ಯಾದಗಿರಿ: ಗಣಿತದಲ್ಲಿ ಕಡಿಮೆ ಅಂಕ ಪಡೆದ ಎಂದು ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ಶಿಕ್ಷಕ

ಯಾದಗಿರಿ: ಗಣಿತದಲ್ಲಿ ಕಡಿಮೆ ಅಂಕ ಪಡೆದ ಎಂದು ವಿದ್ಯಾರ್ಥಿ ಮೇಲೆ ಕ್ರೌರ್ಯ ಮೆರೆದ ಶಿಕ್ಷಕ

TV9 Web
| Updated By: ಆಯೇಷಾ ಬಾನು

Updated on: Aug 24, 2024 | 1:23 PM

ಗಣಿತ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿಗೆ ಶಿಕ್ಷಕ ಮನಬಂದಂತೆ ಥಳಿಸಿದ್ದಾನೆ. ಯಾದಗಿರಿ ಜಿಲ್ಲೆ ಸೈದಾಪುರದ ಮಹಾವೀರ್ ಜೈನ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕ ಕೃತ್ಯವೆಸಗಿದ್ದಾನೆ. ನಾಲ್ಕನೇ ತರಗತಿಯ ಯುವರಾಜ್​ಗೆ ಶಿಕ್ಷಕ ಡೆಲ್ವೀಲ್ ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾನೆ. ಡೆಲ್ವೀನ್ ವಿರುದ್ಧ ಸೈದಾಪುರ ಠಾಣೆಯಲ್ಲಿ FIR ದಾಖಲಾಗಿದೆ.

ಯಾದಗಿರಿ, ಆಗಸ್ಟ್​.24: ಗಣಿತ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದಾನೆ ಎಂದು ಶಿಕ್ಷಕ ವಿದ್ಯಾರ್ಥಿಗೆ‌ ಮನಸ್ಸೋ ಇಚ್ಛೆ ಥಳಿಸಿದ ಘಟನೆ ಯಾದಗಿರಿ (Yadgir) ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಡೆದಿದೆ. ವಿದ್ಯಾರ್ಥಿ (Student) ಮೇಲೆ ಶಿಕ್ಷಕ ಕ್ರೌರ್ಯ ಮೆರೆದಿದ್ದಾನೆ. ಚಡಿ ಏಟಿನಿಂದ ಬಾಲಕನ ಬೆನ್ನಿನ ಮೇಲೆ ಬಾಸುಂಡೆ ಬರುವ ಹಾಗೆ ಬಾರಿಸಿದ್ದಾನೆ. ಸದ್ಯ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಶಿಕ್ಷಕನ (Teacher) ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಸೈದಾಪುರ ಪಟ್ಟಣದಲ್ಲಿರುವ ಮಹಾವೀರ್ ಜೈನ್ ಆಂಗ್ಲ ಮಾಧ್ಯಮ ಖಾಸಗಿ ಶಾಲಾ ಶಿಕ್ಷಕನಿಂದ ವಿದ್ಯಾರ್ಥಿಗಳ ಮೇಲೆ ಕ್ರೌರ್ಯ ನಡೆಯುತ್ತಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಯುವರಾಜ ಎಂಬ ಬಾಲಕ ಗಣಿತದಲ್ಲಿ ಕಡಿಮೆ ಅಂಕ ಪಡೆದ ಎಂಬ ಕಾರಣಕ್ಕೆ ಶಿಕ್ಷಕ ಡೆಲ್ವೀಲ್ ಮನ ಬಂದಂತೆ ಥಳಿಸಿದ್ದಾನೆ. ಆಗಸ್ಟ್ 19 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಥಳಿತಕ್ಕೆ ಒಳಗಾದ ವಿದ್ಯಾರ್ಥಿ ಯುವರಾಜ್ ತನ್ನ ಪಾಲಕರಿಗೆ ವಿಷಯ ತಿಳಿಸಿದ್ದು ಶಿಕ್ಷಕನ ವಿರುದ್ಧ ಸೈದಾಪುರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ