡಿದರು. ಇಂತಹ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತ ಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಆರೋಪಿಯಿಂದ ಲಂಚ ಸ್ವೀಕರಿಸಿದ ಪೊಲೀಸ್ ಕಾನ್ಸ್ ಸ್ಟೆಬಲ್ ಅಮಾನತ್ತು
ಜಿಲ್ಲೆಯ ಹರಿಹರದ ನಗರ ಠಾಣೆಯ ಪೊಲೀಸ್ ಕಾನ್ಸ್ ಸ್ಟೆಬಲ್ ಮಂಜುನಾಥ ಬಿವಿ ಆರೋಪಿಯಿಂದ ಲಂಚ ಸ್ವೀಕರಿಸಿ ಅಮಾನತ್ತು ಆಗಿರುವಂತಹ ಘಟನೆ ಇತ್ತೀಚೆಗೆ ನಡೆದಿತ್ತು. ಎಸ್ಪಿ ಉಮಾ ಪ್ರಶಾಂತ್ ಅಮಾನತ್ತು ಮಾಡಿದ್ದಾರೆ. ಪೋಕ್ಸೋ ಪ್ರಕರಣವೊಂದರಲ್ಲಿ ಓರ್ವ ಆರೋಪಿಯನ್ನ ಠಾಣೆಗೆ ಕರೆತಂದು ನಿನ್ನ ಮೇಲೆ ಇನ್ನಷ್ಟು ಕೇಸ್ ಜಡಿಯುತ್ತೇನೆಂದು 12 ಸಾವಿರ ರೂಪಾಯಿ ಲಂಚ ಪಡೆದಿದ್ದರು.
ಇದನ್ನೂ ಓದಿ: ತಿಪ್ಪೇಸ್ವಾಮಿ ಅಲ್ಲ, ಬಂಗಾರ ಸ್ವಾಮಿ! ಲೋಕಾಯುಕ್ತ ದಾಳಿ ವೇಳೆ ಮನೆಯಲ್ಲಿ ಸಿಕ್ತು ಕೆಜಿಗಟ್ಟಲೆ ಚಿನ್ನ, ಬೆಳ್ಳಿ
ನಂತರ ಆರೋಪಿಯ ಮೊಬೈಲ್ ಪಡೆದು ಆತನ ಗೂಗಲ್ ಪೇ ಪಿನ್ ಪಡೆದು ಆರೋಪಿ ಖಾತೆಯಲ್ಲಿದ್ದ 25 ಸಾವಿರ ರೂಪಾಯಿ ತನ್ನ ಖಾತೆಗೆ ಕಾನ್ಸೆ ಸ್ಟೆಬಲ್ ಹಾಕಿಕೊಂಡಿದ್ದರು. ಆರೋಪಿ ಸಹೋದರನ ದೂರಿನ ಹಿನ್ನೆಲೆ ಹರಿಹರ ಠಾಣೆಯ ಇನ್ ಸ್ಪೆಕ್ಟರ್ ದೇವಾನಂದ ಎಸ್ಪಿಗೆ ವರದಿ ನೀಡಿದ್ದರು.
40 ಸಾವಿರ ರೂ. ಲಂಚ ಪಡೆಯುವಾಗ ಮೈಸೂರಿನ ಹೂಟಗಳ್ಳಿ ನಗರಸಭೆ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ದಿನೇಶ್ ಲೋಕಾಯುಕ್ತ ಬಲೆಗೆ ಬಿದ್ದ ಬಿಲ್ ಕಲೆಕ್ಟರ್. ಮನೆ ನಿರ್ಮಾಣಕ್ಕೆ ಖಾತೆ ಹಾಗೂ ನಕ್ಷೆ ಅನುಮೋದನೆಗೆ 2 ಲಕ್ಷ ರೂ. ಲಂಚ ಕೇಳಿದ್ದ ದಿನೇಶ್, ಮುಂಗಡವಾಗಿ 40 ಸಾವಿರ ರೂ. ಲಂಚ ತೆಗೆದುಕೊಳ್ಳುವಾಗ ಬಲೆಗೆ ಬಿದಿದ್ದಾರೆ.
ಇದನ್ನೂ ಓದಿ: ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಎಸ್ಪಿಟಿಜೆ ಉದೇಶ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ್ದು, ಇನ್ಸಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಟ್ರ್ಯಾಪ್ ಮಾಡಲಾಗಿದೆ. ದಿನೇಶ್‌ಗೆ ಸಹಕಾರ ನೀಡುತ್ತಿದ್ದ ಮಧ್ಯವರ್ತಿ ಚಂದನ್ ಕೂಡ ವಶಕ್ಕೆ ಪಡೆಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.