Gold Silver Rate Today | ಬೆಂಗಳೂರು: ನಿನ್ನೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಹೆಚ್ಚಳವಾಗಿದೆ. ಹಾವು ಏಣಿ ಆಟವನ್ನು ಮತ್ತೆ ಶುರು ಮಾಡಿದೆ. ಅದೆಷ್ಟೋ ದಿನಗಳಿಂದ ತಮ್ಮ ಸ್ನೇಹಿತರಿಗಾಗಿ ಗಿಫ್ಟ್ ಕೊಡಬೇಕೆಂದು ಆಸೆ ಪಟ್ಟಿರಬಹುದು.. ಇಲ್ಲವೇ, ಮನೆಯವರಿಗೆ ವಿಶೇಷವಾಗಿ ಏನಾದರೂ ಕೊಡಿಸಲಬೇಕಲ್ವಾ.. ಎಂದು ಯೋಚಿಸಿರಬಹುದು. ಹೀಗಿರುವಾಗ ಚಿನ್ನಾಭರಣ ಕೊಡುವತ್ತ ಯೋಚಿಸಬಹುದು. ಇಂದು (ಸೋಮವಾರ, ಜೂನ್ 28) ಚಿನ್ನ ಮತ್ತು ಬೆಳ್ಳಿ ಬೆಲೆ ಯಾವ ಯಾವ ನಗರಗಳಲ್ಲಿ ಎಷ್ಟಿದೆ ಎಂಬುದರ ಕುರಿತಾಗಿ ತಿಳಿಯೋಣ.
ಮನೆಯಲ್ಲಿ ಮದುವೆ ಇದೆ ಎಂಬ ಕಾರಣಕ್ಕೋ ಅಥವಾ ಆಪತ್ಕಾಲದಲ್ಲಿ ಸಹಾಯವಾಗುತ್ತದೆ ಎಂಬ ಭರವಸೆಯಿಂದ ಚಿನ್ನಾಭರಣ ಕೊಳ್ಳಲೆಂದೇ ಹಣವನ್ನು ಬಚ್ಚಿಟ್ಟಿರುತ್ತೇವೆ. ಅದೆಷ್ಟೋ ವರ್ಷಗಳಿಂದ ಕಷ್ಟಪಟ್ಟು ದುಡಿದ ಹಣದಲ್ಲಿ ಚಿನ್ನ ಕೊಳ್ಳಲೇ ಬೇಕು ಎಂಬ ಆಸೆಯೂ ಇರಬಹುದು. ಹೀಗಿದ್ದಾಗ ಇಂದಿನ ಮಾರುಕಟ್ಟೆಯಲ್ಲಿರುವ ಚಿನ್ನದ ದರ ನಿಮಗೆ ಹೊಂದಿಕೆ ಆಗಬಹುದು ಎಂದೆನಿಸಿದರೆ ಚಿನ್ನ ಖರೀದಿಸುವ ಕುರಿತಾಗಿ ಯೋಚಿಸಬಹುದು.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,110 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,41,100 ರೂಪಾಯಿಗೆ ಏರಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,110 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾ ಚಿನ್ನದ ದರ 4,81,100 ರೂಪಾಯಿಗೆ ಏರಿಕೆ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇಂದು ಕೆಜಿ ಬೆಳ್ಳಿ 67,900 ರೂಪಾಯಿ ದಾಖಲಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,260 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನಕ್ಕೆ 4,62,600 ರೂಪಾಯಿ ದಾಖಲಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,310 ರೂಪಾಯಿ ನಿಗದಿಯಾಗಿದ್ದು, 100 ಗ್ರಾಂ ಚಿನ್ನದ ದರ 5,03,100 ರೂಪಾಯಿಗೆ ಏರಿಕೆಯಾಗಿದೆ. ಕೆಜಿ ಬೆಳ್ಳಿ ಬೆಲೆ 67,900 ರೂಪಾಯಿ ನಿಗದಿಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,160 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನಕ್ಕೆ 4,61,600 ರೂಪಾಯಿ ದಾಖಲಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,160 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 4,71,600 ರೂಪಾಯಿಗೆ ಹೆಚ್ಚಳವಾಗಿದೆ. ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಬೆಳ್ಳಿ ದರ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಕೆಜಿ ಬೆಳ್ಳಿ ಬೆಲೆ 67,900 ರೂಪಾಯಿ ಇದೆ.
ಇದನ್ನೂ ಓದಿ:
Gold Rate Today: ಇಂದು ಚಿನ್ನದ ದರ ಏರಿಕೆ, ಬೆಳ್ಳಿ ಬೆಲೆ ಇಳಿಕೆ; ವಿವಿಧ ನಗರಗಳಲ್ಲಿನ ದರ ವಿವರ ಇಲ್ಲಿದೆ
Gold Rate Today: ಅಮ್ಮನಿಗೆ ಚಿನ್ನದ ಸರವನ್ನು ಗಿಫ್ಟ್ ಕೊಡಬೇಕೆಂದಿದ್ದೀರಾ? ಇಳಿಕೆಯಲ್ಲಿದೆ ಚಿನ್ನದ ದರ ಗಮನಿಸಿ
Published On - 8:39 am, Mon, 28 June 21