Gold Silver Rate Today | ಬೆಂಗಳೂರು: ಜೂನ್ ತಿಂಗಳ ಪ್ರಾರಂಭದ ಮೊದಲ ವಾರದಲ್ಲಿ ಚಿನ್ನಾಭರಣಗಳ ಬೆಲೆ ಏರುತ್ತಲೇ ಇರುವುದು ಗ್ರಾಹಕರಿಗೆ ಕೊಂಚ ಬೇಸರಕ್ಕೆ ಕಾರಣವಾಗಿತ್ತು. ಕೊರೊನಾ ಸಂಕಷ್ಟದ ನಡುವೆ ಬೇಸತ್ತು ವಿಪರೀತ ಕಷ್ಟ ಕಂಡಿದ್ದ ಜನರಿಗೆ ಇಂಧನ ದರ ಏರಿಕೆಯು ಗಾಯದ ಮೇಲೆ ಬರೆ ಬಿದ್ದದ್ದಾಂತಾಯಿತು. ಅದರ ಬೆನ್ನಲ್ಲೇ ಆಭರಣಗಳ ಬೆಲೆಯೂ ಏರುತ್ತಿದೆ ಎಂಬ ಮಾತು ಬಂಗಾರ ಪ್ರಿಯರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೀಗ ತಿಂಗಳ ಎರಡನೇ ವಾರದಲ್ಲಿ ಸತತ ಮೂರು ದಿನಗಳ ಕಾಲ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ. ಇದು ಗ್ರಾಹಕರಿಗೆ ಕೊಂಚ ಸಮಾಧಾನ ತಂದ ವಿಷಯ.
ಭಾರತೀಯ ಮಾರುಕಟ್ಟೆಯಲ್ಲಿ ಇಂದು (ಸೋಮವಾರ, ಜೂನ್ 14) ಚಿನ್ನದ ದರ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,740 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,57,400 ರೂಪಾಯಿಗೆ ಕುಸಿತ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 49,890 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,98,900 ರೂಪಾಯಿಗೆ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಕೊಂಚ ಇಳಿಕೆ ಆಗಿದ್ದು ಕೆಜಿ ಬೆಳ್ಳಿಗೆ 72,200 ರೂಪಾಯಿ ನಿಗದಿಯಾಗಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,050 ರೂಪಾಯಿಗೆ ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ 4,60,500 ರೂಪಾಯಿಗೆ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,230 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 5,02,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.
ಒಟ್ಟಾರೆಯಾಗಿ ಸರಿಸುಮಾರು ಎಲ್ಲಾ ಕಡೆಗಳಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಆಗಿದೆ. ಚಿನ್ನ ಕೊಳ್ಳಲೆಂದು ಅದೆಷ್ಟೋ ವರ್ಷಗಳಿಂದ ಹಣ ಕೂಡಿಟ್ಟಿರುತ್ತಾರೆ. ಅದರಲ್ಲಿಯೂ ಹೂಡಿಕೆ ದೃಷ್ಟಿಯಿಂದ ಚಿನ್ನದ ದರ ಎಷ್ಟಿದೆ ಎಂಬ ಕುತೂಹಲ ಇರುತ್ತದೆ. ಹಾಗಿದ್ದಾಗ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ ಎಂಬ ಕುತೂಹಲ ಕಾಡುವುದು ಸಾಮಾನ್ಯ. ಇಂದು ಗ್ರಾಹಕರಿಗೆ ಖುಷಿಯ ವಿಚಾರ ಅಂದರೆ ಕಳೆದ ಮೂರು ದಿನಗಳಿಂದ ಚಿನ್ನದ ದರ ಇಳಿಕೆಯತ್ತ ಸಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,880 ರೂಪಾಯಿ ಇದ್ದು, 100 ಗ್ರಾಂ ಚಿನ್ನಕ್ಕೆ 4,78,800 ರೂಪಾಯಿ ನಿಗದಿ ಮಾಡಲಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 52,180 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನದ ದರ 5,21,800 ರೂಪಾಯಿಗೆ ಕುಸಿತ ಕಂಡಿದೆ. ಇನ್ನು, ಕೆಜಿ ಬೆಳ್ಳಿ ಬೆಲೆ 72,200 ರೂಪಾಯಿಗೆ ಇಳಿಕೆ ಆಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 100 ಗ್ರಾಂ ಚಿನ್ನದ ದರದಲ್ಲಿ 100 ರೂಪಾಯಿ ಇಳಿಕೆ ಕಂಡು ಬಂದಿದ್ದು 4,77,200 ರೂಪಾಯಿಗೆ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ದರ 47,720 ರೂಪಾಯಿಗೆ ಇಳಿದಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,720 ರೂಪಾಯಿಗೆ ಕುಸಿದಿದೆ. ಹಾಗೂ 100 ಗ್ರಾಂ ಚಿನ್ನದ ದರ 4,87,200 ರೂಪಾಯಿಗೆ ಇಳಿಕೆ ಆಗಿದೆ. 1 ಕೆಜಿ ಬೆಳ್ಳಿ ಬೆಲೆ 72,200 ರೂಪಾಯಿಗೆ ಇಳಿಕೆ ಆಗಿದೆ.
ಇದನ್ನೂ ಓದಿ: