AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Silver Price: ಚಿನ್ನ, ಬೆಳ್ಳಿ ದರ ಸ್ಥಿರ; ಪ್ರಮುಖ ನಗರಗಳಲ್ಲಿ ಆಭರಣಗಳ ಬೆಲೆ ಎಷ್ಟಿದೆ ಗೊತ್ತಾ?

Gold Rate Today: ತಿನಿತ್ಯ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? ಎಂಬ ಕುರಿತಾಗಿ ಕುತೂಹಲ ಇರುತ್ತದೆ. ಹೀಗಿರುವಾಗ ಇಂದು (ಜನವರಿ 31, ಸೋಮವಾರ) ಚಿನ್ನ, ಬೆಳ್ಳಿ ದರ ದೇಶದ ನಗರಗಳಲ್ಲಿ ಸ್ಥಿರವಾಗಿದ್ದು, ಯಾವ ಯಾವ ನಗರಗಳಲ್ಲಿ ಎಷ್ಟಿದೆ? ಎಂಬ ವಿವರ ಈ ಕೆಳಗಿನಂತಿದೆ.

Gold Silver Price: ಚಿನ್ನ, ಬೆಳ್ಳಿ ದರ ಸ್ಥಿರ; ಪ್ರಮುಖ ನಗರಗಳಲ್ಲಿ ಆಭರಣಗಳ ಬೆಲೆ ಎಷ್ಟಿದೆ ಗೊತ್ತಾ?
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:Jan 31, 2022 | 9:48 AM

Share

Gold and Silver Price Today| ಬೆಂಗಳೂರು: ಚಿನ್ನ, ಬೆಳ್ಳಿ ಕೊಳ್ಳುವುದೆಂದರೆ ಎಲ್ಲರಿಗೂ ಆಸಕ್ತಿಯ ವಿಷಯ. ಅದರಲ್ಲೂ ಮಹಿಳೆಯರಿಗೆ ಹೊಸ ಹೊಸ ಶೈಲಿಯ ಆಭರಣಗಳನ್ನು ಖರೀದಿಸಬೇಕು ಎಂಬ ಬಯಕೆ ಸದಾ ಇರುತ್ತದೆ. ಇದಕ್ಕಾಗಿಯೇ ತಾವು ವೃತ್ತಿ ಜೀವನಕ್ಕೆ ಕಾಲಿಟ್ಟನಂತರ ಒಡವೆ ಮಾಡಿಸಲು ಒಂದಷ್ಟು ಹಣ ಕೂಡಿಡುತ್ತಾರೆ. ಕೇವಲ ಆಭರಣದ ದೃಷ್ಟಿಯಿಂದಲ್ಲದೇ ಹೂಡಿಕೆಯ ರೂಪದಲ್ಲಿಯೂ ಚಿನ್ನ ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೇ ಬಹಳಷ್ಟು ಜನರಿಗೆ ಆಪತ್ಕಾಲದಲ್ಲಿ ಸಕಾಲಕ್ಕೆ ಆಪತ್ಬಾಂಧವನಾಗಿ ಒದಗುವುದು ಕೂಡಿಟ್ಟ ಆಭರಣಗಳು. ಆದರೆ ಆಭರಣಗಳ ಖರೀದಿಗೆ ಸರಿಯಾದ ಸಮಯ ಯಾವುದು ಎಂಬ ಬಗ್ಗೆ ಮಾತ್ರ ಗೊಂದಲ ಇರುತ್ತದೆ. ಹೀಗಾಗಿ ಚಿನ್ನ, ಬೆಳ್ಳಿ ಖರೀದಿಸುವ ಮುನ್ನ ದರ ನಿಗದಿಯ ಬಗ್ಗೆ ಒಮ್ಮೆ ಪರಿಶೀಲಿಸಿ. ಪ್ರತಿನಿತ್ಯ ಚಿನ್ನ (Gold price), ಬೆಳ್ಳಿ ಬೆಲೆ (Silver Price) ಎಷ್ಟಿದೆ? ಎಂಬ ಕುರಿತಾಗಿ ಕುತೂಹಲ ಇರುತ್ತದೆ. ಹೀಗಿರುವಾಗ ಇಂದು (ಜನವರಿ 31, ಸೋಮವಾರ) ಚಿನ್ನ, ಬೆಳ್ಳಿ ದರ ದೇಶದ ನಗರಗಳಲ್ಲಿ ಸ್ಥಿರವಾಗಿದ್ದು, ಯಾವ ಯಾವ ನಗರಗಳಲ್ಲಿ ಎಷ್ಟಿದೆ? ಎಂಬ ವಿವರ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price)

ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,000 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,50,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,000 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,90,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೆಳ್ಳಿ ದರ ಕೂಡ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 65,500 ರೂಪಾಯಿ ದಾಖಲಾಗಿದೆ.

ಚೆನ್ನೈನಲ್ಲಿ ಚಿನ್ನ, ಬೆಳ್ಳಿ ದರ (Chennai Gold Price)

ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,330 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,300 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,450 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,94,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಚೆನ್ನೈನಲ್ಲಿ ಬೆಳ್ಳಿ ದರ ಕೂಡ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 66,500 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್​ನಲ್ಲಿ ಚಿನ್ನ, ಬೆಳ್ಳಿ ದರ (Hyderabad Gold Price)

ಹೈದರಾಬಾದ್​ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,000 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,50,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,100 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,91,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದೇ ರೀತಿ ಬೆಳ್ಳಿ ದರ ಕೂಡ ಸ್ಥಿರವಾಗಿದ್ದು, ಕೆಜಿ ಬೆಳ್ಳಿಗೆ 65,500 ರೂಪಾಯಿ ನಿಗದಿಯಾಗಿದೆ.

ಮುಂಬೈನಲ್ಲಿ ಚಿನ್ನ, ಬೆಳ್ಳಿ ದರ (Mumbai Gold price)

ಮುಂಬೈನಲ್ಲಿ ಇಂದು 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,000 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,50,000 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,090 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,90,900 ರೂಪಾಯಿ ನಿಗದಿಯಾಗಿದೆ. ಸುಮಾರು 900 ರೂಪಾಯಿಯಷ್ಟು ಏರಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಕೊಂಚ ಏರಿಕೆ ಕಂಡಿದ್ದು, ಕೆಜಿ ಬೆಳ್ಳಿಗೆ 61,200 ರೂಪಾಯಿ ನಿಗದಿಯಾಗಿದೆ. ಸುಮಾರು 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

ಇದನ್ನೂ ಓದಿ: Gold and Silver Price: ಬೆಂಗಳೂರು ಸಹಿತ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಇಳಿಕೆ; ದರ ವಿವರ ಇಲ್ಲಿದೆ ಪರಿಶೀಲಿಸಿ

Gold and Silver Price: ಇಳಿಕೆಯತ್ತಲೇ ಸಾಗುತ್ತಿದೆ ಚಿನ್ನ, ಬೆಳ್ಳಿ ಬೆಲೆ; ಆಭರಣ ಖರೀದಿಸುವ ಬಯಕೆ ಇದ್ದರೆ ಇಲ್ಲಿದೆ ದರ ವಿವರ

Published On - 7:19 am, Mon, 31 January 22

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ