ಬೆಂಗಳೂರು: ನಗರದಲ್ಲಿ ಚಿನ್ನದ ದರ ಸತತ ಎರಡು ದಿನಗಳಿಂದ ಇಳಿಕೆಯ ಹಾದಿ ಹಿಡಿದಿತ್ತು. ನಿನ್ನೆ (ಮಾರ್ಚ್ 24) ಗಣನೀಯವಾಗಿ ಇಳಿಕೆಯತ್ತ ಸಾಗಿತ್ತು. ಇಂದು (ಮಾರ್ಚ್ 25) ಚಿನ್ನ ಹಾಗೂ ಬೆಳ್ಳಿ ದರವನ್ನು ದೈನಂದಿನ ದರ ಪರಿಶೀಲನೆಯಲ್ಲಿ ಗಮನಿಸಿದಾಗ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಹಾಗಿದ್ದಾಗ ಚಿನ್ನ, ಬೆಳ್ಳಿ ಯಾವ ದರ ಕಾಯ್ದುಕೊಂಡಿದೆ? ಮಾರುಕಟ್ಟೆಯಲ್ಲಿ ದರ ಹೇಗಿದೆ? ಎಂಬುದನ್ನು ತಿಳಿಯೋಣ.
ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಚಿನ್ನ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಚಿನ್ನ ದರ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. 22 ಕ್ಯಾರೆಟ್ ಚಿನ್ನ ದರ 10 ಗ್ರಾಂಗೆ 41,900 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನ 45,700 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.
ನಿಮ್ಮ ಪ್ರಿಯತಮನಿಗೆ ಪ್ರೀತಿಯಿಂದ ಚಿನ್ನ ಕೊಡಿಸಬೇಕು ಎಂಬ ಆಸೆ ಇದೆಯಾ? ಹುಟ್ಟು ಹಬ್ಬವೋ.. ಅಥವಾ ಸರ್ಪ್ರೈಸ್ ಗಿಫ್ಟ್ ಕೊಟ್ಟು ಅವರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗಬೇಕೆ. ಹಾಗಾದ್ರೆ ಚಿನ್ನ ಕೊಳ್ಳಲೇ ಬೇಕು ಎಂದು ತೀರ್ಮಾನಿಸಿದ್ದಾಗ ದರ ಮಾಹಿತಿ ತಿಳಿದುಕೊಳ್ಳುವುದು ಉತ್ತಮ ಅಲ್ಲವೇ? ನೀವು ಕೂಡಿಟ್ಟ ಹಣದಲ್ಲಿ ಪ್ರೀತಿಯಿಂದ ನಿಮ್ಮ ಪ್ರೇಯಸಿಗೆ ಅಥವಾ ಪ್ರಿಯತಮನಿಗೆ ಚಿನ್ನ ಕೊಡಿಸುವಾಗ ಇಂದಿನ ದರ ಹೀಗಿದೆ.
ಚಿನ್ನ ಮತ್ತು ಬೆಳ್ಳಿ ದರವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುವ ದರ ಬದಲಾವಣೆ ಜೊತೆಗೆ ಸ್ಥಳೀಯ ತೆರಿಗೆ ನೀತಿಯ ಆಧಾರದ ಮೇಲೆ ಬದಲಾವಣೆ ಆಗುತ್ತದೆ. ಕೊರೊನಾ ಸಾಂಕ್ರಾಮಿಕ ದೇಶದಲ್ಲಿ ಕಡಿಮೆಯಾಗುತ್ತಿದ್ದಂತೆ ಗರಿಷ್ಠ ಮಟ್ಟದಲ್ಲಿ ಏರಿ ಕುಳಿತಿದ್ದ ಚಿನ್ನ ದರ ಇಳಿಕೆಯ ಹಾದಿ ಹಿಡಿಯಿತು. ನಂತರ ಚಿನ್ನ ದರ ಏರಿಳಿತ ಕಂಡರು ಕೂಡಾ ಕಳೆದ ವರ್ಷದ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಪರಿಶೀಲಿಸಿದಾಗ ಚಿನ್ನ ಕುಸಿದಿದೆ ಎಂದು ವಿಶ್ಲೇಷಿಸಬಹುದು. ಚಿನ್ನ ಇನ್ನೂ ಇಳಿಕೆಯತ್ತ ಸಾಗಬಹುದು. ಆ ನಿರೀಕ್ಷೆಯಲ್ಲಿದ್ದೇವೆ ಎಂಬುದು ಗ್ರಾಹಕರ ಮಾತು.
22 ಕ್ಯಾರೆಟ್ ಚಿನ್ನ ಮಾಹಿತಿ
ದೈನಂದಿನ ದರ ಬದಲಾವಣೆಯನ್ನು ಪರಿಸೀಲಿಸಿದಾಗ 1 ಗ್ರಾಂ ಚಿನ್ನ ದರ 4,190 ರೂಪಾಯಿ ಇದೆ. 8 ಗ್ರಾಂ ಚಿನ್ನ ದರ 33,520 ರೂಪಾಯಿ ಇದೆ. 10 ಗ್ರಾಂ ಚಿನ್ನ 41,900 ರೂಪಾಯಿ ಇದೆ ಹಾಗೆಯೇ 100 ಗ್ರಾಂ ಚಿನ್ನ 4,19,000 ರೂಪಾಯಿ ಇದೆ.
24 ಕ್ಯಾರೆಟ್ ಚಿನ್ನ ಮಾಹಿತಿ
ದೈನಂದಿನ ದರ ಪರಿಶೀಲನೆಯ ನಂತರ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಕಾರಣ ದರ ಸ್ಥಿರತೆಯನ್ನು ಕಾಪಾಡಿಕೊಂಡಿದೆ. 1 ಗ್ರಾಂ ಚಿನ್ನ 4,570 ರೂಪಾಯಿ, 8 ಗ್ರಾಂ ಚಿನ್ನ 36,560 ರೂಪಾಯಿ, 10 ಗ್ರಾಂ ಚಿನ್ನ ದರ 45,700 ರೂಪಾಯಿ ಹಾಗೂ 100 ಗ್ರಾಂ ಚಿನ್ನ 4,57,000 ರೂಪಾಯಿ ಇದೆ.
ಬೆಳ್ಳಿ ದರ ಮಾಹಿತಿ
1 ಗ್ರಾಂ ಬೆಳ್ಳಿ ನಿನ್ನೆ 66. 50 ರೈಪಾಯಿಗೆ ಮಾರಾಟವಾಗಿತ್ತು. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಹಾಗಾಗಿ ಇಂದು ಇದೇ ದರವನ್ನು ಕಾಯ್ದಿರಿಸಿಕೊಂಡಿದೆ. 8ಗ್ರಾಂ ಬೆಳ್ಳಿ ದರ 532 ರೂಪಾಯಿ ಇದೆ. 10 ಗ್ರಾಂ ಬೆಳ್ಳಿ ದರ 665 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಬೆಳ್ಳಿ ದರ 66,650 ರೂಪಾಯಿ ಹಾಗೂ 1ಕೆಜಿ ಬೆಳ್ಳಿ ದರ 66,500 ರೂಪಾಯಿಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: Gold Price | ಚಿನ್ನದ ದರ ಸತತ ಇಳಿಕೆ; ಖರೀದಿಗೆ ಮುಂದಾದ ಗ್ರಾಹಕರು
Gold Price: ಗ್ರಾಹಕರಿಗೆ ಇಂದು ಖುಷಿ ಸುದ್ದಿ; ಚಿನ್ನದ ದರದಲ್ಲಿ ಇಳಿಕೆ