ಹನುಮಂತನಗರದ ವಸಿಷ್ಠ ಕ್ರೆಡಿಟ್ ಸೊಸೈಟಿಯಿಂದಲೂ ನಡೆದಿದೆ ಕೋಟ್ಯಂತರ ರೂ ವಂಚನೆ, ಆರೋಪಿಗಳಿಬ್ಬರು ಎಸ್ಕೇಪ್!

Sri Vashishta Credit Souharda Sahakari Niyamita fraud: ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತದ ವಿರುದ್ಧ ಎಫ್ಐಆರ್ ಮಾಡುವುದಕ್ಕೂ ಮುನ್ನ ಸ್ಥಳಿಯ ಶಾಸಕ ರವಿಸುಬ್ರಮಣ್ಯ ಜೊತೆ ಮಾತುಕತೆ ನಡೆದಿದೆ. ಕೆಲವು ದಿನ ಕಾಲಾವಕಾಶ ನೀಡುವಂತೆ ಹೂಡಿಕೆದಾರರಿಗೆ ರವಿಸುಬ್ರಮಣ್ಯ ಹೇಳಿದ್ದರಂತೆ. ಶಾಸಕರ ಮಾತಿಗೂ ಬೆಲೆ ಕೊಡದೆ, ಹೂಡಿಕೆ ಹಣ ವಾಪಸ್ ನೀಡದಿದ್ದಾಗ ಇದೀಗ ಎಫ್ಐಆರ್ ಶಾಸ್ತ್ರ ನಡೆದಿದೆ.

ಹನುಮಂತನಗರದ ವಸಿಷ್ಠ ಕ್ರೆಡಿಟ್ ಸೊಸೈಟಿಯಿಂದಲೂ ನಡೆದಿದೆ ಕೋಟ್ಯಂತರ ರೂ ವಂಚನೆ, ಆರೋಪಿಗಳಿಬ್ಬರು ಎಸ್ಕೇಪ್!
ಹನುಮಂತನಗರದ ವಸಿಷ್ಠ ಕ್ರೆಡಿಟ್ ಸೊಸೈಟಿಯಿಂದಲೂ ನಡೆದಿದೆ ಕೋಟ್ಯಂತರ ರೂ ವಂಚನೆ, ಆರೋಪಿಗಳಿಬ್ಬರು ಎಸ್ಕೇಪ್!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 28, 2021 | 2:58 PM

ಬೆಂಗಳೂರು: ಬೆಂಗಳೂರಿನಲ್ಲಿ‌ ಮತ್ತೊಂದು ಕೊ ಅಪರೇಟಿವ್ ಹಗರಣ ಬೆಳಕಿಗೆ ಬಂದಿದೆ. ಬಸವನಗುಡಿಯಲ್ಲಿದ್ದ ಶ್ರೀ ರಾಘವೇಂದ್ರ ಬ್ಯಾಂಕ್ ನಂತರ ನಗರದಲ್ಲಿ ಮತ್ತೊಂದು ಅಂತಹುದೆ ವಂಚನೆ ಪ್ರಕರಣ ದಾಖಲಾಗಿದೆ. ನೂರಾರು ಜನರ ಹಣ ಡೆಪಾಸಿಟ್ ಮಾಡಿಸಿಕೊಂಡು ಉಂಡೆನಾಮ ತಿಕ್ಕಿದ್ದಾರೆ. ಇದೀಗ ಶ್ರೀ ವಸಿಷ್ಠ ಕ್ರೆಡಿಟ್ ಸೌಹರ್ದ ಸಹಕಾರಿ ಬ್ಯಾಂಕ್ ವಿರುದ್ಧ ಕೋಟಿ ಕೋಟಿ ಗುಳುಂ ಮಾಡಿರುವ ಆರೋಪ ಎದುರಾಗಿದೆ. ಹೆಚ್ಚಾಗಿ ಪಿಂಚಣಿದಾರರಾದಂತಹ ಸದಸ್ಯರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಶ್ರೀ ರಾಘವೇಂದ್ರ ಬ್ಯಾಂಕ್ ಸಮೀಪದಲ್ಲೇ ಈ ಬ್ಯಾಂಕ್​ ಸಹ ಇದೆ!  ಹನುಮಂತನಗರದಲ್ಲಿರುವ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಎಂಬ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಇದಾಗಿದೆ! Sri Vashishta Credit Souharda Sahakari Niyamita ದಲ್ಲಿ ಸ್ಥಳೀಯ ಜನ ಸುಮಾರು ನೂರಾರು ಕೋಟಿ ರೂಪಾಯಿ ಡೆಪಾಸಿಟ್ ಇಟ್ಟಿದ್ದರು.

ಅಂದಹಾಗೆ ಕಳೆದ 10 ವರ್ಷಗಳಿಂದ ಈ ಸೊಸೈಟಿ ಚಾಲ್ತಿಯಲ್ಲಿತ್ತು. ಅದರ ನಂಬಿಕೆ ಆಧಾರದ ಮೇಲೆ ಜನ ಹೆಚ್ಚು ಹೆಚ್ಚಾಗಿ ಇತ್ತೀಚೆಗೆ ಠೇವಣಿಗಳನ್ನು ಇಡತೊಡಗಿದ್ದರು. ಜನರ ಆ ಅಮಾಯಕ ನಂಬಿಕೆಯನ್ನೇ ಆಧಾರವಾಗಿಸಿಕೊಂಡು ಹಣ ಕ್ರೋಢೀಕರಣವಾಗುತ್ತಿದ್ದಂತೆ ಸೊಸೈಟಿ ಕಡೆಯಿಂದ ವಂಚನೆ ನಡೆದಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ಸರಿಯಾಗಿ 2 ದಶಕಗ ಹಿಂದೆ ಇದೇ ಹನುಮಂತನಗರ, ಬಸವನಗುಡಿ, ಸ್ವಲ್ಪ ಅದರಾಚೆಗೆ ಸಜ್ಜನರಾವ್​ ಸರ್ಕಲ್​ವರೆಗೂ ವಿಸ್ತರಿಸಿಕೊಂಡು ವಿನಿವಿಂಕ್​ ಹೆಸರಿನಲ್ಲಿ ಶ್ರೀನಿವಾಸ ಶಾಸ್ತ್ರಿ ಮತ್ತು ಲೋಕೇಶ್ ಎಂಬಿಬ್ಬರು ಸ್ಕೀಮಿಗಳು ಚೈನ್​ ಮನಿ ಮೂಲಕ (Ponzi scheme) ನೂರಾರು ಮಂದಿಗೆ ನೂರಾರು ಕೋಟಿ ರೂ ನಾಮ ತಿಕ್ಕಿದ್ದರು ಎಂಬುದನ್ನು ಸ್ಮರಿಸಬಹುದು.

ಈ ಬಾರಿ ಕೊರೊನಾ ಲಾಕ್​ಡೌನ್ ನೆಪ! ಠೇವಣಿದಾರರ ಎದೆ ಢವಢವ ಹೊಡೆದುಕೊಳ್ಳಲು ಶುರುವಾಗಿದ್ದು ಕಳೆದ ಡಿಸೆಂಬರ್​ನಲ್ಲಿ. ವಸಿಷ್ಠ ಸೊಸೈಟಿ ತನ್ನ ಠೇವಣಿದಾರರಿಗೆ ಮೆಚ್ಯೂರಿಟಿ ಹಣ, ಮೆಚ್ಯೂರಿಟಿ ಹಣದ ಮೇಲಿನ ಬಡ್ಡಿ ಹಣವನ್ನು ನೀಡದೇ ಕಳ್ಳಾಟ ಆಡತೊಡಗಿದೆ. ಠೇವಣಿದಾರು ಕೇಳಿದರೆ ಕೊರೊನಾ ಲಾಕ್​ಡೌನ್ ನೆಪ ಹೇಳಿ ಸೊಸೈಟಿ ನೀಡಿರುವ ಸಾಲಗಳು ಲಾಕ್​ಡೌನ್​ನಿಂದಾಗಿ ಮರು ಪಾವತಿಯಾಗುತ್ತಿಲ್ಲ ಎಂದು ವಾಸ್ತವವೋ ಅಥವಾ ಸಬೂಬು ಹೇಳಿ, ಒಬ್ಬೊಬ್ಬರಾಗಿ ಠೇವಣಿದಾರರನ್ನು ಡಿಸೆಂಬರ್​ನಿಂದ ದೂರವಿಡತೊಡಗಿದೆ ಹನುಮಂತನಗರದ ವಸಿಷ್ಠ ಕ್ರೆಡಿಟ್ ಸೊಸೈಟಿ.

ಬ್ಯಾಂಕ್ ಮುಖ್ಯಸ್ಥರಾದ ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ವಿರುದ್ದ ಜೋರಾದ ವಂಚನೆ ಆರೋಪ ಕೇಳಿಬಂದಿದೆ. ಅದಾಗಲೇ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ವಶಿಷ್ಠ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ. FIR ಆದ ತಕ್ಷಣ ಆರೋಪಿಗಳಿಬ್ಬರು ಎಸ್ಕೇಪ್ ಆಗಿದ್ದಾರೆ. ವೆಂಕಟನಾರಾಯಣ ಮತ್ತು ಕೃಷ್ಣ ಪ್ರಸಾದ್ ಪರಾರಿಯಾದವರು.

ಹನುಮಂತನಗರ ಠಾಣೆ ಪೊಲೀಸರು ಈಗ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಹಣದ ವಹಿವಾಟು ನಡೆಸಿದ್ದ ಸದರಿ ಸೊಸೈಟಿಯು ಜನಪ್ರಿಯ ವಿಶ್ವೇಶ್ವರಯ್ಯ ಕೋ‌ಅಪರೇಟಿವ್ ಬ್ಯಾಂಕ್ ಅಧೀನದಲ್ಲಿತ್ತು.

KRISHNA Prasad fraud to depositors of Sri Vashishta Credit Souharda Sahakari Niyamita in Hanumantha Nagar bangalore

ಕೃಷ್ಣ ಪ್ರಸಾದ್, ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಸೊಸೈಟಿ

VENKATNARAYANA fraud to depositors of Sri Vashishta Credit Souharda Sahakari Niyamita in Hanumantha Nagar bangalore

ವೆಂಕಟನಾರಾಯಣ, ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ಧ ಸಹಕಾರಿ ನಿಯಮಿತ ಸೊಸೈಟಿ

Sri Vashishta Credit Souharda Sahakari Niyamita 3

ಸ್ಥಳಿಯ ಶಾಸಕ ರವಿಸುಬ್ರಮಣ್ಯ ಜೊತೆ ಮಾತುಕತೆ ನಂತರ ಎಫ್ಐಆರ್ ಶಾಸ್ತ್ರ: ಎಫ್ಐಆರ್ ಮಾಡುವುದಕ್ಕೂ ಮುನ್ನ ಸ್ಥಳಿಯ ಶಾಸಕ ರವಿಸುಬ್ರಮಣ್ಯ ಜೊತೆ ಮಾತುಕತೆ ನಡೆದಿದೆ. ಕೆಲವು ದಿನ ಕಾಲಾವಕಾಶ ನೀಡುವಂತೆ ಹೂಡಿಕೆದಾರರಿಗೆ ರವಿಸುಬ್ರಮಣ್ಯ ಹೇಳಿದ್ದರಂತೆ. ಶಾಸಕರ ಮಾತಿಗೂ ಬೆಲೆ ಕೊಡದೆ, ಹೂಡಿಕೆ ಹಣ ವಾಪಸ್ ನೀಡದಿದ್ದಾಗ ಇದೀಗ ಎಫ್ಐಆರ್ ಶಾಸ್ತ್ರ ನಡೆದಿದೆ.

(crores of rupees fraud to depositors of Sri Vashishta Credit Souharda Sahakari Niyamita in Hanumantha Nagar bangalore)

Published On - 9:59 am, Mon, 28 June 21