ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ನಿವಾಸಿ ಬಸಮ್ಮ ಅವರಿಗೆ ಬರಬೇಕಿದ್ದ ಪಿಂಚಣಿ ಹಣ ಬೇರೆ ಯಾರದ್ದೋ ಖಾತೆಗೆ ಜಮೆಯಾಗಿದೆ. ಪ್ರತಿ ತಿಂಗಳು 1200 ರೂ.ಸಂಧ್ಯಾ ಸುರಕ್ಷಾ ಪಿಂಚಣಿ ಹಣ ಪಡೆಯುತ್ತಿದ್ದ ಬಸಮ್ಮ ಅವರಿಗೆ ಕಳೆದ ನಾಲ್ಕು ತಿಂಗಳಿನಿಂದ ಹಣ ಜಮೆಯಾಗಿಲ್ಲ.
ರಾಯಚೂರು (Raichur) ಜಿಲ್ಲೆ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ನಿವಾಸಿ ಬಸಮ್ಮ ಅವರಿಗೆ ಬರಬೇಕಿದ್ದ ಪಿಂಚಣಿ ಹಣ ಬೇರೆ ಯಾರದ್ದೋ ಖಾತೆಗೆ ಜಮೆಯಾಗಿದೆ. ಪ್ರತಿ ತಿಂಗಳು 1200 ರೂ.ಸಂಧ್ಯಾ ಸುರಕ್ಷಾ ಪಿಂಚಣಿ ಹಣ ಪಡೆಯುತ್ತಿದ್ದ ಬಸಮ್ಮ ಅವರಿಗೆ ಕಳೆದ ನಾಲ್ಕು ತಿಂಗಳಿನಿಂದ ಹಣ ಜಮೆಯಾಗಿಲ್ಲ. ಚಿಕಿತ್ಸೆ, ಔಷಧಿ, ಮನೆಗೆ ವಸ್ತುಗಳ ಖರೀದಿಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಪಿಂಚಣಿ ಹಣಕ್ಕಾಗಿ ಕರಿಯಪ್ಪ ಹಾಗೂ ಬಸಮ್ಮ ದಂಪತಿ ನಿತ್ಯ ಕಚೇರಿಗೆ ಅಲೆದಾಡುತ್ತಿದ್ದಾರೆ.
ಕಂಪ್ಯೂಟರ್ ಆಪರೇಟರ್ ಮಾಡಿದ ಎಡವಟ್ಟಿನಿಂದ ವೃದ್ಧ ದಂಪತಿ ಕಣ್ಣೀರು ಹಾಕುವಂತಾಗಿದೆ. ಕಂಪ್ಯೂಟರ್ ಆಪರೇಟರ್ ಬಸಮ್ಮ ಎಂಬ ಹೆಸರಿನ ಮತ್ತೊಂದು ಬ್ಯಾಂಕ್ ಖಾತೆ ಲಿಂಕ್ ಮಾಡಿದ್ದರಿಂದ ಇವರಿಗೆ ಬರಬೇಕಿದ್ದ ಹಣ ಬರುತ್ತಿಲ್ಲ. ಹೀಗಾಗಿ, ಸಮಸ್ಯೆ ಪರಿಹರಿಸುವಂತೆ ವೃದ್ಧ ದಂಪತಿ ನಿತ್ಯ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದ್ದಾರೆ. ಬಸಮ್ಮ ಹಾಗೂ ಕರಿಯಪ್ಪ ದಂಪತಿ ಸದ್ಯ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ