Gold Silver Rate Today | ಬೆಂಗಳೂರು: ಜೂನ್ ತಿಂಗಳ ಎರಡನೇ ವಾರದಿಂದ ಚಿನ್ನದ ದರ(Gold Rate) ಇಳಿಕೆಯತ್ತ ಸಾಗುತ್ತಿರುವುದು ಗ್ರಾಹಕರಿಗೆ ಖುಷಿ ನೀಡಿರುವ ವಿಚಾರ. ಕಳೆದ ಮೇ ತಿಂಗಳಿನಲ್ಲಿ ಚಿನ್ನದ ದರ ಏರಿಳಿತ ಕಾಣುತ್ತಿದ್ದುದನ್ನು ಕಂಡ ಗ್ರಾಹಕರು ನಿರಾಸೆಗೊಂಡಿದ್ದರು. ಇಂದು (ಮಂಗಳವಾರ, ಜೂನ್ 22) ಚಿನ್ನದ ದರ ಇಳಿಕೆ ಕಂಡಿದೆ. ಬೆಳ್ಳಿ ದರವೂ(Silver Rate) ಕೂಡಾ ಕಳೆದೆರಡು ದಿನಗಳಿಂದ ಇಳಿಕೆ ಕಂಡಿತ್ತು. ಇಂದು ಸ್ಥಿರತೆಯನ್ನು ಕಾಯ್ದಿರಿಸಿಕೊಂಡಿದೆ.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,900 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,39,000 ರೂಪಾಯಿಗೆ ಇಳಿಕೆಯಾಗಿದೆ. ಸರಿಸುಮಾರು 900 ರೂಪಾಯಿಯಷ್ಟು ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,890 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,78,900 ರೂಪಾಯಿಗೆ ಇಳಿಕೆ ಆಗಿದೆ. ಸರಿಸುಮಾರು 1,000 ರೂಪಾಯಿಯಷ್ಟು ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕೆಜಿ ಬೆಳ್ಳಿ ಬೆಲೆ 67,600 ರೂಪಾಯಿ ಇದೆ.
ಚಿನ್ನ ಖರೀದಿ ಮಾಡಲೆಂದೇ ಹಣವನ್ನು ಕೂಡಿಡುತ್ತಾ ಬರುತ್ತಾರೆ. ಬೆವರು ಸುರಿಸಿ ಕಷ್ಪಟ್ಟು ಕೆಲಸ ಮಾಡಿ ಹಣ ಸಂಪಾದಿಸಿ ಆಭರಣ ಕೊಳ್ಳುವ ಆಸೆ ಇರುತ್ತದೆ. ಹೀಗಿರುವಾಗ ಚಿನ್ನದ ದರ ಯಾವಾಗ ಇಳಿಕೆಯತ್ತ ಸಾಗುತ್ತದೆ ಎಂಬುದೇ ಕುತೂಹಲ. ಇಂದಿನ ದರ ವಿವರ ಗಮನಿಸಿದಾಗ ಆಭರಣ ಖರೀದಿಸಬಹುದು ಎಂದೆನಿಸಿದರೆ ಯೋಚಿಸಬಹುದು.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,350 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,43,500 ರೂಪಾಯಿಗೆ ಹೆಚ್ಚಳವಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,380 ರೂಪಾಯಿಗೆ ಏರಿಕೆಯಾಗಿದ್ದು, 100 ಗ್ರಾಂ ಚಿನ್ನದ ದರ 4,83,800 ರೂಪಾಯಿಗೆ ಏರಿಕೆ ಆಗಿದೆ. ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆ 73,400 ರೂಪಾಯಿಗೆ ಏರಿಕೆ ಆಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,090 ರೂಪಾಯಿಗೆ ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ 4,60,900 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,290 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,02,900 ರೂಪಾಯಿ ನಿಗದಿ ಮಾಡಲಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, 67,800 ರೂಪಾಯಿಗೆ ಏರಿಕೆಯಾಗಿದೆ. ಸರಿಸುಮಾರು 200 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,220 ರೂಪಾಯಿ ಇದೆ. 100 ಗ್ರಾಂ ಚಿನ್ನದ ಬೆಲೆ 4,62,200 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,220 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,72,200 ರೂಪಾಯಿ ನಿಗದಿಯಾಗಿದೆ. ಕೆಜಿ ಬೆಳ್ಳಿ ಬೆಲೆ 67,800 ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ:
Gold Rate Today: ಇಂದು ಇಳಿಕೆ ಕಂಡ ಚಿನ್ನದ ದರ; ವಿವಿಧ ನಗರಗಳಲ್ಲಿನ ಆಭರಣದ ಬೆಲೆ ವಿವರ ಇಲ್ಲಿದೆ
Gold Rate Today: ವೀಕೆಂಡ್ನಲ್ಲಿ ಆಭರಣದ ಬೆಲೆ ಎಷ್ಟು? ಚಿನ್ನದ ದರ ಮತ್ತಷ್ಟು ಇಳಿಕೆಯೇ? ದರ ವಿವರ ಹೀಗಿದೆ
Published On - 9:06 am, Tue, 22 June 21