ಆಗಸ್ಟ್ 22ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ: ಸಿಎಂಗೆ ಗಡುವು ನೀಡಿದ ಶಾಸಕ ಬಸವನಗೌಡ ಪಾಟೀಲ್​​ ಯತ್ನಾಳ್

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಆಗಸ್ಟ್ 22ರೊಳಗೆ ಸಿಎಂ  ಘೋಷಣೆ ಮಾಡಬೇಕು. ಇಲ್ಲದಿದ್ದರೆ ಸಿಎಂ ಮನೆ ಮುಂದೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​​ ಯತ್ನಾಳ್​​  ಬೆಂಗಳೂರಿನಲ್ಲಿ ಮತ್ತೊಂದು ಗಡವು ನೀಡಿದ್ದಾರೆ. 

ಆಗಸ್ಟ್ 22ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ: ಸಿಎಂಗೆ ಗಡುವು ನೀಡಿದ ಶಾಸಕ ಬಸವನಗೌಡ ಪಾಟೀಲ್​​ ಯತ್ನಾಳ್
ಶಾಸಕ ಬಸವನಗೌಡ ಪಾಟೀಲ್​​ ಯತ್ನಾಳ
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 22, 2022 | 4:55 PM

ಬೆಂಗಳೂರು: ಪಂಚಮಸಾಲಿ (Panchamsali) ಸಮುದಾಯಕ್ಕೆ 2ಎ (2A) ಮೀಸಲಾತಿಯನ್ನು ಆಗಸ್ಟ್  (August) 22ರೊಳಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಘೋಷಣೆ ಮಾಡಬೇಕು. ಆಗಸ್ಟ್ 23ರಂದು ಅಭಿನಂದನಾ ಸಮಾರಂಭ ನಡೆಸಬೇಕು. ಇಲ್ಲದಿದ್ದರೆ ಸಿಎಂ ಬೊಮ್ಮಾಯಿ ಮನೆ ಮುಂದೆ ನಾವು ಪ್ರತಿಭಟನೆ ಮಾಡುತ್ತೇವೆ. ಸಿಎಂ ಬೊಮ್ಮಾಯಿ, ಸಚಿವ ಸಿ.ಸಿ.ಪಾಟೀಲ್ (C.C Patil) ಮೇಲೆ ಭರವಸೆ ಇದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್​​ ಯತ್ನಾಳ್​​ (Basavanagowda patil yatnal)  ಬೆಂಗಳೂರಿನಲ್ಲಿ ಮತ್ತೊಂದು ಗಡವು ನೀಡಿದ್ದಾರೆ.

ಪಂಚಮಸಾಲಿ 2ಎ ಮೀಸಲಾತಿಗಾಗಿ ಎಲ್ಲರ ಹೋರಾಟ ಫಲವಾಗಿ ಸ್ವಲ್ಪ ದಿನಗಳಲ್ಲಿ ಸಿಹಿ ಸುದ್ದಿ ಬರುತ್ತದೆ. ಕೂಡಲಸಂಗಮ ಪೀಠ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. 2ಎ ಮೀಸಲಾತಿ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ ನಾನು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ ಮಾತನಾಡಿದ್ದೇವೆ ಎಂದು ಸಚಿವ ಸಿ.ಸಿ. ಪಾಟೀಲ್​ ಹೇಳಿದ್ದಾರೆ. ಮೀಸಲಾತಿ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.

ಇದನ್ನು ಓದಿ: ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ, ಮುಂದಿನ ವರ್ಷದಿಂದ ಸಿಇಟಿ ಮಾತ್ರ: ಅಶ್ವಥ್ ನಾರಾಯಣ್

ಮೀಸಲಾತಿ ಕುರಿತು ಕೊಂಚ ಕಾನೂನು ತೊಡಕುಗಳು ಇವೆ. ವಿಳಂಬವಾದರೂ ಉತ್ತಮ ಫಲಿತಾಂಶ ಬರುವ ನಂಬಿಕೆ ಇದೆ. ಹೀಗಾಗಿ ಸರ್ಕಾರದ ಭಾಗವಾಗಿ ನಾನು ಹೇಳುತ್ತಿದ್ದೇನೆ, ನಾವು ಎಷ್ಟೇ ಹೋರಾಟ ಮಾಡಿದರೂ ಕೆಲವೊಮ್ಮೆ ನಮಗೆ ಯಾವುದೂ ಕೈಗೆ ಸಿಗುವುದಿಲ್ಲ. ಪ್ರತಿಭಟನೆ ಬೇಡ, ಇನ್ನೆರಡು ತಿಂಗಳಲ್ಲಿ ಸಿಹಿ ಸುದ್ದಿ ಸಿಗುತ್ತದೆ ಎಂದು ಪ್ರತಿಭಟನೆ ಮಾಡದಂತೆ ಸಚಿವ ಸಿ.ಸಿ.ಪಾಟೀಲ್ ಮನವಿ ಮಾಡಿದರು

ಮೀಸಲಾತಿ ಕುರಿತು ವಿಜಯಾನಂದ ಕಾಶಪ್ಪನವರ್  ಮಾತನಾಡಿ ಇಂದು ಅಂತಿಮ ಘಟ್ಟಕ್ಕೆ ನಾವು ತಲುಪಿದ್ದೇವೆ. ನಮ್ಮವರೇ ಆದ ಹೆಬ್ಬುಲಿ, ನಮ್ಮ ಹೋರಾಟದ ದಿವ್ಯ ಶಕ್ತಿ ಸಿ‌.ಸಿ. ಪಾಟೀಲ್, ಯತ್ನಾಳ್ ಹಾಗೂ ಅರವಿಂದ್ ಬೆಲ್ಲದ್ ಅವರ ಪ್ರಯತ್ನದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ಹಿಂದುಳಿದ ವರ್ಗಗಳ ವರದಿ ಪಡೆದು ಮೀಸಲಾತಿ ಕೊಡುತ್ತಾರಂತೆ.  ಸಿಎಂ ಬೊಮ್ಮಾಯಿ‌ ಅನೇಕ ಬಾರಿ ಭರವಸೆ ಕೊಡುತ್ತಿದ್ದರು. ಕಾನೂನು ತೊಡಕು ಇದ್ದಿದ್ದರಿಂದ ಸ್ವಲ್ಪ ತಡವಾಗಿದೆ. ರಾಜ್ಯದ 30 ಜಿಲ್ಲೆಗಳ ಪ್ರವಾಸ ಕೈಗೊಂಡು ಜಯ ಮೃತ್ಯುಂಜಯ ಸ್ವಾಮೀಜಿ ಪ್ರಯತ್ನ ಮಾಡುತ್ತಿದ್ದಾರೆ.

ಇದನ್ನು ಓದಿ: ಸರ್ಜರಿ ಬಳಿಕ ದಿಗಂತ್​ ಹೇಗಿದ್ದಾರೆ? ಮಾಹಿತಿ ನೀಡಿದ ಐಂದ್ರಿತಾ ರೇ

ಹೀಗಾಗಿ ಇಂದು ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗುವುದು ಹತ್ತಿರದಲ್ಲಿ ಇದೆ. ಯತ್ನಾಳ್ ಹಾಗೂ ಸಿ.ಸಿ. ಪಾಟೀಲ್ ಅವರ ಭರವಸೆ ಮೇರೆಗೆ ಎರಡು ತಿಂಗಳ ಸ್ವಲ್ಪ ಸುಮ್ಮನೆ ಇರೋಣ. ನಮ್ಮ ಬೇಡಿಕೆ ಈಡೇರಿದರೆ ಪೀಠದ ವತಿಯಿಂದ ದೊಡ್ಡ ಸಮಾರಂಭ ಮಾಡುತ್ತೇವೆ. ಈ ಹೋರಾಟ ಮುಂದಕ್ಕೆ ಹಾಕೋಣ. ಎರಡು ತಿಂಗಳ ನಂತರ ಕೊಡಲಿಲ್ಲ ಅಂದರೆ ಮತ್ತೆ ಹೋರಾಟ ಮಾಡೋಣ. ನಮ್ಮಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ. ಹಾಗೇನಾದರೂ ಆದರೆ ರುಂಡ ಕತ್ತರಿಸಿ ಮಾಡಿ ಮುಂದಕ್ಕೆ ಇಡುತ್ತೇನೆ. ಹೀಗಾಗಿ ನಮಗೆ ಭರವಸೆ ಇದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜದ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ